Apr 14, 2023, 4:14 PM IST
ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸೀಕ್ವೆಲ್ ಬಿಡುಗಡೆಯಾಗಿದೆ. 2020ರಲ್ಲಿ ಮೊದಲ ಭಾಗ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮೊದಲ ಭಾಗಕ್ಕೆ ದಿ ಕೇಸ್ ಆಫ್ ರಣಗಿರಿ ರಹಸ್ಯ ಎಂಬ ಟ್ಯಾಗ್‌ಲೈನ್ ಇತ್ತು. ಇದರ ಮುಂದುವರೆದ ಭಾಗ 'ಶಿವಾಜಿ ಸುರತ್ಕಲ್' – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ರಿಲೀಸ್ ಆಗಿದೆ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಿವಾಜಿ ಸೂರತ್ಕಲ್ ಪಾರ್ಟ್1 ನಲ್ಲಿ ನಟಿಸಿದಂತೆ ಪಾರ್ಟ್2 ನಲ್ಲೂ ರಾಧಿಕ ಗಮನಸೆಳೆಯಲಿದ್ದು . ಗೃಹಿಣಿ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ