ಶಾರುಖ್‌ ಖಾನ್, ವಿಜಯ್ , ಯಶ್ ಅಲ್ವೇ ಅಲ್ಲ! 280 ಕೋಟಿ ಸಂಭಾವನೆ ಪಡೆದ ಮೊದಲ ಸೌತ್ ಸ್ಟಾರ್ ಯಾರು ?

Nov 7, 2023, 10:10 AM IST

ಸಿನಿಮಾಗೆ ಇವ್ರು ಪಡಿಯೋ ಸಂಭಾವನೆ 280 ಕೋಟಿ. ಅದು ಶಾರುಖ್‌ ಖಾನ್‌  ಅಲ್ಲಾ. ಸಲ್ಮಾನ್ ಅಲ್ಲ, ಯಶ್, ಅಲ್ಲೂ ಅರ್ಜುನ್ ಅಲ್ಲವೇ ಅಲ್ಲ. ತಮ್ಮ 171ನೇ ಸಿನಿಮಾಗೆ ಇಡೀ ಭಾರತೀಯ ಚಿತ್ರರಂಗವಷ್ಟೆ ಅಲ್ಲ, ಇಡೀ ಏಷಿಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡಿಯೋ ಸ್ಟಾರ್ ಆಗಿ ರೆಕಾರ್ಡ್  ಮಾಡಿದ್ದಾರೆ. ಒನ್ ಅಂಡ್ ಓನ್ಲೀ ತಲೈವ ರಜಿನಿಕಾಂತ್(Rajinikanth) ಭಾರತದ ಅತಿ ಹೆಚ್ಚು ಸಂಭಾವನೆ ಪಡಿಯೋ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ತಮಿಳಿನ ಮೆಗಾಸ್ಟಾರ್ ರಜನಿಕಾಂತ್ ಅವರು 2023ರಲ್ಲಿ ತಮ್ಮ ವೃತ್ತಿಜೀವನದ ಅತಿದೊಡ್ಡ ಹಿಟ್‌ ನೀಡಿದ್ದಾರೆ. ರಜನಿಕಾಂತ್ ಅಭಿನಯದ ಇತ್ತೀಚಿನ ಚಿತ್ರ ಜೈಲರ್ ಸೂಪರ್ ಡ್ಯೂಪರ್ ಬ್ಲಾಕ್‌ಬಾಸ್ಟರ್‌ ಆಗಿದೆ. ಇದರ ಯಶಸ್ಸಿನಿಂದಾಗಿಯೇ ಅವರ ಮುಂದಿನ ಸಿನಿಮಾಗೆ ಬಾರೀ ಡಿಮ್ಯಾಂಡ್ ಬಂದಿದೆ. ರಜನಿಕಾಂತ್ ಪ್ರಸ್ತುತ ಲೋಕೇಶ್ ಕನಕರಾಜ್ ನಿರ್ದೇಶನದ 'ತಲೈವರ್ 171'(Thalaivar 171) ಸೇರಿದಂತೆ ಎರಡು ದೊಡ್ಡ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವು ಸಾಕಷ್ಟು ಸುದ್ದಿಯಲ್ಲಿದೆ. 2018ರಲ್ಲಿ ಬಿಡುಗಡೆಯಾದ 2.0 ನಂತರ ರಜನಿಕಾಂತ್ ಯಾವುದೇ ದೊಡ್ಡ ಹಿಟ್ ನೀಡಲು ವಿಫಲರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಪೇಟ್ಟಾ, ದರ್ಬಾರ್ ಅಥವಾ ಅಣ್ಣಾತ್ತೆ ಈ ಎಲ್ಲಾ ಚಿತ್ರಗಳು ಮಾಧ್ಯಮ ಹಿಟ್ ಆಗಿದ್ದವು. ಆದರೆ ಇತ್ತೀಚಿನ ಚಿತ್ರ ಜೈಲರ್(Jailer) ಹೈಯೆಸ್ಟ್ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. ಇದು ಪ್ರಸ್ತುತ ಜಾಗತಿಕವಾಗಿ ಎರಡನೇ ಅತಿ ದೊಡ್ಡ ಹಿಟ್ ತಮಿಳು ಚಿತ್ರವಾಗಿದೆ. ಈ ಎಲ್ಲಾ ರೋಚಕ ಸುದ್ದಿಗಳ ನಡುವೆ, ತಲೈವರ್ 171 ಗಾಗಿ ರಜನಿಕಾಂತ್ 260-280 ಕೋಟಿ ರೂಪಾಯಿಗಳನ್ನು ವಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ವೀಕ್ಷಿಸಿ:  ಶೂಟಿಂಗ್ ಮುಗಿಸಿ ಅನೌನ್ಸ್ ಆಗುತ್ತಾ ಯಶ್ 19 ಸಿನಿಮಾ ? ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ರಾ ರಾಕಿಂಗ್ ಸ್ಟಾರ್ ?