ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ದೇವರ ಹಾಗೆ ಪೂಜಿಸುತ್ತಿದ್ದಾರೆ. ಪುನೀತ್ ಕಳೆದುಕೊಂಡು ಅನೇಕ ತಿಂಗಳು ಕಳೆದರು ಅಪ್ಪು ನೆನಪು ಪದೇ ಪದೆ ಕಾಡುತ್ತಿದೆ. ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೊಬ್ಬ ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿ ಬರಲಿ, ಆರ್.ಸಿ.ಬಿ. ಕಪ್ ಗೆಲ್ಲಲಿ, ಈ ಸಲ ಕಪ್ ನಮ್ದೆ' ಬಾಳೆಹಣ್ಣಿನ ಮೇಲೆ ಬರೆದು ಸಿಡಿಗೆ ಎಸೆದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ದೇವರ ಹಾಗೆ ಪೂಜಿಸುತ್ತಿದ್ದಾರೆ. ಪುನೀತ್ ಕಳೆದುಕೊಂಡು ಅನೇಕ ತಿಂಗಳು ಕಳೆದರು ಅಪ್ಪು ನೆನಪು ಪದೇ ಪದೆ ಕಾಡುತ್ತಿದೆ. ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಕೋಟ್ಯಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ದೇವರ ದರ್ಶನದ ವೇಳೆ, ದೇವರ ಸನ್ನಿಧಾನಗಳಲ್ಲಿ, ರಥೋತ್ಸವದಲ್ಲಿ ಅಭಿಮಾನಿಗಳು ಅಪ್ಪು ಫೋಟೋ ಹಿಡಿದು ಪೂಜೆ ಮಾಡುತ್ತಿದ್ದಾರೆ. ದೇವರ ಸ್ಥಾನ ನೀಡಿದ್ದಾರೆ. ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೊಬ್ಬ ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿ ಬರಲಿ, ಆರ್.ಸಿ.ಬಿ. ಕಪ್ ಗೆಲ್ಲಲಿ, ಈ ಸಲ ಕಪ್ ನಮ್ದೆ' ಬಾಳೆಹಣ್ಣಿನ ಮೇಲೆ ಬರೆದು ಸಿಡಿಗೆ ಎಸೆದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಸಿಡಿಯಲ್ಲಿ ಈ ಘಟನೆ ನಡೆದಿದೆ. ಸಿಡಿ ಸುತ್ತುವ ವೇಳೆ ಸಿಡಿ ಮೇಲೆ ಬಾಳೆಹಣ್ಣು ಎಸೆದಿದ್ದಾರೆ. ಹಳವೀರಮ್ಮ ಸಿಡಿ ಮಹೋತ್ಸವದಲ್ಲಿ ಈ ಬಾಳೆಹಣ್ಣು ಸಿಕ್ಕಿದೆ.