‘ನನ್ನ ಸಿನಿಮಾಗೂ ಪ್ರಮೋಟ್ ಮಾಡಿ..’ ಸಿಕಂದರ್ ರಿಕ್ವೆಸ್ಟ್: ಸೋಲೊಪ್ಪಿಕೊಂಡ ಸಲ್ಮಾನ್.. ಸಹಾಯ ಕೇಳಿದ್ದು ಯಾರ ಬಳಿ?

‘ನನ್ನ ಸಿನಿಮಾಗೂ ಪ್ರಮೋಟ್ ಮಾಡಿ..’ ಸಿಕಂದರ್ ರಿಕ್ವೆಸ್ಟ್: ಸೋಲೊಪ್ಪಿಕೊಂಡ ಸಲ್ಮಾನ್.. ಸಹಾಯ ಕೇಳಿದ್ದು ಯಾರ ಬಳಿ?

Published : Apr 05, 2025, 04:49 PM ISTUpdated : Apr 05, 2025, 04:56 PM IST

ಸಿಕಂದರ್ ಸಿನಿಮಾದ ಬಜೆಟ್ 200 ಕೋಟಿ. ಅಲ್ಲಿಗೆ ನಿರ್ಮಾಪಕರಿಗೆ ದೊಡ್ಡ ನಷ್ಟ ಆಗಲಿದೆ. ಸಲ್ಮಾನ್ ಖಾನ್ ಹಾಕಿಕೊಂಡು ಸಿನಿಮಾ ಮಾಡಿ ನೂರಾರು ಕೋಟಿ ಲಾಭ ಮಾಡ್ತಿದ್ದ ನಿರ್ಮಾಪಕರು ಈಗ ನೂರಾರು ಕೋಟಿ ಕಳೆದುಕೊಳ್ಳೋ ಕಾಲ ಬಂದಿದೆ. 

ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಬಾಕ್ಸ್​ಆಫೀಸ್​​ನಲ್ಲಿ ಡಿಸಾಸ್ಟರ್ ಅನ್ನಿಸಿಕೊಂಡಿದೆ. 100 ಕೋಟಿ ಕ್ಲಬ್ ಸೇರಲಿಕ್ಕೂ ಪರದಾಡ್ತಾ ಇದೆ. ಈ ಹೀನಾಯ ಸೋಲು ಸಲ್ಮಾನ್​ಗೆ  ಸಖತ್ ಶಾಕ್ ತಂದಿದೆ. ಈ ನಡುವೆ ಸಂದರ್ಶನವೊಂದರಲ್ಲಿ ಸಲ್ಮಾನ್ ಮಾಡಿರೋ ಮಾತುಗಳು ಭಾರಿ ಚರ್ಚೆಗೆ ಕಾರಣ ಆಗಿವೆ. ಅಷ್ಟಕ್ಕೂ ಸಲ್ಮಾನ್ ಹೇಳಿದ್ದೇನು..? ಕಳೆದ ಭಾನುವಾರ ಈದ್ ಹಬ್ಬದ ದಿನ ತೆರೆಗೆ ಬಂದ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಬಾಕ್ಸಾಫೀಸ್​​ನಲ್ಲಿ ಡಿಸಾಸ್ಟರ್ ಅನ್ನಿಸಿಕೊಂಡಿದೆ. ಭಾನುವಾರ ರಿಲೀಸ್ ಆದ ಸಿನಿಮಾ ಮೊದಲರಡು ದಿನಗಳಲ್ಲಿ 50 ಕೋಟಿ ಗಳಿಸಿತ್ತು. ಆದ್ರೆ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂಗಳು ಬಂದಿದ್ದು, ಮೂರನೇ ದಿನದಿಂದಲೇ ಸಿನಿಮಾ ಜನರಿಲ್ಲದೇ ಡಲ್ ಆಯ್ತು. ಇದೀಗ 6 ದಿನಗಳಲ್ಲಿ 90 ಕೋಟಿ ಗಳಿಸಿರೋ ಸಿನಿಮಾ 100 ಕೋಟಿ ಗಳಿಸೋದಕ್ಕೂ ಪರದಾಡ್ತಾ ಇದೆ. 

ಸಿಕಂದರ್ ಸಿನಿಮಾದ ಬಜೆಟ್ 200 ಕೋಟಿ. ಅಲ್ಲಿಗೆ ನಿರ್ಮಾಪಕರಿಗೆ ದೊಡ್ಡ ನಷ್ಟ ಆಗಲಿದೆ. ಸಲ್ಮಾನ್ ಖಾನ್ ಹಾಕಿಕೊಂಡು ಸಿನಿಮಾ ಮಾಡಿ ನೂರಾರು ಕೋಟಿ ಲಾಭ ಮಾಡ್ತಿದ್ದ ನಿರ್ಮಾಪಕರು ಈಗ ನೂರಾರು ಕೋಟಿ ಕಳೆದುಕೊಳ್ಳೋ ಕಾಲ ಬಂದಿದೆ. ಸಲ್ಮಾನ್ ಖಾನ್ ಸೋಲೊಪ್ಪಿಕೊಂಡ್ರಾ..? ತನ್ನ ಸಿನಿಮಾ ಪ್ರಚಾರಕ್ಕೆ ಬನ್ನಿ ಅಂತ ಬೇರೆ ತಾರೆಯರ ಬಳಿ ಕೇಳಿಕೊಂಡ್ರಾ..? ಮೊದಲಿನ ಸಲ್ಮಾನ್ ಖದರ್ ನೋಡಿದವರು ಇದನ್ನ ಒಪ್ಪೋದು ಕಷ್ಟ. ಆದ್ರೆ ಇತ್ತೀಚಿಗೆ ಇಂಟರ್​ವ್ಯೂ ವೊಂದರಲ್ಲಿ ಸಲ್ಮಾನ್ ಈ ಮಾತುಗಳನ್ನ ಆಡಿದ್ದಾರೆ. ನಾನು ಬೇರೆಯವರ ಸಿನಿಮಾಗೆ ಪ್ರಚಾರ ಮಾಡ್ತಿನಿ. ಆದ್ರೆ ಬೇರೆ ತಾರೆಯರು ನನಗೆ ಸಪೋರ್ಟ್ ಮಾಡೋದಿಲ್ಲ. ಬಹುಶಃ ನನಗೆ ಸಪೋರ್ಟ್  ಬೇಕಿಲ್ಲ ಅಂದುಕೋತಾರೆ. ಅದು ತಪ್ಪು, ನನ್ನ ಸಿನಿಮಾಗಳಿಗೂ ಪ್ರಚಾರದ ಅಗತ್ಯ ಇದೆ. ಬಾಲಿವುಡ್​ ಮಂದಿ ತನ್ನ ಬೆಂಬಲಕ್ಕೆ ನಿಂತುಕೋಬೇಕು ಅನ್ನೋ ಮಾತು ಹೇಳಿದ್ದಾರೆ. 

ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಸಿನಿಮಾ ಬರುತ್ತೆ ಅಂದ್ರೆ ಅದಕ್ಕೆ ಪ್ರಚಾರದ ಅಗತ್ಯವೇ ಇರ್ತಾ ಇರ್ಲಿಲ್ಲ. ದೇಶಾದ್ಯಂತ ಥಿಯೇಟರ್ ತುಂಬಿ ತುಳುಕ್ತಾ ಇದ್ದವು. ನೂರು, ಇನ್ನೂರು ಕೋಟಿ ಕಲೆಕ್ಷನ್​ನ ಟ್ರೆಂಡ್ ಶುರುವಾಗಿದ್ದೇ ಸಲ್ಮಾನ್ ಖಾನ್ ಸಿನಿಮಾಗಳಿಂದ. ಆದ್ರೆ ಈಗ ಸೌತ್ ಸಿನಿಮಾಗಳೆದರು ಬಾಲಿವುಡ್​ ಡಲ್ ಹೊಡೀತಿದೆ. ಸಲ್ಮಾನ್ ಖಾನ್ ಮ್ಯಾಜಿಕ್ ಕೂಡ ಮಾಯವಾಗಿದೆ. ಸಲ್ಲುಮಿಯಾ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ನೆಲಕಚ್ತಾ ಇವೆ. ಸಲ್ಮಾನ್ ನಟನೆ ಬಗ್ಗೆಯೂ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂ ಬರ್ತಿವೆ. ಅದ್ರಲ್ಲೂ ಸಿಕಂದರ್ ಮೂವಿಯಂತೂ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಸೋ ಇಂಥಾ ಹೊತ್ತಲ್ಲಿ ಬಾಲಿವುಡ್ ಟೈಗರ್ ಸಲ್ಮಾನ್ ನನ್ನ ಸಿನಿಮಾಗೂ ಪ್ರಮೋಟ್ ಮಾಡಿ, ನಂಗೆ ಸಪೋರ್ಟ್ ಕೊಡಿ ಅಂತ ಕೇಳುವ ಕಾಲ ಬಂದಿದೆ. ಇದನ್ನ ನೋಡಿದ ಫ್ಯಾನ್ಸ್ ಹೇಗಿದ್ದ ಸಲ್ಲು ಹೇಗಾದ್ರೂ ಅಂತ ಬೇಸರ ವ್ಯಕ್ತಪಡಿಸ್ತಾ ಇದ್ದಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more