
ಕ್ಲ್ಯಾಪ್ ಬಾಯ್ ಆಗಿ 50 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಶೆಟ್ಟರು, ಇಂದು ಜಗತ್ತೇ ಮೆಚ್ಚಿದ ಗ್ಲೋಬಲ್ ಸ್ಟಾರ್ ರಿಷಬ್ ಶೆಟ್ಟಿ ಆಗಿ ಬೆಳೆದಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಿಂದ ಯಶಸ್ಸಿನ ಹಾದಿ ಹಿಡಿದ ಅವರ, ಸವಾಲುಗಳಿಂದ ಕೂಡಿದ ಈ ಪಯಣವೇ ಒಂದು ದಂತಕಥೆ.
ಸಿದ್ದಸೂತ್ರಗಳನ್ನ ಬದಿಗೊತ್ತಿ ಹೊಸ ಹೊಸ ಎಕ್ಸ್ಪೆರಿಮೆಂಟ್ ಮಾಡ್ತಾ ಹೋದ ರಿಷಬ್ , ಒಂದೊಂದೇ ಹೆಜ್ಜೆ ಬೇಳೀತಾ ಬೆಳೀತಾ ಇವತ್ತು ಗ್ಲೋಬಲ್ ಸ್ಟಾರ್ ಪಟ್ಟ ಪಡೆದಿದ್ದಾರೆ. ಅದ್ರಲ್ಲೂ ಕಾಂತಾರ ಚಾಪ್ಟರ್-1 ನೋಡಿದ ಮೇಲೆ ರಿಷಬ್ನ ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್ ಕೂಡ ಪ್ರಶಂಸಿಸ್ತಾ ಇದ್ದಾರೆ.