Jun 18, 2023, 5:47 PM IST
ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಏರುತ್ತೆ. ಸ್ಟಾರ್ ಕಲಾವಿದರನ್ನು ಹುಚ್ಚರಂತೆ ಪ್ರೀತಿಸುವ ಅಭಿಮಾನಿಗಳಿದ್ದಾರೆ. ಆದರೆ ಕೆಲವು ಬಾರಿ ಇದು ಅತಿರೇಕ ಎನಿಸುತ್ತದೆ. ಇಲ್ಲೊಬ್ಬ ಅಭಿಮಾನಿ ಹಾಗೆ ಮಾಡಿದ್ದಾರೆ. ಆದಿಪುರುಷ್ ಸಿನಿಮಾ ರಿಲೀಸ್ ಆದ ಖುಷಿಗೆ ಪ್ರಭಾಸ್ ಅಭಿಮಾನಿಯೊಬ್ಬ ನಡೆದುಕೊಂಡ ರೀತಿ ಶಾಕ್ ಎನಿಸಿದೆ. ಆದಿಪುರುಷ್ ಪೋಸ್ಟರ್ ಮುಂದೆಯೇ ಕೈ ಕೊಯ್ದುಕೊಂಡಿದ್ದಾರೆ. ಬಿಯರ್ ಬಾಟೆಲ್‌ನಲ್ಲೇ ಕೈ ಕೊಯ್ದುಕೊಂಡಿದ್ದಾನೆ. ರಕ್ತವನ್ನು ಪೋಸ್ಟರ್ ನಲ್ಲಿರುವ ಪ್ರಭಾಸ್ ಹಣೆಗೆ ಹಚ್ಚಿ ಜೈಕಾರ ಕೂಗ್ತಾ ಇದ್ದಾರೆ. ಪ್ರಭಾಸ್ ಅಭಿಮಾನಿಯ ವರ್ತನೆಗೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ.