Mar 3, 2023, 4:55 PM IST
ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೋಡಿ ಮತ್ತೆ ಸದ್ದು ಮಾಡ್ತಿದೆ. ಆದರೆ ಈ ಸಲ ಕಾಂಟ್ರವರ್ಸಿಯಿಂದಲ್ಲ. ಇದು ಸಿನಿಮಾ ಸಮಾಚಾರದಿಂದ, ಸಿನಿಮಾ ಅಂದಾಕ್ಷಣ ಇದ್ಯಾವುದೋ ರೆಗ್ಯುಲರ್ ಸಿನಿಮಾ ಅಂದ್ಕೋಬೇಡಿ. ಅದು ನರೇಶ್ ಪವಿತ್ರಾ ರಿಯಲ್ ಲವ್ ಸ್ಟೋರಿಯ ಸಿನಿಮಾದಿಂದ ಹೌದು, ರಿಯಲ್ ಪ್ರೇಮಿಗಳಾದ ನರೇಶ್ ಹಾಗುಇ ಪವಿತ್ರಾ ಲೋಕೇಶ್ರರಿಯಲ್ ಲವ್ ಸ್ಟೋರಿ ಈಗ ಸಿನಿಮಾ ಆಗ್ತಿದೆ. ಕಳೆದ ಡಿಸೆಂಬರ್ ತಿಂಗಳು 31ನೇ ತಾರೀಖು. ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ತಮ್ಮ ಪ್ರೀತಿಗೆ ಸಾಕ್ಷಿಯಾಗಿ ವಿಡಿಯೋವೊಂದನ್ನ ಹಂಚಿದ್ರು. ಯಾವುದೇ ಸಿನಿಮಾಗೆ ಕಮ್ಮಿ ಇಲ್ಲದಂತೆ ವಿಡಿಯೋ ಶೂಟ್ ಮಾಡಿಸಿ ತುಟಿಗೆ ತುಟಿ ಚುಂಬಿಸಿ ಹೊಸ ಜೀವನ ಶುರು ಮಾಡುತ್ತಿದ್ದೇವೆ ಅಂತ ಕಲ್ಯಾಣ ಕಥೆ ಹೇಳಿಕೊಂಡಿದ್ರು. ಇದನ್ನ ನೋಡಿದ ಮಂದಿ ಇವರಿಬ್ಬರ ಸ್ಟೋರಿಯನ್ನ ಸಿನಿಮಾ ಮಾಡಿದ್ರೆ ಪಕ್ಕಾ ಹಿಟ್ ಆಗುತ್ತೆ ಅಂತ ಕಮೆಂಟ್ ಮಾಡಿದ್ದು ಇದೆ. ಈಗ ಇವರಿಬ್ಬರ ರಿಯಲ್ ಲವ್ ಸ್ಟೋರಿ ತೆರೆ ಮೇಲೆ ಮೂಡಿ ಬರಲಿದೆ. ವಿಶೇಷ ಏನ್ ಗೊತ್ತಾ ಇಬ್ಬರ ಕಥೆಗೆ ನಾಯಕ ನಾಯಕಿಯಾಗಿ ನರೇಶ್ ಹಾಗು ಪವಿತ್ರಾ ಲೋಕೇಶ್ ಅವರೇ ನಟಿಸುತ್ತಿದ್ದಾರೆ.