Nabha Natesh: ದೊಡ್ಡ ಆಕ್ಸಿಡೆಂಟ್ ಬಳಿಕ ಮತ್ತೆ ಎದ್ದು ಬಂದ ನಭಾ ನಟೇಶ್ ! ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿ!

Nabha Natesh: ದೊಡ್ಡ ಆಕ್ಸಿಡೆಂಟ್ ಬಳಿಕ ಮತ್ತೆ ಎದ್ದು ಬಂದ ನಭಾ ನಟೇಶ್ ! ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿ!

Published : Apr 08, 2024, 11:00 AM IST

ಇನ್ನೇನು ಬಣ್ಣದ ಲೋಕದಲ್ಲಿ ಸೆಟ್ಲು ಆದ್ರು. ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ಸ್ಟಾರ್ ನಟಿ ಆಗೋದು ಗ್ಯಾರಂಟಿ ಅನ್ನುವಾಗ್ಲೇ ವಿಧಿ ಬೇರೆಯದ್ದೇ ಬರೆದಿತ್ತು. ದೊಡ್ಡ ಆಕ್ಸಿಡೆಂಟ್‌ನಿಂದ ಸಾವನ್ನೇ ಗೆದ್ದು ಬರಬೇಕಾಗಿತ್ತು. ಅವರೇ ಅಪ್ಪಟ ಕನ್ನಡತಿ, ತೆಲುಗು ಚಿತ್ರರಂಗದ ಹಾಟ್ ಬಾಂಬ್ ಅಂತ ಕರೆಸಿಕೊಂಡಿದ್ದ ನಭಾ ನಟೇಶ್.

ನಭಾ ನಟೇಶ್, ಈ ಹೆಸ್ರು ಕೇಳಿದ್ರೆ ಸಾಕು ಮನಸ್ಸು9 ವರ್ಷಗಳ ಹಿಂದೆ ಒರಳುತ್ತೆ. ಹೌದು, ವಜ್ರಕಾಯ ಸಿನಿಮಾ(Vajrakaya movie) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ಈಕೆ. ಮೊದಲ ಚಿತ್ರದಲ್ಲಿಯೇ ತಾನೋಬ್ಬ ಅದ್ಭುತ ನಟಿ ಅನ್ನೊದನ್ನ ಪ್ರೂವ್ ಮಾಡಿದಾಕೆ. ಆಕೆಯ ನಟನೆಯ ಇಡೀ ಕರುನಾಡೇ ಫಿದಾ ಆಗಿತ್ತು. ಕನ್ನಡದ ಪಟಾಕ ಅಂತ ಸೌಂಡ್ ಮಾಡಿದ್ರು. ಟಾಲಿವುಡ್(Tollywood) ಮಂದಿಗೇ ಕನ್ನಡದ ನಟಿಯರು ಅಂದ್ರೇ ಅದೇನೋ ಕ್ರೇಜ್.. ಇಲ್ಲಿ ಯಾವುದಾದ್ರು ಹೀರೋಯಿನ್ ಕ್ಲಿಕ್ ಆದ್ರೆ ಸಾಕು, ಆ ನಾಯಕಿಯನ್ನ ರೆಡ್‌ಕಾಪ್‌ರೇಟ್ ಹಾಕಿ ಬರಮಾಡಿಕೊಳ್ಳುತ್ತೆ. ಹಾಗೆಯೇ ನಭಾ ಕೂಡ ಟಾಲಿವುಡ್‌ಗೆ ಅದ್ದೂರಿಯಾಗಿ ಎಂಟ್ರಿಕೊಟ್ರು. ಇಸ್ಮಾರ್ಟ್ ಶಂಕರ್ ಸಿನಿಮಾದಲ್ಲಿ ನಭಾ ಸಕ್ಸಸ್ ಫುಲ್ ಆದ್ರು. ಇನ್ನೇನು ಟಾಲಿವುಡ್‌ನಲ್ಲಿ ನಭಾನದ್ದೇ(Nabha Natesh) ಆಳ್ವಿಕೆ ಶುರುವಾಗುತ್ತೆ ಅನ್ನುವಾಗ್ಲೇ ವಿಧಿ ಬೇರೆಯದ್ದೇ ಬರೆದಿದ್ದ. ಕಾರ್ ಆಕ್ಸಿಡೆಂಟ್‌ನಲ್ಲಿ ನಭಾ ಉಳಿದಿದ್ದೇ ಹೆಚ್ಚು. ಹಾಸಿಗೆ ಮೇಲೆ ಜೀವನ್ಮರಣದ ಹೋರಾಟ. ಇನ್ನೇನು ನಭಾ ಬದುಕೇ ಮುಗಿತು ಅಂದವರೆಷ್ಟೋ. ಆದ್ರೆ ನಭಾ ಮಾತ್ರ ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳಲೇ ಇಲ್ಲ. ತಾನು ಮತ್ತೆ ನಾಯಕಿ ಆಗ್ಲೇ ಬೇಕು ಅಂತಾ ನಿರ್ಧರಿಸಿದ್ರು. ಸತತ ಒಂದು ವರ್ಷಗಳ ಕಾಲ ಹೋರಾಡಿದ್ರು. ಅದರ ಪ್ರತಿಫಲವೇ ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಹೌದು, ತೆಲುಗು ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಕ್ರೇಜಿ ಪ್ಯಾನ್ ಇಂಡಿಯಾ(Pan India) ಪ್ರಾಜೆಕ್ಟ್ ಸ್ವಯಂಭು ಸಿನಿಮಾದ(Swayambhu Movie) ಶೂಟಿಂಗ್ ಭರದಿಂದ ಸಾಗುತ್ತಿದೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಈ ಚಿತ್ರದ ಮೂಲಕ ವಜ್ರಕಾಯದ ಪಟಾಕ ಕಂಬ್ಯಾಕ್ ಮಾಡುತ್ತಿದ್ದಾರೆ. ಸಣ್ಣ ಝಲಕ್ ಮೂಲಕ ಚಿತ್ರತಂಡ ಆಕೆಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ರಾಣಿಯಂತೆ  ಕಂಗೊಳಿಸುತ್ತಿರುವ ನಭಾ ಲುಕ್ ರಿವೀಲ್ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ:  Dhruva Sarja : ಧ್ರುವ ಸರ್ಜಾ ಕೊಡ್ತಾರೆ ಡಬಲ್ ಧಮಕಾ! ಒಂದೇ ವರ್ಷದಲ್ಲಿ ರಿಲೀಸ್ ಆಗ್ತಿದೆ ಎರಡು ಸಿನಿಮಾ!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್