Jun 21, 2024, 9:20 AM IST
ನಟ ದರ್ಶನ್(Darshan) ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದು, ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಸ್ಟಾರ್ ನಟನೊಬ್ಬ, ಇಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಈಗಿನ ಚಿತ್ರೋದ್ಯಮಕ್ಕೆ, ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯಾಗಿದೆ. ಆದ್ರೆ, ಇಂತಹದ್ದೇ ಕೊಲೆ(Murder) ಕೇಸ್ವೊಂದರಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ನಟನೊಬ್ಬ ಜೈಲು ಸೇರಿದ್ದ ಕಥೆ ಮತ್ತೆ ಮುನ್ನಲೆಗೆ ಬಂದಿದೆ. ಈ ತಮಿಳು ನಟ ಜೈಲು ಸೇರಿದ್ದು ಥೇಟ್ ಸಿನಿಮಾ ಕಥೆಯಂತೆಯೇ ಇದೆ. ಎಂಟು ದಶಕಗಳ ಹಿಂದಿನ ಈ ಘಟನೆ ಸೂಪರ್ ಸ್ಟಾರ್ ನಟನ ಚಿತ್ರಬದುಕನ್ನೇ ನುಂಗಿ ಹಾಕಿ ಬೀದಿಗೆ ಎಸೆದಿತ್ತು. ಮಾಯಾವರಂ ಕೃಷ್ಣಸಾಮಿ ತ್ಯಾಗರಾಜ ಭಾಗವತರು ಅಲಿಯಾಸ್ ಎಂ.ಕೆ. ತ್ಯಾಗರಾಜ ಭಾಗವತರ್(MK Thyagaraja Bhagavathar). ತಮಿಳು ಚಿತ್ರರಂಗದ ಮೊಟ್ಟಮೊದಲ ಸೂಪರ್ ಸ್ಟಾರ್. 1944ರಲ್ಲಿ ಟಾಲಿವುಡ್ನಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಮನೆಮಾತಾಗಿದ್ದವರು ಭಾಗವತರ್. ದುಬಾರಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟ. ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕರಾಗಿದ್ದ ಭಾಗವತರ್, ಸ್ವತಃ ತಾವೇ ಬರೆದು ಹಾಡುತ್ತಿದ್ದರು. ಅವರ ಸಂಗೀತ ಕಚೇರಿಗಳಿಗೆ ಇನ್ನಿಲ್ಲದ ಡಿಮ್ಯಾಂಡ್ ಇತ್ತು.
ಇದನ್ನೂ ವೀಕ್ಷಿಸಿ: ಕೊಲೆ ನಂತರ 12 ಸಾಕ್ಷಿಗಳ ನಾಶಕ್ಕೆ ದರ್ಶನ್ ಗ್ಯಾಂಗ್ ಯತ್ನ: ಪೊಲೀಸರಿಗೆ ಸಿಕ್ಕ ಸಾಕ್ಷಿಗಳು ಎಷ್ಟು ?