ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ KGF ನಟಿ ಶ್ರೀನಿಧಿ ಶೆಟ್ಟಿ ಈಗಲಾದ್ರೂ ಗೆಲ್ತಾರಾ?

ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ KGF ನಟಿ ಶ್ರೀನಿಧಿ ಶೆಟ್ಟಿ ಈಗಲಾದ್ರೂ ಗೆಲ್ತಾರಾ?

Published : Mar 25, 2025, 01:02 PM ISTUpdated : Mar 25, 2025, 01:06 PM IST

KGF ಸಿನಿಮಾದಂತಹ ಗ್ಲೋಬಲ್ ಹಿಟ್ ಸಿನಿಮಾದಲ್ಲಿ ನಟಿಸಿದ್ರೂ ಅದರ ನಾಯಕಿ ಶ್ರೀನಿಧಿ ಶೆಟ್ಟಿ ಲೈಫ್ ಮಾತ್ರ ಬದಲಾಗಲಿಲ್ಲ. ದೊಡ್ಡ ಆಫರ್​ಗಳ ಅವಕಾಶ ಸಿಗಲಿಲ್ಲ. ಸಿಕ್ಕ ಸಿನಿಮಾಗಳು ಗೆಲ್ಲಲಿಲ್ಲ. ಇದೀಗ ಹಿಟ್-3 ಸಿನಿಮಾ ಮೂಲಕ ಶ್ರೀನಿಧಿ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ರಾಕಿ ಗೆಳತಿ ಈ ಸಾರಿಯಾದ್ರೂ ಗೆಲ್ತಾಳಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. 

ಒಂದು ದೊಡ್ಡ ಗ್ಯಾಪ್ ಬಳಿಕ ಶ್ರೀನಿಧಿ ಶೆಟ್ಟಿ ಪ್ರತ್ಯಕ್ಷವಾಗಿದ್ದಾರೆ. ನಾನಿ ನಟನೆಯ ಹಿಟ್-3  ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ನಟಿಸಿದ್ದು, ಇದೀಗ ನಾನಿ-ಶ್ರೀನಿಧಿ ಇರುವ ಸಾಂಗ್ ಪ್ರೋಮೋ ರಿಲೀಸ್ ಆಗಿದೆ. ಕೆಜಿಎಫ್ ಬ್ಯೂಟಿನ ಬಹುಕಾಲದ ನಂತರ ನೋಡಿದ ಫ್ಯಾನ್ಸ್ ಅರೇ ಈ ಚೆಲುವೆ ಇಷ್ಟು ದಿನ ಎಲ್ಲೋಗಿದ್ರು ಅಂತ ಯೋಚನೆ ಮಾಡ್ತಾ ಇದ್ದಾರೆ.
ಅಸಲಿಗೆ ಕೆಜಿಎಫ್ 1 & 2 ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡಾಗ ಎಲ್ಲರೂ ಶ್ರೀನಿಧಿ ಅದೃಷ್ಟವನ್ನ ಕೊಂಡಾಡಿದ್ರು. ಈಕೆಯನ್ನ ಗೋಲ್ಡನ್ ಗರ್ಲ್ ಅಂತ ಕರೆದಿದ್ರು. ಆದ್ರೆ ಕೆಜಿಎಫ್ ನಂತರ ಶ್ರೀನಿಧಿ ಲೈಫ್​ನಲ್ಲಿ ಹೆಚ್ಚೆನೂ ಬದಲಾಗಲಿಲ್ಲ. ಚಿಯಾನ್ ವಿಕ್ರಂ ಜೊತೆ ನಟಿಸಿದ ಬಹುನಿರೀಕ್ಷೆಯ ಕೋಬ್ರಾ ಸಿನಿಮಾ ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿತು. ಅಲ್ಲಿಂದ ಕಾಣೆಯಾದ ಶ್ರೀನಿಧಿ   3 ವರ್ಷ ಕಾಣೆಯಾಗಿದ್ರು. ಅಸಲಿಗೆ ದೊಡ್ಡ ಪ್ರಾಜೆಕ್ಟ್​​ಗಳ ಹುಡುಕಾಟದಲ್ಲಿದ್ದ ಶ್ರೀನಿಧಿಗೆ ಸುದೀಪ್ ನಟನೆಯ 47ನೇ ಚಿತ್ರದಲ್ಲಿ ನಾಯಕಿಯಾಗೋ ಚಾನ್ಸ್ ಸಿಕ್ಕಿತ್ತು. ಆದ್ರೆ ಅದ್ಯಾಕೋ ಈ ಸಿನಿಮಾ ಸೆಟ್ಟೇರಲೇ ಇಲ್ಲ. ಶ್ರೀನಿಧಿ ಶಾಪ ಕಳೀಲಿಲ್ಲ. ಇದೀಗ ಹಿಟ್ -3 ಮೂಲಕ ನಾನಿ ಜೊತೆ ನಟಿಸಿ ಸಕ್ಸಸ್ ಹುಡುಕಾಟದಲ್ಲಿದ್ದಾಳೆ ರಾಕಿ ಗೆಳತಿ. ಶ್ರೀನಿಧಿಗೆ  ಈ ಸಾರಿಯಾದ್ರೂ ಗೆಲುವಿನ ನಿಧಿ ಸಿಕ್ಕುತ್ತಾ ಕಾದುನೋಡಬೇಕು.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more