ಬಾಲಿವುಡ್‌ನ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕಾರ್ತಿಕ್ ಆರ್ಯನ್ ಅವರ ಮಹಿಳಾ ಅಭಿಮಾನಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮುಂಬೈನಲ್ಲಿರುವ ಕಾರ್ತಿಕ್ ಆರ್ಯನ್ ಅವರ ನಿವಾಸದ ಮುಂದೆ ಅಂತಹ ಒಂದು ಘಟನೆ ನಡೆದಿದೆ. ಹೌದು! ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮನೆ ಮುಂದೆ ಬಂದ ಇಬ್ಬರು ಹುಡುಗಿಯರು, ಕಾರ್ತಿಕ್ ಹೆಸರೇಳಿ ಜೋರಾಗಿ ಕಿರುಚಿದ್ದಾರೆ.
ಕಾರ್ತಿಕ್ ಆರ್ಯನ್ (Kartik Aaryan) ಬಾಲಿವುಡ್‌ನ (Bollywood) ಯಂಗ್ ನಟ. ಚಾಕಲೇಟ್ ಹೀರೋ ಪಾತ್ರಗಳನ್ನೇ ಮಾಡಿರೋ ನಟ ಹೆಣ್ಮಕ್ಕಳ ಹಾಟ್ ಫೇವರೇಟ್. ಕರಣ್ ಜೋಹರ್ (Karan Johar) ಜೊತೆ ಸಿನಿಮಾ ವಿಚಾರ ತಕರಾರು ನಡೆದ ನಂತರ ಆರ್ಯನ್ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ ಟೌನ್‌ನ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕಾರ್ತಿಕ್ ಆರ್ಯನ್ ಅವರ ಮಹಿಳಾ ಅಭಿಮಾನಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮುಂಬೈನಲ್ಲಿರುವ ಕಾರ್ತಿಕ್ ಆರ್ಯನ್ ಅವರ ನಿವಾಸದ ಮುಂದೆ ಅಂತಹ ಒಂದು ಘಟನೆ ನಡೆದಿದೆ. ಹೌದು! ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮನೆ ಮುಂದೆ ಬಂದ ಇಬ್ಬರು ಹುಡುಗಿಯರು, ಕಾರ್ತಿಕ್ ಹೆಸರೇಳಿ ಜೋರಾಗಿ ಕಿರುಚಿದ್ದಾರೆ.
Yash KGF 2 ಹಾಡಿನ ಬಗ್ಗೆ ಹರಿದಾಡುತ್ತಿದೆ ಹೊಸ ವಿಷಯ!
ಪ್ಲೀಸ್.. ನಾವು ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಕೂಗಿದ್ದಾರೆ. 'ನಾವು ನಿಮ್ಮ ಅಭಿಮಾನಿ.. ನಿಮ್ಮನ್ನು ನೋಡಲು ಬಂದಿದ್ಧೇವೆ ಎಂದು ಹುಡುಗಿಯರು ಕಿರಿಚಿರುವುದನ್ನು ಅಲ್ಲೇ ಇದ್ದ ಮತ್ತೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಕಾರ್ತಿಕ್ ಆರ್ಯನ್ ಕೈ ಸೇರಿದೆ. ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಆರ್ಯನ್ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತಿದೆ. ಈ ಹುಡುಗಿಯರು ಕಿರುಚುವುದನ್ನು ಕಂಡು ಸ್ವತಃ ಕಾರ್ತಿಕ್ ಆರ್ಯನ್ ಮನೆಯಿಂದ ಹೊರಬಂದು ಇವರನ್ನು ಮಾತನಾಡಿಸಿದ್ದಾರೆ. ಜೊತೆಗೆ ಅವರ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment