Nov 20, 2022, 11:36 AM IST
ಅಂಕೋಲದ ದಹಿಂಕಾಲ ಉತ್ಸವದಲ್ಲಿ ಲಕ್ಷಾಂತರ ಜನರ ಮಧ್ಯೆ ಕಾಂತಾರಾ ಸ್ತಬ್ಧ ಚಿತ್ರ ಮೇಳೈಸಿದೆ. ಪಂಜುರ್ಲಿ ದೈವದ ಸ್ತಬ್ಧ ಚಿತ್ರ ಮಾಡಿ ಪ್ರದರ್ಶನ ಮಾಡಲಾಗಿದೆ. ಕಾಂತಾರ ಚಿತ್ರದಲ್ಲಿನ ರಿಷಬ್ ಶೆಟ್ಟಿಯ ಕ್ಲೈಮ್ಯಾಕ್ಸ್ ಆ್ಯಕ್ಟಿಂಗ್ ದೃಶ್ಯದ ಸ್ತಬ್ಧ ಚಿತ್ರ ಇದು. ರಿಷಬ್ ಶೆಟ್ಟಿಯೇ ನೈಜವಾಗಿ ಬಂದು ನಿಂತಂತೆ ಭಾಸವಾಗುತ್ತಿದ್ದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆದಿದ್ದು, ಕಲಾವಿದ ದಿನೇಶ್ ಮೇತ್ರಿ ಕೈಯಲ್ಲಿ ಈ ಸ್ತಬ್ಧಚಿತ್ರ ಅರಳಿದೆ. ಇದೀಗ ಸ್ತಬ್ಧ ಚಿತ್ರದ ವೀಡಿಯೋ ವೈರಲ್ ಆಗುತ್ತಿದೆ. ಹಾಗೂ ಕಾಂತಾರ ಸಿನಿಮಾ ಬಗ್ಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮನ ಮೆಚ್ಚಿ ಮಾತನಾಡಿದ್ದಾರೆ.
'ಆದಿಪುರುಷ್' ಟ್ರೋಲ್‌ಗೆ ಕೊನೆಗೂ ಮೌನ ಮುರಿದ ಕೃತಿ; ನಿರ್ದೇಶಕರ ಬಗ್ಗೆ ಹೆಮ್ಮೆ ಇದೆ ಎಂದ ನಟಿ