Nov 1, 2022, 6:42 PM IST
ಬೆಂಗಳೂರು: ಕನ್ನಡ ರಾಜ್ಯೋತ್ಸವದಂದೇ ಕನ್ನಡಿಗರ ಕಣ್ಮಣಿ, ಕೋಟ್ಯಾಂತರ ಜನರ ಪಾಲಿನ ಪ್ರೀತಿಯ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರು ಇಡೀ ರಾಜ್ಯದ ಜನತೆ ಹಾಗೂ ವಿಶ್ವದೆಲ್ಲೆಡೆ ಇರುವ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು.
ನಂತರ ಪುನೀತ್ (Punith Rajkumar) ಅವರ ಬಗ್ಗೆ ಮಾತನಾಡಿದ ಅವರು, ಪರಂಪರೆ ಹಾಗೂ ಉಪನಾಮ ಹಿರಿಯರಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಎಂಬುದು ಆತನ ಸ್ವಂತ ಸಂಪಾದನೆ, ಬರೀ ವ್ಯಕ್ತಿತ್ವದಿಂದ, ಕೇವಲ ನಗುವಿನಿಂದ ಸ್ವಂತ ಪ್ರತಿಭೆಯಿಂದ ರಾಜ್ಯವನ್ನು ಗೆದ್ದಿರುವ ಯಾರಾದರು ಇದ್ದರೆ ಅದು ಪುನೀತ್ ರಾಜ್ ಕುಮಾರ್ ಮಾತ್ರ ಎಂದು ಜ್ಯೂನಿಯರ್ ಎನ್‌ಟಿಆರ್ ಹೇಳಿದರು.ಒಬ್ಬ ತಂದೆ, ಒಬ್ಬ ನಟ, ಒಬ್ಬ ಡಾನ್ಸರ್ (Dancer) ಹೊರತಾಗಿ ಅವರೊಬ್ಬ ಉತ್ತಮ ವ್ಯಕ್ತಿತ್ವದ ವ್ಯಕ್ತಿ. ನಾನು, ನಾನು ಮಾಡಿದ ಸಾಧನೆಯ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ. ಕೇವಲ ಪುನೀತ್ ಅವರ ಒಬ್ಬ ಗೆಳೆಯನಾಗಿ ಇಲ್ಲಿಗೆ ಬಂದಿದ್ದೇನೆ. ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆಸಿರುವುದಕ್ಕೆ ಧನ್ಯವಾದ ಎಂದು ಜ್ಯೂನಿಯರ್ ಎನ್‌ಟಿಆರ್ ಹೇಳಿದರು.