ಮಾಡರ್ನ್ ಡ್ರೆಸ್‌ನಲ್ಲಿ ಸೂರ್ಯವಂಶದ ಸೊಸೆ: ‘ನೀರೆಲ್ಲಿ ಮೇಡಂ..?’ ಎಂದ ಪಾಂಡವಪುರ ಜನ

ಮಾಡರ್ನ್ ಡ್ರೆಸ್‌ನಲ್ಲಿ ಸೂರ್ಯವಂಶದ ಸೊಸೆ: ‘ನೀರೆಲ್ಲಿ ಮೇಡಂ..?’ ಎಂದ ಪಾಂಡವಪುರ ಜನ

Published : Jun 25, 2025, 06:07 PM ISTUpdated : Jun 25, 2025, 06:16 PM IST

ಸೂರ್ಯವಂಶದಲ್ಲಿ ಇಶಾ ಡಿಸಿಯಾಗಿ ಪಾಂಡವಪುರಕ್ಕೆ ನೀರು ಕೊಡಿಸೋ ದೃಶ್ಯ ಇದೆ. ಸೋ ಡಿಸಿ ಮೇಡಂ ನೀವು ಸಹಿ ಮಾಡಿ ಇಪ್ಪತ್ತಾರು ವರ್ಷ ಆಯ್ತು ಇನ್ನೂ ಪಾಂಡವಪುರಕ್ಕೆ ನೀರು ಬಂದಿಲ್ಲ ಅಂತ ಕೆಲವರು ಕಿಚಾಯಿಸಿದ್ದಾರೆ.

ಕೆಲವು ಸಿನಿಮಾಗಳು ತೆರೆಗೆ ಬಂದು ಅದೆಷ್ಟೇ ವರ್ಷ ಕಳೆದರು ಅವುಗಳ ಕುರಿತ ಚರ್ಚೆ ಮಾತ್ರ ನಿಲ್ಲೋದಿಲ್ಲ. ಸದ್ಯ ಅದೇ ರೀತಿ ಭಾರಿ ಚರ್ಚೆಯಲ್ಲಿರೋದು ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ. ಅಷ್ಟಕ್ಕೂ ಜನ ಸೂರ್ಯವಂಶನ ನೆನಪು ಮಾಡಿಕೊಂಡಿರೋದು ಸೂರ್ಯವಂಶದ ಸೊಸೆ ಇಶಾ ಕೊಪ್ಪಿಕರ್ ಕಾರಣಕ್ಕೆ. ನಿಮಗೆಲ್ಲಾ ಸೂರ್ಯವಂಶ ಸಿನಿಮಾ ನೆನಪಿದೆಯಲ್ವಾ..? ಯಾರ್ ತಾನೆ ಈ ಚಿತ್ರವನ್ನ ಮರೆಯೋದಕ್ಕೆ ಸಾಧ್ಯ. ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಂಡಿರೋ ಈ ಸಿನಿಮಾವನ್ನ ಕನ್ನಡದಲ್ಲಿ ಎಸ್.ನಾರಾಯಣ್ ನಿರ್ದೇಶನ ಮಾಡಿದ್ರು. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಮಿಂಚಿ ಮೋಡಿ ಮಾಡಿದ್ರು.

1999ರಲ್ಲಿ ಬಂದ ಸೂರ್ಯವಂಶ ಚಿತ್ರವನ್ನ ಈಗ ಮತ್ತೆ ಜನ ನೆನಪು ಮಾಡಿಕೊಳ್ತಾ ಇದ್ದಾರೆ. ಅದಕ್ಕೆ ಕಾರಣ ಸೂರ್ಯವಂಶದ ಸೊಸೆ ಪದ್ಮಕ್ಕ.. ಅರ್ಥಾತ್ ಇಶಾ ಕೊಪ್ಪಿಕರ್. ಬಾಲಿವುಡ್ ಬೆಡಗಿ ಇಶಾ ಕೊಪ್ಪಿಕರ್ ಈ ಸಿನಿಮಾದಲ್ಲಿ ನಾಯಕಿ ಪದ್ಮಾ ಪಾತ್ರ ಮಾಡಿದ್ರು. ಕನಕಮೂರ್ತಿ ಬಾಳಿನಲ್ಲಿ ಬೆಳಕು ತಂದು ಸೂರ್ಯವಂಶದ ಸೊಸೆಯಾಗಿ ಬೆಳಗುವ ತೂಕದ ಪಾತ್ರ ಮಾಡಿದ್ರು. ಇಶಾ ಇನ್ನೂ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಜನಕ್ಕೆ ಸೂರ್ಯವಂಶನೇ ಆಲ್ ಟೈಂ ಫೆವರೀಟು. ಇಂಥಾ ಇಶಾ ಮೊನ್ನೆ ಸೋಷಿಯಲ್ ಮಿಡಿಯಾದಲ್ಲಿ ಮಾಡರ್ನ್ ಡ್ರೆಸ್​ನಲ್ಲಿ ಒಂದು ಬೋಲ್ಡ್ ಆಗಿರೋ ಫೋಟೋ ಹಾಕಿದ್ದಾರೆ.

ಅದನ್ನ ನೋಡಿದ ಜನ ತಹರೇವಾರಿ ಕಾಮೆಂಟ್ ಮಾಡ್ತಾ ಇದ್ದಾರೆ. ಸೂರ್ಯವಂಶದಲ್ಲಿ ಇಶಾ ಡಿಸಿಯಾಗಿ ಪಾಂಡವಪುರಕ್ಕೆ ನೀರು ಕೊಡಿಸೋ ದೃಶ್ಯ ಇದೆ. ಸೋ ಡಿಸಿ ಮೇಡಂ ನೀವು ಸಹಿ ಮಾಡಿ ಇಪ್ಪತ್ತಾರು ವರ್ಷ ಆಯ್ತು ಇನ್ನೂ ಪಾಂಡವಪುರಕ್ಕೆ ನೀರು ಬಂದಿಲ್ಲ ಅಂತ ಕೆಲವರು ಕಿಚಾಯಿಸಿದ್ದಾರೆ. ಇನ್ನೂ ಕೆಲವರು ಸೂರ್ಯವಂಶದ ಸೊಸೆಯಾಗಿ ಇಂಥಾ ಡ್ರೆಸ್ ಹಾಕಿದ್ದೀರಲ್ಲ , ಇದು ಸರಿಯಲ್ಲ ಅಂತ ಸೀರಿಯಸ್ ಆಗಿ ಕಾಮೆಂಟ್ ಹಾಕಿದ್ದಾರೆ. ಒಟ್ನಲ್ಲಿ ಇಶಾ ಫೋಟೋಗೆ ಒಂದಕ್ಕಿಂತ ಇಂದು ಮಜವಾದ ಕಾಮೆಂಟ್ಸ್ ಬಂದಿವೆ. ಒಟ್ನಲ್ಲಿ ಸೂರ್ಯವಂಶ ಸಿನಿಮಾ ತೆರೆಗೆ ಬಂದು 26 ವರ್ಷವಾದ್ರೂ ಜನ ಅದರ ಗುಂಗಿಂದ ಹೊರಬಂದಿಲ್ಲ. ಈಗಲೂ ಇಶಾನ ಸೂರ್ಯವಂಶ ಸೊಸೆ ಅಂತಾನೆ ಕರೀತಾ ಇದ್ದಾರೆ. ಸದ್ಯ ಇಶಾಗೆ ತಮಗೆ ಬರ್ತಾ ಇರೋ ಕಾಮೆಂಟ್ಸ್ ನೋಡಿ ದಂಗಾಗಿದ್ದಾರೆ.

03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
Read more