ಬಾಯ್‌ಫ್ರೆಂಡ್ ಜೊತೆ ಕೆಫೆಯಲ್ಲಿ ಕಾಣಿಸಿಕೊಂಡ ಆಮೀರ್ ಖಾನ್ ಪುತ್ರಿ ಇರಾ

Jul 27, 2022, 2:46 PM IST

ಖ್ಯಾತ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಬಾಯ್ ಫ್ರೆಂಡ್ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ಇರಾ ಖಾನ್ ಹೆಚ್ಚಾಗಿ ಬಾಯ್ ಫ್ರೆಂಡ್ ನೂಪೂರ್ ಶಿಖಾರೆ ಜೊತೆಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಇರಾ ಮತ್ತು ನೂಪೂರ್ ಇಬ್ಬರು ಮುಂಬೈ ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಕೆಫೆಗೆ ಎಂಟ್ರಿ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫಿಟ್ನೆಸ್ ಕೋಚ್ ನೂಪೂರ್ ನೀಲಿ ಸ್ಲೀವ್ ಲೆಸ್ ಟಿ ಶರ್ಟ್ ಧರಿಸಿದ್ದರು. ನಿರಾ ಖಾನ್ ಕಪ್ಪು ಮತ್ತು ಬಿಳಿ ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಕೆಫೆಗೆ ಎಂಟ್ರಿ ಕೊಟ್ಟು ತಮಗೆ ಇಷ್ಟದ ತಿನಿಸನ್ನು ಆರ್ಡರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚಿಗಷ್ಟೆ ಇರಾ ಖಾನ್ ಬಾಯ್ ಫ್ರೆಂಡ್ ನೂಪೂರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು,. ಬಿಕಿನಿ ಧರಿಸಿ ಬರ್ತಡೇ ಆಚರಿಸಿದ ಇರಾ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.