'ಕಾಂತಾರ' ದೈವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಗೋವಾ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಎದುರೇ ದೈವಕ್ಕೆ ಅವಮಾನ ಮಾಡಿದ್ದಾರೆ ಎಂದು ವಕೀಲರೊಬ್ಬರು ದೂರು ನೀಡಿದ್ದಾರೆ.
ಕಾಂತಾರ ದೈವದ ವಿಚಾರದಲ್ಲಿ ಅವಹೇಳನ ಹಿನ್ನೆಲೆ ಬೆಂಗಳೂರಿನಲ್ಲಿ ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಕೀಲ ಪ್ರಶಾಂತ್ ಎಂಬುವವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಶಾಂತ್ ಅವರು ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಫ್‌ಐಆರ್ ಪ್ರತಿ ಲಭ್ಯವಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 ಧಾರ್ಮಿಕ ಭಾವನೆಗೆ ಧಕ್ಕೆ, ಸೆಕ್ಷನ್ 299 ಧಾರ್ಮಿಕ ಭಾವನೆ ಕೆರಳಿಸುವ ಕೃತ್ಯ, ಸೆಕ್ಷನ್ 302 ಮತ್ತೊಬ್ಬರ ಧಾರ್ಮಿಕ ಭಾವನೆ ನೋಯಿಸುವುದು, ಇವುಗಳಡಿ ಪ್ರಕರಣ ದಾಖಲಾಗಿದೆ. ಗೋವಾದ ಚಲನಚಿತ್ರೋತ್ಸವದಲ್ಲಿ ನಟ ರಣ್ವೀರ್ ಸಿಂಗ್ ದೈವಗಳ ಬಗ್ಗೆ ಅವಹೇಳನ ಮಾಡಿದ್ದರು. ಚಾಮುಂಡಿ ದೇವರನ್ನು Female Ghost ಎಂದು ಅನುಕರಿಸಿ ರಿಷಬ್ ಶೆಟ್ಟಿ ಎದುರಲ್ಲೇ ದೈವಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಡಿಟೇಲ್ ಈ ವೀಡಿಯೋದಲ್ಲಿದೆ ನೋಡಿ..