ಬಿಗ್ ಸ್ಕ್ರೀನ್ ಮೇಲೆ ರಣಕಲಿಗಳ ಆಪರೇಷನ್ ಸಿಂದೂರ್: ಕನ್ನಡದಲ್ಲೂ ಟೈಟಲ್ ರಿಜಿಸ್ಟರ್!

ಬಿಗ್ ಸ್ಕ್ರೀನ್ ಮೇಲೆ ರಣಕಲಿಗಳ ಆಪರೇಷನ್ ಸಿಂದೂರ್: ಕನ್ನಡದಲ್ಲೂ ಟೈಟಲ್ ರಿಜಿಸ್ಟರ್!

Published : May 14, 2025, 05:27 PM IST

ಆಪರೇಷನ್ ಸಿಂದೂರ ಸಿನಿಮಾ ಅನೌನ್ಸ್ ಕೂಡ ಆಗಿದೆ. ಅಸಲಿಗೆ ನಮ್ಮ ಭಾರತಿಯ ಸೇನೆ  ಹೀಗೆ ಶತ್ರು ಸಂಹಾರ ಮಾಡಿದ ಅದೆಷ್ಟೋ ರಣ ರೋಚಕ ಅಧ್ಯಾಯ ಇವೆ. ಮತ್ತು ಅವುಗಳನ್ನು ನಮ್ಮ ಫಿಲ್ಮ್ ಮೇಕರ್ಸ್ ಅಷ್ಟೇ ರೋಚಕವಾಗಿ ಬಿಗ್ ಸ್ಕ್ರೀನ್ ಮೇಲೆ ತಂದಿದ್ದಾರೆ.

ಭಾರತೀಯ ಸೇನೆ ಅಪರೇಷನ್ ಸಿಂದೂರ ಹೆಸರಲ್ಲಿ ಪಾಕ್ ನೆಲಕ್ಕೆ ನುಗ್ಗಿ ಉಗ್ರರ ಸಂಹಾರ ಮಾಡಿದೆ. ಸದ್ಯ ವಿಶ್ವದೆಲ್ಲೆಡೆ ಸದ್ದು ಮಾಡಿರೋ ಈ ಹೆಸರಿನಲ್ಲಿ ಸಿನಿಮಾ ಮಾಡ್ಲಿಕ್ಕೆ ಫಿಲ್ಮ್  ಮೇಕರ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗ್ಲೇ ಆಪರೇಷನ್ ಸಿಂದೂರ ಸಿನಿಮಾ ಅನೌನ್ಸ್ ಕೂಡ ಆಗಿದೆ. ಅಸಲಿಗೆ ನಮ್ಮ ಭಾರತಿಯ ಸೇನೆ  ಹೀಗೆ ಶತ್ರು ಸಂಹಾರ ಮಾಡಿದ ಅದೆಷ್ಟೋ ರಣ ರೋಚಕ ಅಧ್ಯಾಯ ಇವೆ. ಮತ್ತು ಅವುಗಳನ್ನು ನಮ್ಮ ಫಿಲ್ಮ್ ಮೇಕರ್ಸ್ ಅಷ್ಟೇ ರೋಚಕವಾಗಿ ಬಿಗ್ ಸ್ಕ್ರೀನ್ ಮೇಲೆ ತಂದಿದ್ದಾರೆ. ನಮ್ಮ ಭಾರತಿಯ ಸೇನಾಪಡೆ ಇಡೀ ದೇಶವೇ ಹೆಮ್ಮೆ ಪಡುವಂಥ ಪರಾಕ್ರಮ ಮಾಡಿದೆ. ಶತೃದೇಶಕ್ಕೆ ನುಗ್ಗಿ ಉಗ್ರರ ನೆಲೆಗಳನ್ನ ದ್ವಂಸ ಮಾಡಿ ಬಂದಿದೆ. ಅಪರೇಷನ್ ಸಿಂದೂರ ಹೆಸರಿನ ಈ ಸೇನಾ ದಾಳಿ ಉಗ್ರರ ರಕ್ತ ಹರಿಸಿ ಭಾರತ ಮಾತೆಗೆ ಸಿಂಧೂರ ತೊಡಿಸಿದೆ. ಇದೀಗ ಈ ಕಹಾನಿಯನ್ನ ತೆರೆ ಮೇಲೆ ತರಲಿಕ್ಕೆ ಫಿಲ್ಮ್ ಮೇಕರ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. 

ಅಸಲಿಗೆ ಆಪರೇಷನ್ ಸಿಂದೂರ ಟೈಟಲ್ ನ ಪಡೆಯೋದಕ್ಕೆ ರಿಲಯನ್ಸ್ ಸೇರಿದಂತೆ ಹಲವು ದೊಡ್ಡ ಪ್ರೊಡಕ್ಷನ್ ಹೌಸ್​​ಗಳ ನಡುವೆ ಸ್ಪರ್ಧೆ ನಡೆದಿತ್ತು. ಫೈನಲಿ ನಿಕ್ಕಿ ವಿಕ್ಕಿ ಭಗ್ನಾನಿ ಫಿಲ್ಮ್ಸ್ ಆಪರೇಷನ್ ಸಿಂದೂರ ಹೆಸರಲ್ಲಿ ಸಿನಿಮಾ ಅನೌನ್ಸ್ ಮಾಡಿ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರೋ ಟೀಂ ಮುಂದಿನ ದಿನಗಳಲ್ಲಿ ಕಲಾವಿದರು ತಂತ್ರಜ್ಫರನ್ನ ಫೈನಲ್ ಮಾಡಲಿದೆಯಂತೆ. ಇನ್ನೂ ಕನ್ನಡದಲ್ಲಿ ಕೂಡ ಆಪರೇಷನ್ ಸಿಂದೂರ ಟೈಟಲ್ ರೆಜಿಸ್ಟರ್ ಆಗಿದೆ. ಸಾ.ರಾ ಗೋವಿಂದು ಈ ಟೈಟಲ್​​ನ ತಮ್ಮ ನಿರ್ಮಾಣ ಸಂಸ್ಥೆಗೆ ರೆಜಿಸ್ಟರ್ ಮಾಡಿಸಿದ್ದಾರೆ. 

ಇನ್ನೂ ಹೊಂಬಾಳೆ ಫಿಲ್ಮ್ಸ್​​ ಕೂಡ ಆಪರೇಷನ್ ಸಿಂದೂರ್ ಕುರಿತ ಸಿನಿಮಾ ಮಾಡೋ ಪ್ಲಾನ್​ನಲ್ಲಿದೆಯಂತೆ.  ಅಸಲಿಗೆ ನಮ್ಮ ಭಾರತಿಯ ಸೇನೆ ಮಾಡಿದ ಇಂತ ಹಲವು ರಣರೋಚಕ ಸಾಹಸಗಳನ್ನ ಅನೇಕ ಚಿತ್ರಗಳು ಬಿಗ್ ಸ್ಕ್ರೀನ್ ಮೇಲೆ ತೋರಿಸಿವೆ. ಭಾರತಿಯ ರೆಲ್ಲಾ ಹೆಮ್ಮೆ ಪಡುವಂತೆ ಮಾಡಿವೆ. ಇತ್ತೀಚಿಗೆ ಸದ್ದು ಮಾಡಿದ ಇಂಥಾ ಸಿನಿಮಾ ಅಂದ್ರೆ ಉರಿ ದೀ ಸರ್ಜಿಕಲ್ ಸ್ಟ್ರೈಕ್. ಪಂಜಾಬ್ ನ ಉರಿ ಯಲ್ಲಿ ಸೇನಾ ಶಿಬಿರದ ಮೇಲೆ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಮಾಡಿದ ಸರ್ಜಿಕಲ್ ಸ್ಟ್ರೈಕ್ ನ ಈ ಸಿನಿಮಾ ತೆರೆಗೆ ತಂದಿತ್ತು. ವಿಕ್ಕಿ ಕೌಶಲ ಮೇಜರ್ ವಿಹಾನ್ ಸಿಂಗ್ ಶೇರಗಿಲ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ರು. ಇನ್ನೂ 2019ರಲ್ಲಿ ನಡೆದ ಪುಲ್ವಾಮಾ ಅಟ್ಯಾಕ್  ಅದಕ್ಕೆ ಉತ್ತರವಾಗಿ ನಮ್ಮ ಸೇನೆ ಮಾಡಿದ ಏರ್ ಸ್ಟೈಕ್ ಕುರಿತ ರೋಚಕ ಕಹಾನಿ ಅಪರೇಷನ್ ವ್ಯಾಲೆಂಟೈನ್ ಸಿನಿಮಾ ತೆರೆಗೆ ತಂದಿತ್ತು. 

ನಮ್ಮ ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ಕೂಡಾ ಸರ್ಜಿಕಲ್ ಸ್ಟ್ರೈಕ್ ನ ಚಿಕ್ಕ ಎಪಿಸೋಡ್ ತೋರಿಸಲಾಗಿತ್ತು. ಕಿಚ್ಚ ಸುದೀಪ್ ಭಾರತಿಯ ಸೇನೆಯ ರಣಕಲಿಯಾಗಿ ಮಿಂಚಿದ್ರು. ತೆಲುಗಿನ ಮೇಜರ್ ಸಿನಿಮಾದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕಥೆಯಿತ್ತು. 26/11 ಉಗ್ರದಾಳಿಯ ಸಮಯದಲ್ಲಿ ಈ ವೀರ ಯೋಧ ದೇಶಕ್ಕಾಗಿ ಪ್ರಾಣತೆತ್ತ ಕಥೆಯನ್ನು ತೆರೆ ಮೇಲೆ ತರಲಾಗಿತ್ತು. ಇನ್ನೂ ಕಳೆದ ವರ್ಷ ತೆರೆಗೆ ಬಂದು ದೊಡ್ಡ ಯಶಸ್ಸು ಕಂಡ ಅಮರನ್ ಚಿತ್ರದಲ್ಲಿ ಮೇಜರ್ ಮುಕುಂದ ವರದರಾಜನ್ ಅವರ ಬಲಿದಾನದ ಕಥೆ ಹೇಳಗಿತ್ತು. ಶಿವಕಾರ್ತಿಕೆಯನ್ ಸಾಯಿ ಪಲ್ಲವಿ ನಟಿಸಿದ ಈ ಚಿತ್ರ ಅಂತೂ ನೋಡುಗರ ಕಣ್ಣಲ್ಲಿ ನೀರು ತರಿಸಿತ್ತು. ಇದೀಗ ಅಪರೇಷನ್ ಸಿಂಧೂರ ದೇಶದೆಲ್ಲೆಡೆ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಈ ಸಾಹಸಗಾಥೆ ಕೂಡಾ ತೆರೆ ಮೇಲೆ ಬರಲಿದೆ. ನಮ್ಮ ಸೇನಾನಿಗಳ ರಣ ರೋಚಕ ಸಾಹಸ ನೋಡೋದಕ್ಕೆ ಸಿಗಲಿದೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more