ಸ್ಯಾಂಡಲ್ವುಡ್ ಬೆಳ್ಳಿತೆರೆ ಮೇಲೆ ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ದೊಡ್ಮನೆ ಯುವರಾಜ್ ಕುಮಾರ ಎಕ್ಕ ಮಾರ್ ಮಾರ್ ಅಂತ ಮಸ್ತ್ ಆಗಿ ಎಂಟರ್ಟೈನ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ ಬೆಳ್ಳಿತೆರೆ ಮೇಲೆ ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ದೊಡ್ಮನೆ ಯುವರಾಜ್ ಕುಮಾರ ಎಕ್ಕ ಮಾರ್ ಮಾರ್ ಅಂತ ಮಸ್ತ್ ಆಗಿ ಎಂಟರ್ಟೈನ್ ಮಾಡುತ್ತಿದ್ದಾರೆ. ಅಣ್ಣಾವ್ರ ಮೊಮ್ಮಗನ ಎಕ್ಕ ಸಿನಿಮಾ ನೋಡಿ ಪ್ರೇಕ್ಷಕ ಬಗೆ ಬಗೆಯಾಗಿ ಮತನಾಡಿದ್ದಾರೆ. ಹಾಗಾದ್ರೆ ಎಕ್ಕಾ ಹೇಗಿದೆ..? ಎಕ್ಕ ಗೆಲ್ತಾ..? ನೋಡೋಣ ಬನ್ನಿ. ಕನ್ನಡದ ಬೆಳ್ಳಿತೆರೆ ಮೇಲೆ ಎಕ್ಕ ಬ್ಯಾಂಡು ಸೌಂಡು ಜೋರಾಗಿದೆ. ಒಂದ್ ಕಡೆ ಜ್ಯೂನಿಯರ್ ಪವರ್ ಸ್ಟಾರ್ ಅಂತಲೇ ಕರೆಸಿಕೊಳ್ಳಿತ್ತಿರೋ ಯುವ ರಾಜ್ ಕುಮಾರ್ ಎಕ್ಕಾ ಮಾರ್ ಮಾರ್ ಅಂತ ಮಾಸ್ ಆಗಿ ಅಬ್ಬರಿಸುತ್ತಿದ್ರೆ, ಈ ಕಡೆ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಆಗಿ ಸಿನಿ ಭಕ್ತ ಗಣಕ್ಕೆ ಕಿಕ್ ಕೊಟ್ಟಿದ್ದಾರೆ. ಬೆಳ್ಳಿ ಭೂಮಿ ಮೇಲೆ ಬಂದಿರೋ ಎಕ್ಕ ಸಿನಿಮಾ ಜನ ಮನ ಸೂರೆಗೊಳ್ಳುತ್ತಿದೆ.
ಈ ವರ್ಷ ದೊಡ್ಡ ಸಿನಿಮಾಗಳಿಲ್ಲದೇ ಸೊರಗಿದ್ದ ಕನ್ನಡ ಚಿತ್ರರಂಗದಲ್ಲೀಗ 'ಎಕ್ಕ' ಸಿನಿಮಾ ಸಿರಿತನ ತಂಡಿದೆ. ಯುವ ರಾಜ್ಕುಮಾರ್ ನಟನೆಯ ಆಕ್ಷನ್ ಥ್ರಿಲ್ಲರ್ ಎಕ್ಕ ಗೆದ್ದು ಬೀಗಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಸಂಜನಾ ಆನಂದ್, ಸಂಪದ ಸಖತ್ ಆಗಿ ಮೋಡಿ ಮಾಡಿದ್ದಾರೆ. ಮಗು ಮತ್ತು ಮೃಗದ ವ್ಯಕ್ತಿತ್ವ ಇರೋ ಮುತ್ತು ಕತೆ ಸಿನಿಮಾಭಿಮಾನಿಗಳ ಮನ ಮುಟ್ಟಿದೆ. ಎಕ್ಕ ಬಗ್ಗೆ ಎಲ್ಲರು ಮೆಚ್ಚಿದ್ದಾರೆ. ಪಕ್ಕಾ ಲೆಕ್ಕ ಹಾಕಿಕೊಂಡು ಥಿಯೇಟರ್ಗೆ ಬರೋ ಪ್ರೇಕ್ಷಕರಿಗೆ ಎಕ್ಕ ಮೋಸ ಮಾಡಲ್ಲ. ಈ ಸಿನಿಮಾದ ಕತೆ ಕನ್ನಡಿಗರಿಗೆ ಫ್ರೆಶ್ ಎನಿಸುತ್ತೆ. ಯುವ ರಾಜ್ಕುಮಾರ್ ಮುತ್ತು ಮಾತ್ರ ಮನ ತುಂಬುತ್ತೆ. ಈ ಮುತ್ತುನಲ್ಲಿ ಮಗು ಮತ್ತು ಮೃಗ ಎರಡೂ ಇರುತ್ತೆ. ಮಗುವಾಗಿದ್ದ ಮುತ್ತು ಮೃಗ ಆಗೋದು ಯಾಕೆ ಅನ್ನೋದೆ ಎಕ್ಕದ ಲೆಕ್ಕ.. ಮುತ್ತು ತಾಯಿ ರತ್ನನಾಗಿ ಶೃತಿ ನಟಿಸಿದ್ದಾರೆ.
ಹಳ್ಳಿಯಲ್ಲಿದ್ದ ಅಮಾಯಕ ಮುತ್ತು ಜೀವನೋಪಾಯಕ್ಕೆ ಕೆಲಸ ಅರಸಿ ಬೆಂಗಳೂರಿಗೆ ಬರುತ್ತಾನೆ. ಒಳ್ಳೆ ದಾರಿಯಲ್ಲಿ ದುಡಿದು ಜೀವನ ನಡೆಯೋ ಮುತ್ತು ಕೈಗೆ ರಕ್ತ ಅಂಟಿಕೊಳ್ಳಿತ್ತೆ. ಮುಂದೇನಾಗುತ್ತೆ ಅನ್ನೋದು ಸಿನಿಮಾದಲ್ಲಿ ನೋಡ್ಬೇಕು. 'ರತ್ನನ್ ಪ್ರಪಂಚ' ಕಟ್ಟಿದ್ದ ನಿರ್ದೇಶಕ ರೋಹಿತ್ ಪದಕಿ ಈ ಬಾರಿ ಯುವ ರಾಜ್ಕುಮಾರ್ಗಾಗಿ 'ಎಕ್ಕ'ದ ಎಲೆ ಹಾಕಿದ್ದಾರೆ. ಇದೊಂದು ಪಕ್ಕಾ ಲೋಕಲ್ ಸ್ಟೋರಿ. ಸಂಜನಾ ಆನಂದ್, ಸಂಪದಾ, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ, ಅತುಲ್ ಕುಲಕರ್ಣಿ, ಶ್ರುತಿ ಪಾತ್ರಗಳು ಮನದಲ್ಲಿ ಉಳಿಯುತ್ತೆ. ಚರಣ್ ರಾಜ್ ಮ್ಯೂಸಿಕ್ಗೆ ಮಾಸ್ತಿ ಡೈಲಾಗ್, ಸತ್ಯ ಹೆಗಡೆ ಕ್ಯಾಮೆರಅ ಕುಸುರಿಯಲ್ಲಿ 99 ಪರಸೆಂಟ್ ಸ್ಕೋರ್ ಮಾಡಿದ್ದಾರೆ. ಹೀಗಾಗಿ ಎಕ್ಕ ಸಿನಿಮಾ ನೋಡಿದೋರೆಲ್ಲಾ ನಾನು ನೋಡಿರೋದು ಎಕ್ಕ ಸೂಪರ್ ಹಿಟ್ ಪಕ್ಕಾ ಎನ್ನುತ್ತಿದ್ದಾರೆ.