ಮಂತ್ರವಾದಿಯಾಗಲಿರುವ ಗೋಲ್ಡನ್‌ ಸ್ಟಾರ್‌: ತೀವ್ರ ಕುತೂಹಲ ಸೃಷ್ಟಿಸಿದ ಗಣೇಶ್ 49ನೇ ಸಿನಿಮಾ

Jan 3, 2025, 10:14 AM IST

ಗೋಲ್ಡನ್ ಸ್ಟಾರ್​ ಗಣೇಶ್​. ಪ್ರೀತ್ಸೋ ಯೂತ್ಸ್​ಗೆ ಬ್ರ್ಯಾಂಡ್ ಅಂಬಾಸೀಡರ್.. ಸ್ಯಾಂಡಲ್ವುಡ್‌ನಲ್ಲಿ ಲವ್ ಸ್ಟೋರಿ ಸಿನಿಮಾಗಳಿಗೆ ಇವರೇ ಕೇರ್ ಆಫ್ ಅಡ್ರಸ್ಸೇ. ಗಣೇಶ್ ಸಿನಿಮಾಗಳನ್ನ ಯಾವ ಪ್ರೇಮಿಗಳು ಮಿಸ್ ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ. ಗಣಿಗೆ ಈ ಗೋಲ್ಡನ್ ಸ್ಟಾರ್ ಪಟ್ಟ ಬಂದಿದ್ದು ಪ್ರ್ಯೂರ್ ಲವ್ ಸ್ಟೋರಿಗೆ ಜೀವ ತುಂಬಿದ್ದಕ್ಕೆ. ಪ್ರೇಮಿಗಳ ನಾಡಿ ಮಿಡಿತ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾದ ಕಥೆ ಆಯ್ಕೆ ಮಾಡಿ ಅಭಿನಯಿಸೋ ಕಲೆಗಾರ ಗಣೇಶ್. ಆದ್ರೆ ಗಣಿ ಈಗ ಕೊಂಚ ಬದಲಾಗಿದ್ದಾರೆ. ಬದಲಾಗಿದ್ದಾದ್ರು ಹಂಗಿಂಗಲ್ಲ.  ಗಣಿ ಈಗ ಶಿವನ ಬಿಲ್ಲನ್ನ ಹಿಡಿದು  ಮಾಹಾಸುರರ ವಿರುದ್ಧ ಮಂತ್ರ ಹಾಕಿ ರೌದ್ರಾವತಾರ ತಾಳಿದ್ದಾರೆ.  ಯೆಸ್, ಗಣೇಶ್ ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. ತೆಲುಗು ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾಂ ಫ್ಯಾಕ್ಟರಿ ಗಣೇಶ್​​ರ ಪಿನಾಕ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಧನಂಜಯ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಟೈಟಲ್ ಸಮೇತ ಚಿತ್ರದ ಟೀಸರ್ ರಿಲೀಸ್ ಆಗಿದೆ. ಪಿನಾಕ ಗಣೇಶ್ ನಟನೆಯ 49ನೇ ಸಿನಿಮಾ. ಫ್ಯಾಂಟಸಿ ಆಕ್ಷನ್ ಸಿನಿಮಾ.. ಇದುವರೆಗೂ ನೋಡಿರದ ಲುಕ್​​ನಲ್ಲಿ ಗಣೇಶ್​ ಮಿಂಚಿದ್ದಾರೆ. ಜನರಿಗಾಗಿ ಬದುಕಿದ ಧೀರನ ದಂತಕಥೆ ಚಿತ್ರ ಪಿನಾಕ.. ಕ್ಷುದ್ರಶಕ್ತಿಯ ಎದುರು ರುದ್ರಶಕ್ತಿಯ ಹೋರಾಟದ ಸ್ಟೋರಿ ಪಿನಾಕ. 'ಪಿನಾಕ' ಎಂದರೆ ಸಂಸ್ಕೃತದಲ್ಲಿ ತ್ರಿಶೂಲ, ಶಿವನ ಬಿಲ್ಲು ಎನ್ನುವ ಅರ್ಥ ಇದೆ. ಹೀಗಾಗೆ ಇಷ್ಟು ದಿನ ಲವ್ ಸ್ಟೋರಿಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ಗಣೇಶ್, ಈಗ ಅತೀಂಧ್ರಿಯ ಶಕ್ತಿಯ ಕಥೆಯಲ್ಲಿ ಅದಿನ್ನೇಗೆ ಮೋಡಿ ಮಾಡ್ತಾರೆ ಕಾದು ನೋಡ್ಬೇಕು.