Oct 26, 2023, 9:54 AM IST
300 ಕೋಟಿ ರೂಪಾಯಿ ಬಜೆಟ್‌ನ ‘ಲಿಯೋ’ ಸಿನಿಮಾ(Leo movie) ರಿಲೀಸ್ ಆದ ಏಳೇ ಏಳು ದಿನಕ್ಕೆ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅನ್ನೊ ಸುದ್ದಿ ಶಾಕಿಂಗ್ ಆಗಿತ್ತು. ಇದು ಫೇಕ್ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ಚರ್ಚೆ ಶುರು ಆಗಿದೆ. ಅಷ್ಟೇ ಅಲ್ಲ ಹ್ಯಾಶ್ ಟ್ಯಾಗ್ ಲಿಯೋ ಸ್ಕ್ಯಾಮ್ ಟ್ರೆಂಡ್ ಕೂಡ ಶುರುವಾಗಿದೆ. ಅಸಲಿಗೆ ಚಿತ್ರತಂಡ ಯಾವಾಗ ಮೊದಲ ದಿನ 148 ಕೋಟಿ ಕಲೆಕ್ಷನ್ ಮಾಡಿದೆ ಅಂತ ಹೇಳಿಕೊಂಡಿತ್ತೋ ಆಗಲೇ ನೆಗೆಟಿವ್ ಟಾಕ್ ಶುರುವಾಗಿ ಹೋಗಿತ್ತು. ಅಲ್ಲದೇ ಈ ಸಿನಿಮಾ ಕೇವಲ 4 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ರೂ, ಅದು ಹೇಗೆ ಇಷ್ಟು ಕೋಟಿ ಕಲೆಕ್ಷನ್(Collection) ಮಾಡೋದಕ್ಕೆ ಸಾಧ್ಯ ಆಯ್ತು ಅನ್ನೊದೇ ಅನೇಕರ ಪ್ರಶ್ನೆಯಾಗಿದೆ. ಕೆಜಿಎಫ್-2, ಆರ್‌ಆರ್‌ಆರ್(RRR) ನಂತರ ಸೂಪರ್ ಡೂಪರ್‌ಹಿಟ್ ಸಿನಿಮಾಗಳು 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಹಾಗಾಗಿ ಭಾರಿ ಕಲೆಕ್ಷನ್‌ಗಳಿಸಿ ದಾಖಲೆ ಮಾಡಿತ್ತು. ಆದರೆ ಲಿಯೋ ಸಿನಿಮಾಗೆ ಬೆಂಗಳೂರಿನಲ್ಲೇ (Bengaluru) ಸಾವಿರ ಸ್ಕ್ರೀನ್ ಪ್ರದರ್ಶನಕ್ಕೆ ಅವಕಾಶ ಕೊಡಲಾಗಿತ್ತು. ವಿದೇಶಗಳಲ್ಲಿ ತೆರೆ ಕಂಡಿರುವ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೇ ಸಿಕ್ಕಿದೆ ನಿಜ. ಆದರೂ ದಿನದಿಂದ ದಿನಕ್ಕೆ ಅಲ್ಲಿ ಸಿನಿಮಾ ಕ್ರೇಜ್ ಕಡಿಮೆ ಆಗಿದೆ.
ಇದನ್ನೂ ವೀಕ್ಷಿಸಿ: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ದಸರಾ ಧಮಾಕ: ಐರಾ, ಯಥರ್ವ್ ಸೈಕಲ್ ಸವಾರಿ ನೀವು ನೋಡಿ!