ಪ್ರಭಾಸ್ 'ರಾಜಾಸಾಬ್' ರಿಲೀಸ್​​ ಡೇಟ್ ಬದಲಾಗಿಲ್ಲ: ಹಕ್ ಸಿನಿಮಾ ರಿಲೀಸ್​ಗೆ ಕಾನೂನು ಕಂಟಕ

ಪ್ರಭಾಸ್ 'ರಾಜಾಸಾಬ್' ರಿಲೀಸ್​​ ಡೇಟ್ ಬದಲಾಗಿಲ್ಲ: ಹಕ್ ಸಿನಿಮಾ ರಿಲೀಸ್​ಗೆ ಕಾನೂನು ಕಂಟಕ

Published : Nov 05, 2025, 04:22 PM IST

ಇಮ್ರಾನ್ ಹಶ್ಮಿ ಅಭಿನಯದ ನೈಜ ಕಥೆ ಆಧಾರಿತ ‘ಹಕ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರೋದು ಫಿಕ್ಸ್ ಆಗಿದೆ. ಸತತ ಆಕ್ಷನ್ ಸಿನಿಮಾಗಳಲ್ಲಿ ನಟಿಸಿರೋ ಪ್ರಭಾಸ್ ಫಾರ್ ಎ ಚೇಂಜ್ ಈ ಸಿನಿಮಾದಲ್ಲಿ ವಿಭಿನ್ನ ಅವತಾರದಲ್ಲಿ ಮಿಂಚಿದ್ದಾರೆ.

ಇಮ್ರಾನ್ ಹಶ್ಮಿ ಮತ್ತು ಯಾಮಿ ಗೌತಮ್  ಅಭಿನಯದ ನೈಜ ಕಥೆ ಆಧಾರಿತ ‘ಹಕ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರೋದು ಫಿಕ್ಸ್ ಆಗಿದೆ. ಆಧ್ರೆ ರಿಲೀಸ್ ಹೊಸ್ತಿಲಲ್ಲಿ ಸಿನಿಮಾಗೆ ಕಾನೂನು ಕಂಟಕ ಎದುರಾಗಿದೆ. ಈ ಸಿನಿಮಾ ಶಾಹ್ ಬಾನೋ ಬೇಗಂ ಅವರ ನೈಜ ಕಥೆ ಆಧರಿಸಿದ್ದು, ಇತ್ತೀಚೆಗಷ್ಟೆ ಶಾಹ್ ಬಾನೋ ಬೇಗಂ ಅವರ ಪುತ್ರಿ ಸಿದ್ದೀಖಾ ಬೇಗಂ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್‌ನೀಡಿದ್ದಾರೆ. ತಮ್ಮ ಕುಟುಂಬದ ಅನುಮತಿ ಪಡೆಯದೇ  ತಾಯಿಯ ಜೀವನಕಥೆಯನ್ನ ತೆರೆಯ ಮೇಲೆ ಈ ಚಿತ್ರತಂಡ ತರ್ತಾ ಇದೆ ಅಂತ ಆರೋಪ ಮಾಡಿದ್ದಾರೆ. ಸೋ ಈ ಕಾನೂನು ಕಂಟಕದ ನಡುವೆ ಸಿನಿಮಾ ತೆರೆಗೆ ಬರುತ್ತಾ ಕಾದುನೋಡಬೇಕಿದೆ.

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಹುತೇಕ ಸೌತ್​ನ ಬಿಗ್ ಸ್ಟಾರ್ ಗಳ ಜೊತೆಗೆ ನಟನೆ ಮಾಡಿದ್ದಾರೆ. ಇತ್ತೀಚಿಗೆ ದಿ ಗರ್ಲ್​​ಫ್ರೆಂಡ್ ಪ್ರಚಾರಕ್ಕಾಗಿ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಬಂದ ವೇಲೆ ರಶ್ಮಿಕಾಗೆ ಫ್ಯಾನ್ಸ್ ನಾನಾ ಪ್ರಶ್ನೆ ಕೇಳಿದ್ದಾರೆ. ಆ ಪೈಕಿ ಅಭಿಮಾನಿಯೊಬ್ಬರು ಪ್ರಭಾಸ್ ಜೊತೆ ಯಾವಾಗ ನಟಿಸ್ತಿರಿ ಅನ್ನೋ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರೋ ರಶ್ಮಿಕಾ, ನಾನು ಪ್ರಭಾಸ್ ಜೊತೆಗೆ ನಟಿಸೋಕೆ ಕಾತುರಳಾಗಿದ್ದೀನಿ , ಅವರೊಬ್ಬ ಅದ್ಭುತ ನಟ ಅಂತ ಉತ್ತರಿಸಿದ್ದಾರೆ. ಫ್ಯಾನ್ಸ್ ಪ್ರಭಾಸ್-ರಶ್ಮಿಕಾ ಜೋಡಿ ನೋಡ್ಲಿಕ್ಕೆ ಕಾತುರರಾಗಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ನಟನೆಯ ರೊಮ್ಯಾಂಟಿಕ್ ಹಾರರ್ ಕಾಮಿಡಿ ಸಿನಿಮಾ ದಿ ರಾಜಾಸಾಬ್ ರಿಲೀಸ್ ಮತ್ತೆ ಪೋಸ್ಟ್ ಪೋನ್ ಆಗಲಿದೆ ಅನ್ನೋ ಸುದ್ದಿಹರಿದಾಡ್ತಾ ಇದ್ವು. ಆದ್ರೆ ಇದಕ್ಕೆ ಫುಲ್ ಸ್ಟಾಪ್ ಇಟ್ಟಿರೋ ಪೀಪಲ್ ಮಿಡಿಯಾ ಫ್ಯಾಕ್ಟರಿ, ಸಿನಿಮಾ ಮೊದಲೇ ಅನೌನ್ಸ್ ಆದಂತೆ ಜನವರಿ 9, 2026ಕ್ಕೆ ತೆರೆಗೆ ಬರೋದು ಫಿಕ್ಸ್ ಎಂದಿದೆ. ಸತತ ಆಕ್ಷನ್ ಸಿನಿಮಾಗಳಲ್ಲಿ ನಟಿಸಿರೋ ಪ್ರಭಾಸ್ ಫಾರ್ ಎ ಚೇಂಜ್ ಈ ಸಿನಿಮಾದಲ್ಲಿ ವಿಭಿನ್ನ ಅವತಾರದಲ್ಲಿ ಮಿಂಚಿದ್ದಾರೆ. ಸಂಜಯ್ ದತ್, ಬೊಮನ್ ಇರಾನಿ ಕೂಡ ಈ ಚಿತ್ರದ ತಾರಾಬಳಗದಲ್ಲಿ ಇದ್ದು, ಮಾಳವಿಕಾ ಮನಮೋಹನ್ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more