AI ತಂತ್ರಜ್ಞಾನದಲ್ಲಿ ಮೂಡಿಬಂದ ದಿಗ್ಗಜರು: ಸಂಕ್ರಾಂತಿ ಹಬ್ಬಕ್ಕೆ ಬಂದ ಡಾ.ರಾಜ್,ವಿಷ್ಣು, ಅಂಬಿ!

Jan 15, 2025, 12:11 PM IST

ಇಡೀ ನಾಡು ಸಂಕ್ರಾಂತಿ ಸಂಭ್ರಮದಲ್ಲಿದೆ. ಈ ಖುಷಿಯ ಸಮಯದಲ್ಲಿ ನಮ್ಮ ಅಗಲಿದ ತಾರೆಯರೆಲ್ಲಾ ಜೊತೆಗಿದ್ರೆ ಹೇಗಿರ್ತಾ ಇತ್ತು. ಇಂಥದ್ದೊಂದು ಕಲ್ಪನೆಯಲ್ಲಿ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಸೃಷ್ಟಿಸಿದ ಆ ಅದ್ಭುತ ದೃಶ್ಯಾವಳಿ ಇಲ್ಲಿದೆ ನೋಡಿ. ಡಾ,ರಾಜ್​ಕುಮಾರ್, ವಿಷ್ಣು ವರ್ಧನ್ ಅಂಬರೀಷಣ್ಣ , ಶಂಕರ್ ನಾಗ್ ಸೇರಿದಂತೆ ಕನ್ನಡ ಸಿನಿಲೋಕದ ದಿಗ್ಗಜರೆಲ್ಲಾ ಇವತ್ತು ನಮ್ ಜೊತೆಗೆ ಇದ್ದಿದ್ರೆ ಹೇಗಿರ್ತಾ ಇತ್ತು..? ಹಬ್ಬ ಅದೆಷ್ಟು ರಂಗೇರ್ತಾ ಇತ್ತು ಅನ್ನೋ ಕಲ್ಪನೆಯ ಈ ಎಐ ವಿಡಿಯೋ ಸದ್ಯ ಸಖತ್ ಸದ್ದು ಮಾಡ್ತಾ ಇದೆ. ಇವರಷ್ಟೇ ಅಲ್ಲ ಇತ್ತೀಚಿಗೆ ನಮ್ಮನ್ನಗಲಿದ ಅಪ್ಪು, ಚಿರು ಸರ್ಜಾ, ಅಪರ್ಣ.. ಹಿರಿಯ ನಟಿಯರಾದ ಜಯಂತಿ, ಲೀಲಾವತಿ ಸೇರಿದಂತೆ ಅನೇಕ ಸಿನಿಲೋಕದ ದಿಗ್ಗಜರು ಈ ವಿಡಿಯೋದಲ್ಲಿದ್ದಾರೆ. ಸಂಕ್ರಾಂತಿಗೆ ಸ್ಯಾಂಡಲ್​ವುಡ್​ನಲ್ಲಿ ಸಂಭ್ರಮ ಹೆಚ್ಚಿಸಿರೋ ವಿಡಿಯೋ ಇದು. ಇಂಥದ್ದೊಂದು ಅದ್ಭುತವನ್ನ ಸೃಷ್ಟಿಸಿದ ತಂತ್ರಜ್ಞಾನಕ್ಕೆ ಎಲ್ಲರೂ ಸಲಾಂ ಹೇಳ್ತಾ ಇದ್ದಾರೆ.