
ಇತ್ತೀಚಿಗೆ ದೀಪಿಕಾ ಪಡುಕೋಣೆ, ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದಿಂದ ಹೊರಬಿದ್ದಿದ್ರು. ದುಬಾರಿ ಸಂಭಾವನೆ, ಅನ್ಪ್ರೊಪೇಷನಲ್ ಕಂಡೀಷನ್ಸ್ ಹಾಕಿದ್ದಾರೆ ಅಂತ ದೀಪಿಕಾ ಮೇಲೆ ಆರೋಪ ಮಾಡಲಾಗಿತ್ತು. ಈ ನಡುವೆ ದೀಪಿಕಾ ತಮ್ಮ ಸಿನಿಮಾ ಕಥೆ ಲೀಕ್ ಮಾಡಿದ್ದಾರೆ ಅಂತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಗರಂ ಆಗಿದ್ರು. ಜೊತೆಗೆ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದಿಂದಲೂ ದೀಪಿಕಾ ಹೊರನಡೆದ ಸುದ್ದಿ ಬಂತು. ಅಲ್ಲಿಗೆ ಮಗು ಆದ ಮೇಲೆ ದೀಪಿಕಾ ಬೇಡಿಕೆ ಕುಗ್ಗಿತಾ. ಸ್ಟಾರ್ ನಟಿಯ ಕಾಲ ಮುಗೀತಾ ಅನ್ನೋ ಚರ್ಚೆ ಶುರುವಾಗಿದ್ವು. ಆದ್ರೆ ನನ್ನ ಟೈಂ ಇನ್ನೂ ಮುಗಿದಿಲ್ಲ ಅಂತ ದೊಡ್ಡದಾಗಿ ಸೂಚನೆ ಕೊಟ್ಟಿದ್ದಾರೆ ದೀಪಿಕಾ.
ಪ್ರಭಾಸ್ ಪ್ರಾಜೆಕ್ಟ್ಗಳಿಂದ ಹೊರಬಿದ್ದರೇನಂತೆ ದೀಪಿಕಾ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಗೆ ಜೋಡಿಯಾಗಿದ್ದಾರೆ. ಹೌದು ಅಟ್ಲಿ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ಮೆಗಾ ಪ್ರಾಜೆಕ್ಟ್ಗೆ ದೀಪಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಹೈ ಬಜೆಟ್ ಸಿನಿಮಾ ಆಗಿದ್ದು ಸನ್ ಪಿಕ್ಚರ್ಸ್ ಬಂಡವಾಳ ಹೂಡ್ತಾ ಇದೆ. ಪುಷ್ಪ-2 ಗ್ಲೋಬಲ್ ಸಕ್ಸಸ್ ಬಳಿಕ ಐಕಾನ್ ಸ್ಟಾರ್ ನಟನೆಯ ಈ ಸಿನಿಮಾ ಬಗ್ಗೆ ವರ್ಲ್ಡ್ ವೈಡ್ ಕುತೂಹಲ ಇದೆ. ಅಂಥಾ ಮೆಗಾ ಪ್ರಾಜೆಕ್ಟ್ಗೆ ದೀಪಿಕಾ ನಾಯಕಿ ಆಗಿದ್ದಾರೆ.