ಮ್ಯಾಕ್ಸ್ ಗೆಲುವಿನ ಖುಷಿಯಲ್ಲಿರೋ ಕಿಚ್ಚನಿಗೆ ಸಾನ್ವಿ ಗಿಫ್ಟ್!

ಮ್ಯಾಕ್ಸ್ ಗೆಲುವಿನ ಖುಷಿಯಲ್ಲಿರೋ ಕಿಚ್ಚನಿಗೆ ಸಾನ್ವಿ ಗಿಫ್ಟ್!

Published : Jan 06, 2025, 05:43 PM IST

ಸರಿಗಮಪ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅವರ ಹಾಡಿನ ಪ್ರದರ್ಶನವು ಅಚ್ಚರಿ ಮೂಡಿಸಿತು. ಮಗಳ ಪ್ರತಿಭೆಯನ್ನು ಕಂಡು ಕಿಚ್ಚ ಭಾವುಕರಾದರು. ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆದರು.

ಸದ್ಯ ಮ್ಯಾಕ್ಸ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರೋ ಕಿಚ್ಚ ಸುದೀಪ್​ಗೆ ಅವರ ಪುತ್ರಿ ಮತ್ತೊಂದು ಸರ್​ಪ್ರೈಸ್ ಕೊಟ್ಟಿದ್ದಾಳೆ. ಸರಿಗಮಪ ಪ್ರೊಗ್ರಾಮ್​ನಲ್ಲಿ ಅಪ್ಪನ ಹಾಡು ಹಾಡಿ ಕಿಚ್ಚನ ಕಣ್ಣಲ್ಲಿ ಹೆಮ್ಮೆ ಮೂಡಿಸಿದ್ದಾಳೆ ಸಾನ್ವಿ ಸುದೀಪ್.  ತಾವು ಅದೆಷ್ಟೇ ದೊಡ್ಡ ಸಾಧನೆ ಮಾಡಿದ್ರೂ ಅನುಭವಿಸದಷ್ಟು ಹೆಮ್ಮೆ, ಖುಷಿ, ಸಂತೋಷವನ್ನ ಕಿಚ್ಚನಿಗೆ ತಂದುಕೊಟ್ಟಿರೋದು ಮಗಳ ಯಶಸ್ಸು. ಕಿಚ್ಚ ಹೇಳಿದ ನಾನು ನನ್ನ ಕನಸಿನ ಕಥೆ ಇಲ್ಲಿದೆ ನೋಡಿ. ಯೆಸ್ ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾದ ಅಮೋಘ ಗೆಲುವಿನ ಖುಷಿಯಲ್ಲಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ಬಂದ ಮ್ಯಾಕ್ಸ್ ಮ್ಯಾಕ್ಸಿಮಮ್ ಯಶಸ್ಸು ಕಂಡಿದ್ದು ಬಾಕ್ಸಾಫೀಸ್​ನಲ್ಲಿ ಕಮಾಲ್ ಮಾಡಿದೆ. ಇದೇ ಖುಷಿಯಲ್ಲಿ ಸರಿಗಮಪ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಸುದೀಪ್​ಗೆ ಮತ್ತೊಂದು ಸರ್​ಪ್ರೈಸ್ ಕೊಟ್ಟಿದ್ದು ಪುತ್ರಿ ಸಾನ್ವಿ ಸುದೀಪ್. ಸರಿಗಮಯ ವೇದಿಕೆಗೆ ಬಂದ ಸಾನ್ವಿ ಸುದೀಪ್ ಜಸ್ಟ್ ಜಸ್ಟ್ ಮಾತಲ್ಲಿ ಹಾಡನ್ನ ಹಾಡಿದ್ರು. ಕಿಚ್ಚನಿಗೆ ಇದು ಸಡನ್ ಸರ್​ಪ್ರೈಸ್. ಮಗಳು ವೇದಿಕೆಗೆ ಬರ್ತಾಳೆ, ಅಲ್ಲಿ ಹಾಡು ಹಾಡ್ತಾಳೆ ಅನ್ನೋ ಯಾವ ಕುರುಹೂ ಕೂಡ ಇಲ್ಲದ ಸುದೀಪ್, ಮಗಳ ಎಂಟ್ರಿ ನೋಡಿ ಆಶ್ಚರ್ಯಚಕಿತರಾಗಿದ್ರು. ಇನ್ನೂ ಸಾನ್ವಿ ಹಾಡು ಹಾಡೋದನ್ನ ನೋಡೋವಾಗಂತಲೂ ಕಿಚ್ಚನ ಕಣ್ಣಲ್ಲಿ ಆನಂದಬಾಷ್ಪ ತುಂಬಿ ಬಂತು. ಮೊನ್ನೆ ಮೊನ್ನೆ ಅಂಗೈ ಅಗಲ ಇದ್ದ ಪಾಪು  ಇಷ್ಟು ದೊಡ್ಡದಾಗಿ ಬೆಳೆದು ತನಗೆ ಹಾಡು ಡೆಡಿಕೇಟ್ ಮಾಡ್ತಾ ಇದೆಯಾ ಅಂತ ತನ್ನ ಕಣ್ಣು ತಾನೇ ನಂಬಲಾಗದ  ಭಾವ ಸುದೀಪ್ ಕಣ್ಣಲ್ಲಿ ಎದ್ದುಕಾಣ್ತಾ ಇತ್ತು. ಸಾನ್ವಿ ಹಾಡು ಮುಗಿಸಿದ್ರೆ ಕಿಚ್ಚನಿಗೆ ಹೆಮ್ಮೆ ತುಂಬಿ ಬಂದಿತ್ತು. ಸುದೀಪ್ ಮತ್ತು ಪುತ್ರಿಯ ಹಳೆಯ ಫೋಟೋಗಳನ್ನ ಕಲೆಕ್ಟ್ ಮಾಡಿ ವೇದಿಕೆ ಮೇಲೆ ಹಾಕಿದ್ದು ಕಾರ್ಯಕ್ರಮನ ಇನ್ನಷ್ಟು ರಂಗೇರಿಸಿತ್ತು. ಇನ್ನೂ ಸುದೀಪ್ ಪತ್ನಿ ಪ್ರಿಯಾ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ರು. ಮಗಳ ಹೆಮ್ಮೆಯ ಕ್ಷಣಗಳನ್ನ ಅವರೂ ಕಣ್ತುಂಬಿಕೊಂಡ್ರು. ಇನ್ನೂ ಸಾನ್ವಿ ಹಿಂದಿನ ದಿನವೇ ಬಂದು ರಿಹರ್ಸಲ್ ಮಾಡಿದ್ರಂತೆ. ಇದನ್ನ ನಂಬೋದಕ್ಕೆ ರೆಡಿ ಇರದ ಕಿಚ್ಚ ಲೈಟ್ ಆಗಿ ಮಗಳ ಕಾಲೆಳೆದು ತಮಾಷೆ ಮಾಡಿದ್ರು. ಹಳೆಯ ಫೋಟೋಗಳ ಪೋಸ್​ನ ವೇದಿಕೆ ಮೇಲೆ ರೀಕ್ರಿಯೇಟ್ ಮಾಡಿದ್ರು. ಪತ್ನಿ ಮಗಳು ಇಬ್ಬರ ಎದುರು ವೇದಿಕೆ ಮೇಲೆ ಸುದೀಪ್ ಹಾಡು ಹಾಡಿದ್ದು ಮತ್ತೊಂದು ವಿಶೇಷ. ಸುದೀಪ್ ಇಷ್ಟು ದೊಡ್ಡ ಸ್ಟಾರ್ ಆದ್ರೂ ಮಗಳ ಶಾಲೆಯಲ್ಲಿ ಪೇರೆಂಟ್ಸ್ ಗೆ ನಡೆಸ್ತಾ ಇದ್ದ ರನ್ನಿಂಗ್ ರೇಸ್​​ನಲ್ಲಿ ಭಾಗವಹಿಸಿದ್ದ ಮಜವಾದ ಸಂಗತಿಯನ್ನೂ ಹೇಳಿಕೊಂಡ್ರು. ಇನ್ನೂ ಸುದೀಪ್​ಗೆ ಸರಿಗಮಪ ಟೀಂನಿಂದ ಅವರ ತಾಯಿಯ ಪ್ರತಿಮೆಯನ್ನ ಗಿಫ್ಟ್ ಆಗಿ ಕೊಡಲಾಗಿದೆ. ಅದು ಕೂಡ ಸುದೀಪ್​ರನ್ನ ಭಾವುಕರನ್ನಾಗಿಸ್ತು. ಒಟ್ಟಾರೆ ಮ್ಯಾಕ್ಸ್ ಗೆಲುವಿನ ಖುಷಿಯಲ್ಲಿರೋ ಈ ಸುದೀಪ್​ಗೆ ಈ ಕಾರ್ಯಕ್ರಮ ಮತ್ತಷ್ಟು ಖುಷಿ ತಂದಿರೋದು ಸುಳ್ಳಲ್ಲ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more