ಮತ್ತೆ ಬುರ್ಜ್ ಖಲೀಫಾ ಮೇಲೆ ಮೂಡಿದ ಕಿಚ್ಚ ಸುದೀಪ್..! ಎತ್ತರದ ಕಟ್ಟಡ ಮೇಲೆ ಹಾರಿತು ಸಿಸಿಎಲ್ ಬಾವುಟ..!

ಮತ್ತೆ ಬುರ್ಜ್ ಖಲೀಫಾ ಮೇಲೆ ಮೂಡಿದ ಕಿಚ್ಚ ಸುದೀಪ್..! ಎತ್ತರದ ಕಟ್ಟಡ ಮೇಲೆ ಹಾರಿತು ಸಿಸಿಎಲ್ ಬಾವುಟ..!

Published : Feb 04, 2024, 10:51 AM IST

ಇಡೀ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಅನ್ನೋ ಖ್ಯಾತಿ ಪಡೆದಿರೋದು ದುಬೈನಲ್ಲಿರೋ ಬುರ್ಜ್ ಖಲೀಫಾ ಕಟ್ಟಡ. ಇದೀಗ ಈ ಎತ್ತರದ ಕಟ್ಟಡದ ಮೇಲೆ ಮತ್ತೆ ಕಿಚ್ಚನ ಭಾವಚಿತ್ರ ಮೂಡಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಮೇಲೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್ನ ಬಾವುಟ ಹಾರಿದೆ. 
 

ನಟ ಕಿಚ್ಚ ಸುದೀಪ್ ಚಿತ್ರರಂಗವನ್ನ ಒಂದುಗೂಡಿಸೋಕೆ ಕನ್ನಡ ಚಲನಚಿತ್ರ ಕಪ್ ಹುಟ್ಟುಹಾಕಿದ್ದಾರೆ. ಅದೇ ರೀತಿ ಭಾರತೀಯ ಚಿತ್ರರಂಗವನ್ನ ಒಂದುಗೂಡಿಸೋಕೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಿಸಿಎಲ್(CCL) ಇದೆ. ಇದೀಗ ಸಿಸಿಎಲ್‌ನ 10ನೇ ಸೀಸನ್ ಶುರುವಾಗುತ್ತಿದೆ. ಫೆಬ್ರವರಿ 23ರಂದು ಸಿಸಿಎಲ್‌ಗೆ ಚಾಲನೆ ಸಿಗಲಿದೆ. ಇದರ ಪ್ರೋಮೋ ದುಬೈನ(Dubai) ಬುರ್ಜ್ ಖಲೀಫಾ(Burj Khalifa) ಕಟ್ಟಡದ ಮೇಲೆ ರಿಲೀಸ್ ಮಾಡಲಾಗಿದೆ. ಪ್ರೋಮೋ ರಿಲೀಸ್(Promo release) ವೇಳೆ ಕಿಚ್ಚ ಸುದೀಪ್ ಹೈಲೈಟ್ ಆಗಿದ್ರು. ತೆಲುಗು ನಟ ಸುಧೀರ್ ಬಾಬು, ಬೆಂಗಾಲಿ ನಟ ಜಿಸ್ಸು ಸೇನ್‌ಗುಪ್ತಾ, ಸೋನು ಸೂದ್, ಮಲಯಾಳಂ ಚಿತ್ರರಂಗದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿ ಸಿಸಿಎಲ್ನ ಎಂಟೂ ತಂಡಗಳ ನಾಯಕರು, ಆಟಗಾರರು ಪೋಸ್ ಕೊಟ್ಟಿದ್ದಾರೆ. ನಟ ಕಿಚ್ಚ ಸುದೀಪ್‌ಗೂ ದುಬೈನ ಬುರ್ಜ್ ಖಲೀಫಾದಲ್ಲಿ ರೆಕಾರ್ಡ್ ಒಂದನ್ನ ಬರೆದಿದ್ದಾರೆ. ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾದ ಫಸ್ಟ್ ಲುಕ್ಅನ್ನ ಕಿಚ್ಚ ಬುರ್ಜ್ ಖಲೀಪಾ ಮೇಲೆ ರಿಲೀಸ್ ಆಗಿತ್ತು. ಜಗತ್ತಿನ ಎತ್ತರದ ಕಟ್ಟದ ಮೇಲೆ ಸಿನಿಮಾ ಒಂದರ ಪೋಸ್ಟರ್ ರಿಲೀಸ್ ಆಗಿದ್ದು ಅದೇ ಮೊದಲು. ಈಗ ಅದೇ ಕಟ್ಟಡದ ಮೇಲೆ ಸಿಸಿಎಲ್ ಪ್ರೋಮೋ ರಿಲೀಸ್ ಆಗಿದ್ದು, ಚಿತ್ರರಂಗದ  ಮತ್ತೊಂದು ರೆಕಾರ್ಡ್ ಸೃಷ್ಟಿಯಾಗಿದೆ.

ಇದನ್ನೂ ವೀಕ್ಷಿಸಿ:  Darshan: 'ಡೆವಿಲ್ ದಿ ಹೀರೋ'ಗೆ ಹೀರೋಯಿನ್ ಫಿಕ್ಸ್..! ದರ್ಶನ್ ಜೊತೆ ತೆರೆ ಹಂಚಿಕೊಳ್ಳೋದು ಯಾರು..?

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more