ಬಾಲಿವುಡ್ ನಟಿ ರಾಖಿ ಸಾವಂತ್ ಅವರು, ಆದಿಲ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಈಗ ಅವರ ಸೀಕ್ರೆಟ್ ಮದುವೆಯ ವಿಚಾರ ಬಹಿರಂಗ ಆಗಿದೆ.
ನಟಿ ರಾಖಿ ಸಾವಂತ್ ಸೈಲೆಂಟ್ ಆಗಿ ಸೀಕ್ರೆಟ್ ಮ್ಯಾರೇಜ್ ಆಗಿದ್ದು, ಇಡೀ ಬಾಲಿವುಡ್ ಬೆಚ್ಚಿಬಿದ್ದಿದೆ. ಮದುವೆ ಆಗಿದ್ದು ಅಲ್ಲದೆ ತಮ್ಮ ಹೆಸರನ್ನೇ ಬದಲಾಯಿಸಿದ್ದಾರೆ. ರಾಖಿ ಸಾವಂತ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾಗುತ್ತಿದೆ. ಒಂದಲ್ಲಾ ಒಂದು ಕಿರಿಕ್ ಮಾಡಿಕೊಂಡು ಕಾಂಟ್ರವರ್ಸಿ ಮಾಡುವ ರಾಖಿ ಸಾವಂತ್, ಮದುವೆ ವಿಚಾರದಲ್ಲೂ ಹೀಗೆ ಮಾಡಿದ್ರಾ ಎಂದು ಎಲ್ಲರೂ ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ಗೆಳೆಯ ಆದಿಲ್'ಗಾಗಿ ಅವರು ಮತಾಂತರಗೊಂಡಿದ್ದಾರೆ ಎನ್ನಲಾಗುತ್ತಿದೆ.