ಅಮ್ಮನಾಗ್ತಿರೋ ಕತ್ರಿನಾ.. ಅಪ್ಪನಾಗ್ತಾರಂತೆ ಸಲ್ಮಾನ್ ಖಾನ್: ಕಾಜೋಲ್ ಶೋನಲ್ಲಿ ಸಲ್ಲು ಬಿಚ್ಚಿಟ್ಟ ಗುಟ್ಟೇನು?

ಅಮ್ಮನಾಗ್ತಿರೋ ಕತ್ರಿನಾ.. ಅಪ್ಪನಾಗ್ತಾರಂತೆ ಸಲ್ಮಾನ್ ಖಾನ್: ಕಾಜೋಲ್ ಶೋನಲ್ಲಿ ಸಲ್ಲು ಬಿಚ್ಚಿಟ್ಟ ಗುಟ್ಟೇನು?

Published : Sep 26, 2025, 05:58 PM IST

ಸಲ್ಮಾನ್ ಖಾನ್​ಗೆ ಇದೇ ಡಿಸೆಂಬರ್​ಗೆ 60 ವರ್ಷ ತುಂಬುತ್ತೆ. ಇದೂವರೆಗೂ ಮದುವೆಯೇ ಆಗದೇ ಉಳಿದುಕೊಂಡ ಸಲ್ಲುಮಿಯಾಗೆ ಮಕ್ಕಳನ್ನ ಹೊಂದಬೇಕು ಅನ್ನೋ ಆಸೆಯಾಗಿದೆಯಂತೆ.

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆಯಾಗದೇ ಉಳಿದಿರೋ ವಿಷ್ಯ ನಿಮಗೆಲ್ಲಾ ಗೊತ್ತೇ ಇದೆ. ಸಿಂಗಲ್ ಆಗೇ ಉಳಿದಿರೋ ಸಲ್ಲು ಈಗ ತಂದೆಯಾಗಬೇಕು ಅಂತ ಆಸೆ ಪಡ್ತಾ ಇದ್ದಾರಂತೆ. ಖುದ್ದು ಸಲ್ಮಾನ್ ಅತಿ ಶೀಘ್ರದಲ್ಲಿ ತಾನು ತಂದೆಯಾಗ್ತಿದ್ದೀನಿ ಅಂದಿದ್ದಾರೆ. ಯೆಸ್ ಇತ್ತೀಚಿಗಷ್ಟೇ ಕತ್ರಿನಾ ಕೈಫ್ ತಾವು ತಾಯಿಯಾಗ್ತಾ ಇರೋ ವಿಷ್ಯ ಹಂಚಿಕೊಂಡಿದ್ರು. ಈಗ ನೋಡಿದ್ರೆ ಕ್ಯಾಟ್ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ತಾನು ಅಪ್ಪನಾಗ್ತಾ ಇದ್ದೀನಿ ಅಂದಿದ್ದಾರೆ. ಹಾಗಂತ ತಪ್ಪು ತಿಳೀಬೇಡಿ. ಕತ್ರಿನಾ ಅಮ್ಮನಾಗ್ತಿರೋದಕ್ಕೂ ಸಲ್ಲು ಅಪ್ಪನಾಗ್ತಾ ಇರೋದಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ ಇತ್ತೀಚಿಗೆ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ನಡೆಸಿಕೊಡುವ ಶೋನದಲ್ಲಿ ಆಮೀರ್ ಜೊತೆ ಬಂದಿದ್ದ ಸಲ್ಮಾನ್, ನನಗೆ ಮಗು ಬೇಕು.. ಅತಿ ಶೀಘ್ರದಲ್ಲಿ ತಾನು ತಂದೆಯಾಗಲಿದ್ದೀನಿ ಅಂದಿದ್ದಾರೆ.

ಸಲ್ಮಾನ್ ಖಾನ್​ಗೆ ಇದೇ ಡಿಸೆಂಬರ್​ಗೆ 60 ವರ್ಷ ತುಂಬುತ್ತೆ. ಇದೂವರೆಗೂ ಮದುವೆಯೇ ಆಗದೇ ಉಳಿದುಕೊಂಡ ಸಲ್ಲುಮಿಯಾಗೆ ಮಕ್ಕಳನ್ನ ಹೊಂದಬೇಕು ಅನ್ನೋ ಆಸೆಯಾಗಿದೆಯಂತೆ. ಹಾಗಂತ ಸಲ್ಮಾನ್ ಈ ವಯಸ್ಸಲ್ಲಿ ಮದುವೆ ಮಾಡಿಕೊಂಡು ಮಕ್ಕಳನ್ನ ಮಾಡಿಕೊಳ್ಳೋ ಪ್ಲಾನ್​ನಲ್ಲೇನು ಇದ್ದಂತಿಲ್ಲ. ಈ ಬಗ್ಗೆ ಪರ್ಯಾಯ ಆಯ್ಕೆಗಳನ್ನ ಸಲ್ಮಾನ್ ಹುಡುಕ್ತಾ ಇದ್ದಾರಂತೆ. ಸಲ್ಮಾನ್ ಮುಂದೆ ಎರಡು ಆಯ್ಕೆ ಇವೆ. ಒಂದು ಮಗುವನ್ನ ದತ್ತು ಪಡೆದುಕೊಂಡು ಸಾಕೋದು. ಅಥವಾ ಬಾಡಿಗೆ ತಾಯಿ ಮೂಲಕ ಮಗು ಮಾಡಿಕೊಳ್ಳೋದು. ಮದುವೆ ಆಗದೇ ಸಿಂಗಲ್ ಆಗಿದ್ದದವರು ಸರೋಗಸಿ ಮೂಲಕ ಮಕ್ಕಳು ಮಾಡಿಕೊಳ್ಳೋದು ಈಗೇನು ಹೊಸತಲ್ಲ.

ಗೇ ಆಗಿರೋ ಕರಣ್ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನ ಪಡೆದಿದ್ದಾರೆ. ಇತ್ತೀಚಿಗೆ ನಮ್ಮ ಕನ್ನಡ ನಟಿ ಭಾವನಾ ಮದುವೆಯಾಗದೇ ಐವಿಎಫ್ ಮೂಲಕ ಗರ್ಭಧರಿಸಿ ಮಗುವನ್ನ ಪಡೆದಿದ್ರು. ಸೋ ಸಲ್ಮಾನ್ ಕೂಡ ಇಂಥಾ ಯಾವುದೋ ಮಾರ್ಗ ಆಯ್ದುಕೊಂಡಿರಬಹುದು. ಅದಕ್ಕಂತ್ಲೇ ತಾನು ಅತಿ ಶೀಘ್ರದಲ್ಲಿ ಮಗುವನ್ನ ಪಡೀತಿನಿ ಅಂತ ಹೇಳಿದ್ದಾರೆ ಅಂತ ಬಾಲಿವುಡ್ ಅಂಗಳದಲ್ಲಿ ಜೋರು ಚರ್ಚೆಯಾಗ್ತಾ ಇದೆ. ಈ ಶೋನಲ್ಲಿ ಸಲ್ಮಾನ್ ತಮ್ಮ ಮುರಿದುಬಿದ್ದ ಸಂಬಂಧಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರಂತೆ. ಅಸಲಿಗೆ ಸುರಸುಂದರಾಂಗ ಸಲ್ಲು ಮಿಯಾ ಲೈಫ್​ನಲ್ಲಿ ಬಂದ ಚೆಲುವೆಯರು ಒಬ್ಬಿಬ್ಬರಲ್ಲ.

1990ರ ದಶಕದಲ್ಲಿ ಸಂಗೀತಾ ಬಿಜಲಾನಿ ಜೊತೆಗೆ ಸಲ್ಮಾನ್ ಮದುವೆ ಕೂಡ ಫಿಕ್ಸ್ ಆಗಿತ್ತು. ಆದ್ರೆ ಅದು ಮುರಿದುಬಿದ್ದಿತ್ತು. ಇನ್ನೂ ಸಲ್ಮಾನ್-ಐಶ್ವರ್ಯ ಪ್ರೇಮಪ್ರಸಂಗವಂತೂ ಎಲ್ಲೆಡೆ ಗುಲ್ಲಾಗಿತ್ತು. ಆದ್ರೆ ಸಲ್ಮಾನ್ ಖಾನ್​ರಿಂದ ದೂರವಾದ ಐಶ್ವರ್ಯ ಬಚ್ಚನ್ ಕುಟುಂಬದ ಯುವರಾಜನನ್ನ ವರಿಸಿದ್ರು. ಮುಂದೆ ಸಲ್ಮಾನ್ ಹೆಸರು ಕತ್ರಿನಾ ಸೇರಿದಂತೆ ಅನೇಕ ನಟಿಯರ ಜೊತೆಗೆ ಹರಿದಾಡ್ತು. ಆದ್ರೆ ಸಲ್ಮಾನ್ ಕೊನೆಗೂ ಅವಿವಾಹಿತನಾಗೇ ಉಳಿದುಬಿಟ್ರು. ಈಗ ಅಪ್ಪನಾಗ್ತಿನಿ ಅಂತ ಹೊರಟಿದ್ದಾರೆ. ಸಲ್ಲುಮಿಯಾ ಅಪ್ಪಯ್ಯ ಆಗ್ತಾ ಇರೋ ವಿಷ್ಯ ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರು ಸದ್ದು ಮಾಡ್ತಾ ಇದೆ..!

04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
Read more