
ಸೈಫ್ನ ರೋಸ್ಟ್ ಮಾಡಿ ಹೊತ್ತಿದ ಟೋಸ್ಟ್ ಮಾಡಿಹಾಕ್ತಾ ಇದ್ದಾರೆ. ಸೈಫ್ ಮನೆ ಮೇಲೆ ದುರ್ಷರ್ಮಿ ಅಟ್ಯಾಕ್ ಮಾಡಿ ಚಾಕು ಇರಿದಾಗ ಮರುಕ ಪಟ್ಟವರಿಗಿಂತ ಕಾಲೆಳೆದವರೇ ಹೆಚ್ಚು. ನೂರಾರು ಕೋಟಿ ಬಾಳುವ ಸೈಫ್ ಮನೆಗೆ ಇಷ್ಟು ಸೆಕ್ಯೂರಿಟಿ ಕೂಡ ಇಲ್ವಾ ಅಂತ ಟ್ರೋಲ್ ಮಾಡಲಾಯ್ತು.
ಸೈಫ್ ಅಲಿ ಖಾನ್ನ ಎಲ್ಲರೂ ಬಾಲಿವುಡ್ ನವಾಬ್ ಅಂತಾನೇ ಕರೀತಾರೆ. ನವಾಬರ ಕುಟುಂಬದಿಂದ ಬಂದ ಸೈಫ್ ಸಾವಿರಾರು ಕೋಟಿಯ ಒಡೆಯ. ಇಂಥಾ ಸೈಫ್ ತಮ್ಮ ಮನೆಗೆ ಸೆಕ್ಯೂರಿಟಿ ಇಟ್ಟುಕೊಳ್ಳದೇ ದುಷ್ಕರ್ಮಿಯಿಂದ ಚಾಕು ಇರಿತಕ್ಕೆ ಒಳಗಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇದೀಗ ತಮ್ಮನ್ನ ಆಸ್ಪತ್ರೆ ಸೇರಿಸಿ ಜೀವ ಉಳಿಸಿದ ಆಟೋ ಡ್ರೈವರ್ಗೆ ಸೈಫ್ ಕೊಟ್ಟಿರೋ ಹಣವನ್ನ ನೋಡಿ ಒನ್ಸ್ ಅಗೈನ್ ಎಲ್ಲರೂ ಸೈಫ್ನ ಟ್ರೋಲ್ ಮಾಡ್ತಾ ಇದ್ದಾರೆ. ಸೈಫ್ ಅಲಿ ಖಾನ್ಗೆ ಅದ್ಯಾಕೋ ಅದೃಷ್ಟವೇ ನೆಟ್ಟಗಿಲ್ಲ. ಒಂದು ಕಡೆ ದುಷ್ಕರ್ಮಿಯಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ರು. 15 ಸಾವಿರ ಕೋಟಿ ಬೆಲೆಯ ಮಧ್ಯಪ್ರದೇಶದ ಆಸ್ತಿ ಕೈ ತಪ್ಪುವ ಸನ್ನಿವೇಶ ಎದುರಾಗಿದೆ. ಇಷ್ಟೆಲ್ಲದರ ನಡುವೆ ಸೈಫ್ನ ನಮ್ಮ ಟ್ರೋಲಿಗರು ಹುರಿದು ಮುಕ್ತಾ ಇದ್ದಾರೆ.
ಸೈಫ್ನ ರೋಸ್ಟ್ ಮಾಡಿ ಹೊತ್ತಿದ ಟೋಸ್ಟ್ ಮಾಡಿಹಾಕ್ತಾ ಇದ್ದಾರೆ. ಸೈಫ್ ಮನೆ ಮೇಲೆ ದುರ್ಷರ್ಮಿ ಅಟ್ಯಾಕ್ ಮಾಡಿ ಚಾಕು ಇರಿದಾಗ ಮರುಕ ಪಟ್ಟವರಿಗಿಂತ ಕಾಲೆಳೆದವರೇ ಹೆಚ್ಚು. ನೂರಾರು ಕೋಟಿ ಬಾಳುವ ಸೈಫ್ ಮನೆಗೆ ಇಷ್ಟು ಸೆಕ್ಯೂರಿಟಿ ಕೂಡ ಇಲ್ವಾ ಅಂತ ಟ್ರೋಲ್ ಮಾಡಲಾಯ್ತು. ಇನ್ನೂ ಸೈಫ್ ಬಳಿ ಕೋಟ್ಯಂತರ ಬಾಳುವ ಐಷಾರಾಮಿ ಕಾರುಗಳಿವೆ. ಆದ್ರೆ ಆವತ್ತು ರಾತ್ರಿ ಸೈಫ್ನ ಆಸ್ಪತ್ರೆ ಸೇರಿಸೋಕೆ ಒಂದು ಕಾರ್ ಕೂಡ ಉಪಯೋಗಕ್ಕೆ ಬರಲಿಲ್ಲ. ಯಾಕಂದ್ರೆ ಚಾಲಕರು ಕೆಲಸ ಮುಗಿಸಿ ಮನೆಗೆ ಹೋಗಿದ್ರು. ಕೊನೆಗೆ ಆಟೋ ಡ್ರೈವರ್ ಒಬ್ಬ ಸೈಫ್ನ ಆಸ್ಪತ್ರೆ ಸೇರಿಸಿದ್ದ. ಅಷ್ಟೆಲ್ಲಾ ಕೋಟಿಯ ಕಾರಿದ್ದು ಏನು ಪ್ರಯೋಜನ, ನೈಟ್ ಶಿಫ್ಟ್ ಗೆ ಒಬ್ಬ ಟ್ರೈವರ್ ನೇಮಿಸಿಕೊಂಡಿಲ್ವಾ ಅಂತ ಸೈಫ್ನ ಟ್ರೋಲ್ ಮಾಡಿದ್ರು. ಮತ್ತೀಗ ಒನ್ಸ್ ಅಗೈನ್ ಸೈಫ್ ಟ್ರೋಲ್ ಮಟೀರಿಯಲ್ ಆಗಿದ್ದಾರೆ.
ಇತ್ತೀಚಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೈಫ್, ತಮ್ಮನ್ನ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದ ಆಟೋ ಡ್ರೈವರ್ನ ಭೇಟಿ ಮಾಡಿದ್ರು. ಆತನಿಗೆ ಖುಷಿಯಿಂದ ಒಂದಿಷ್ಟು ಹಣ ಕೊಟ್ಟಿದ್ರು. ತಮ್ಮ ಜೀವ ಉಳಿಸಿದ ವ್ಯಕ್ತಿಗೆ ಸೈಫ್ ಒಂದು ಹತ್ತು ಲಕ್ಷನಾದ್ರೂ ಕೊಟ್ಟಿರಬಹುದು ಅಂತ ಜನ ಅಂದುಕೊಂಡಿದ್ರು. ಆದ್ರೆ ಸೈಫ್ ಕೊಟ್ಟಿದ್ದು ಜುಜುಬಿ 50 ಸಾವಿರ. ಇದನ್ನ ನೋಡಿದ ಟ್ರೋಲಿಗರು ಇವನೆಂಥಾ ಕಂಜೂಸ್ ಖಾನ್ ಅಂತ ಕಾಲೆಳೀತಾ ಇದ್ದಾರೆ. ಸೈಫ್ ನವಾಬರ ವಂಶಕ್ಕೆ ಸೇರಿದವರು. ತನ್ನ ಜೀವ ಉಳಿಸಿದವರಿಗೆ ಒಂದಿಷ್ಟು ಲಕ್ಷ ಕೊಟ್ಟಿದ್ರೆ ಏನ್ ತಾನೇ ಕಳೆದುಕೊಳ್ತಾ ಇದ್ರು. ಇವರ ಜೀವಕ್ಕೆ ಇಷ್ಟೆನಾ ಬೆಲೆ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ. ಚಿಲ್ಲರೆ ಹಣ ಕೊಟ್ಟಿದ್ದಕ್ಕೆ ಸೈಫ್ಗೆ ಚಿಲ್ಲರೆ ನವಾಬ ಅಂತ ಬಿರುದು ಕೊಟ್ಟಿದ್ದಾರೆ. ಒಟ್ಬಲ್ಲಿ ಮೊದಲೇ ಚೂರಿ ಚುಚ್ಚಿಸಿಕೊಂಡು ಹೊಲಿಗೆ ಹಾಕಿಸಿಕೊಂಡು ಬಂದಿರೋ ಸೈಫ್ಗೆ ಈ ಚುಚ್ಚು ಮಾತುಗಳು ಮತ್ತಷ್ಟು ಘಾಸಿ ಮಾಡ್ತಾ ಇವೆ. ಸೈಫ್ ಯಾಕೋ ನನ್ನ ಟೈಮೇ ಸರಿಯಿಲ್ಲ ಅಂತ ಪತ್ನಿ ಕರೀನಾ ಮುಂದೆ ಕಣ್ಣೀರು ಹಾಕ್ತಾ ಇದ್ದಾರಂತೆ..!