Nov 23, 2021, 2:15 PM IST
ಬಾಲಿವುಡ್ ನಟ ರಣವೀರ್ ಸಿಂಗ್ (Ranveer Sing) ಎಷ್ಟು ಕ್ರೇಜಿ ಎಂದು ಎಲ್ಲರಿಗೂ ಗೊತ್ತಿದೆ. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅಭಿಮಾನಿಗಳನ್ನು ಮನೋರಂಜಿಸುತ್ತಾರೆ. ಆನ್ ಸ್ಕ್ರೀನ್ ಮಾತ್ರವಲ್ಲದೇ ಆಫ್‌ಸ್ಕ್ರೀನ್ ಕೂಡ ಸಿಕ್ಕಾಪಟ್ಟೆ ಕ್ರೇಜಿ ಮ್ಯಾನ್ (Crazy man) ಎಂದು ಅನೇಕ ಬಾರಿ ಸಾಬೀತು ಮಾಡಿದ್ದಾರೆ. ಅದರಲ್ಲಿಯೂ ಕೆಲವು ದಿನಗಳ ಹಿಂದೆ ಬಿಗ್ ಪಿಕ್ಚರ್ (The Big pictures) ಕಾರ್ಯಕ್ರಮದಲ್ಲಿ ಏಕ್ತಾ ಕಪೂರ್ (Ekta Kapoor) ಮತ್ತು ನಟಿ ಮೌನಿ ರಾಯ್ (Mouni Roy) ಎದುರು ರಣವೀರ್ ಸಿಂಗ್ ಡ್ಯಾನ್ಸ್ ಮಾಡಿದ್ದಾರೆ. ಏಕ್ತಾ ಕಪೂರ್ ಬಂದಿದ್ದಾರೆ ಎಂದ ಮೇಲೆ ನಾನು ನಾಗರಾಜ್ ಪಾತ್ರಕ್ಕೆ ಆಡಿಷನ್ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಅಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment