ಮಲೆನಾಡ ಕಾಫಿಗೆ ಮರುಳಾಗದವರೇ ಇಲ್ಲ. ಮತ್ತೆ ಮತ್ತೆ ಬೇಕೆನಿಸುವ ಮಲೆನಾಡಿದ ಫಿಲ್ಟರ್ ಕಾಫಿಗೆ ಎಲ್ಲರೂ ಅಭಿಮಾನಿಗಳೇ. ಆ ಘಮ, ಬಣ್ಣ, ರುಚಿ ಎಲ್ಲರನ್ನೂ ಮೋಡಿ ಮಾಡುತ್ತದೆ. ಇದಕ್ಕೆ ಬಾಲಿವುಡ್ ಕೂಡಾ ಹೊರತಲ್ಲ. ಬಾಲಿವುಡ್ ಮಂದಿಗೂ ಮೆಲನಾಡು ಕಾಫಿ ಅಂದರೆ ಅಚ್ಚುಮೆಚ್ಚು. ಮಲೆನಾಡು ಸಕಲೇಶಪುರದ ಫಿಲ್ಟರ್ ಕಾಫಿ ಸವಿದು ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಅದರ ಸ್ವಾದವನ್ನು ಹಾಡಿ ಹೊಗಳಿದ್ದಾರೆ.
ಹಾಸನ(ಜ.23): ಮಲೆನಾಡ ಕಾಫಿಗೆ ಮರುಳಾಗದವರೇ ಇಲ್ಲ. ಮತ್ತೆ ಮತ್ತೆ ಬೇಕೆನಿಸುವ ಮಲೆನಾಡಿದ ಫಿಲ್ಟರ್ ಕಾಫಿಗೆ ಎಲ್ಲರೂ ಅಭಿಮಾನಿಗಳೇ. ಆ ಘಮ, ಬಣ್ಣ, ರುಚಿ ಎಲ್ಲರನ್ನೂ ಮೋಡಿ ಮಾಡುತ್ತದೆ. ಇದಕ್ಕೆ ಬಾಲಿವುಡ್ ಕೂಡಾ ಹೊರತಲ್ಲ. ಬಾಲಿವುಡ್ ಮಂದಿಗೂ ಮೆಲನಾಡು ಕಾಫಿ ಅಂದರೆ ಅಚ್ಚುಮೆಚ್ಚು. ಮಲೆನಾಡು ಸಕಲೇಶಪುರದ ಫಿಲ್ಟರ್ ಕಾಫಿ ಸವಿದು ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಅದರ ಸ್ವಾದವನ್ನು ಹಾಡಿ ಹೊಗಳಿದ್ದಾರೆ.
ಕಾಫಿ ಬೀಜ ಹಳೆಯದಾಗಿದ್ಯಾ? ಹೀಗ್ ಪುನರ್ಬಳಸಿ
ಸಕಲೇಶಪುರದ ಫಿಲ್ಟರ್ ಕಾಫಿ ಕುಡಿದು, ವಂಡರ್ ಫುಲ್ ಎಂದ ಆಶಿಶ್ ವಿದ್ಯಾರ್ಥಿ ಕಾಫಿಯ ರುಚಿಗೆ ತಲೆದೂಗಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ಇದ್ದಾಗಲೇ ಸಕಲೇಶಪುರದಲ್ಲಿ ಓಡಾಡಿ ಊರಿನ ಸೌಂದರ್ಯ ಕಣ್ತುಂಬಿಕೊಂಡ ನಟ ಕಾಫಿ ಕುರಿತ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ಒಂದರ ಶೂಟಿಂಗ್ ಸಂಬಂಧ ಮಂಗಳೂರಿನಿಂದ ಸಕಲೇಶಪುರಕ್ಕೆ ಬಂದಿದ್ದ ಆಶಿಶ್ ಸಕಲೇಶಪುರವನ್ನು ಎಕ್ಸ್‌ಪ್ಲೋರ್ ಮಾಡಿದ್ದಾರೆ. ಸಕಲೇಶಪುರ ಸಮೀಪದ ಹೊಸೂರು ಎಸ್ಟೇಟ್ ಹೋಟೆಲ್‌ಗೆ ಭೇಟಿ ನೀಡಿದ್ದು, ಸಕಲೇಶಪುರ ಪಟ್ಟಣದಲ್ಲಿ ಕೆಲ ಸ್ಥಳೀಯರನ್ನು ಮಾತನಾಡಿಸಿ ಹೊರಟಿದ್ದಾರೆ. ಸಕಲೇಶಪುರ ಸೌಂದರ್ಯ ವರ್ಣಿಸಿರುವ ನಟ ಆಶಿಶ್ ವಿದ್ಯಾರ್ಥಿ ವಿಶೇಷವಾಗಿ ಕಾಫಿ ರುಚಿಗೆ ಮನಸೋತಿದ್ದಾರೆ.