ಕನ್ನಡದಲ್ಲೂ ರಿಲೀಸ್ ಆಗಲಿದೆ 'ಅವತಾರ್ -2': ಕನ್ನಡಿಗರ ಆಕ್ರೋಶಕ್ಕೆ ಮಣಿದ ಚಿತ್ರತಂಡ

ಕನ್ನಡದಲ್ಲೂ ರಿಲೀಸ್ ಆಗಲಿದೆ 'ಅವತಾರ್ -2': ಕನ್ನಡಿಗರ ಆಕ್ರೋಶಕ್ಕೆ ಮಣಿದ ಚಿತ್ರತಂಡ

Published : Nov 12, 2022, 11:44 AM IST

ಹಾಲಿವುಡ್‌ನ `ಅವತಾರ್ 2′ ಸಿನಿಮಾದ ಕನ್ನಡದಲ್ಲಿ ರಿಲೀಸ್ ಆಗಿಲಿದ್ದು, ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ `ಅವತಾರ್ 2′ ಟ್ರೈಲರ್ ರಿಲೀಸ್ ಆಗಿ, ಸಖತ್ ಸೌಂಡ್ ಮಾಡಿತ್ತು. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಆಗಿತ್ತು. ಆದರೆ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಕನ್ನಡಿಗರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದರು. ಪ್ರತಿ ಬಾರಿ ಕನ್ನಡಕ್ಕೆ ಯಾಕೆ ಅನ್ಯಾಯ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕನ್ನಡದಲ್ಲೂ ಟ್ರೈಲರ್ ರಿಲೀಸ್ ಮಾಡಿದೆ ಅವತಾರ್ 2 ಚಿತ್ರತಂಡ. ಅವತಾರ್ ಮೊದಲ ಭಾಗದಲ್ಲಿ ಪಂಡೋರಾ ಎಂಬ ನಿಗೂಢ ಗ್ರಹವನ್ನೇ ಸೃಷ್ಟಿ ಮಾಡಲಾಗಿತ್ತು. ಈ ಬಾರಿಯೂ ನಿರ್ದೇಶಕರು ಪ್ರೇಕ್ಷಕರನ್ನು ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗಲಿದ್ದು, ಅವತಾರ್ ಎರಡನೇ ಭಾಗವನ್ನು ಆಧುನಿಕ ತಂತ್ರಜ್ಞಾನದಿಂದ ಕಟ್ಟಿಕೊಟ್ಟಿದ್ದಾರೆ. ಕಣ್ಮನ ಸೆಳೆಯುವ ಗ್ರಾಫಿಕ್ಸ್ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದರಲ್ಲೂ ತ್ರಿಡಿ ತಂತ್ರಜ್ಞಾನದಲ್ಲಿ ಅವತಾರ್ 2 ಕಣ್ತುಂಬಿಕೊಳ್ಳುವುದೇ ಹಬ್ಬ. ಈ ಬಾರಿ ಸಮುದ್ರ ಆಳದಲ್ಲಿ ಬಹುತೇಕ ಕಥೆ ನಡೆಯುತ್ತದೆ. ಅದನ್ನು ತೆರೆಯಲ್ಲಿ ನೋಡುವುದು ಇನ್ನೂ ರೋಚಕವಾಗಿರುತ್ತದೆ.

Raana Review: ಸಮರ ಕಲೆ ಮೈದಾನದಲ್ಲಿ ರಣ ರಣ ರಾಣ

02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ