10 ಕೋಟಿ ಆಫರ್ ರಿಜೆಕ್ಟ್ ಮಾಡಿದ ಅಲ್ಲು ಅರ್ಜುನ್: ಎಷ್ಟು ಕೋಟಿ ಕೊಟ್ರು ನಾನು ಅದನೆಲ್ಲಾ ಮಾಡಲ್ಲ ಎಂದ ನಟ

Dec 17, 2023, 10:33 AM IST

ನಟ ಅಲ್ಲು ಅರ್ಜುನ್(Allu Arjun) 10 ಕೋಟಿ ಆಫರ್‌ನನ್ನು ರಿಜೆಕ್ಟ್‌ ಮಾಡಿದ್ದಾರಂತೆ. ಈ ರೀತಿ ಒಂದು ಸುದ್ದಿ ಫುಲ್ ವೈರಲ್‌ ಆಗಿದೆ. ಪುಷ್ಪ ಸಿನಿಮಾದಲ್ಲಿ ಮದ್ಯಪಾನ , ಧೂಮಪಾನ ಮತ್ತು ಪಾನ್ ಜಗಿಯುವ ಎಲ್ಲಾ ದೃಶ್ಯಗಳು ಇವೆ. ಹೀಗಾಗಿ ಜನಪ್ರಿಯ ಲಿಕ್ಕರ್‌ ಮತ್ತು ಪಾನ್‌ ಬ್ರಾಂಡ್‌ ಕಂಪನಿಯೊಂದು(Liquor and Pan Brand) ಬ್ರಾಂಡ್‌ನ ಲೋಗೋವನ್ನು ಪ್ರದರ್ಶಿಸಲು ನಟನಿಗೆ ಆಫರ್ ನೀಡಿದೆ. ಆದ್ರೆ ನಟ ಅಲ್ಲು ಅರ್ಜುನ್‌ ಈ ಆಫರ್‌ನನ್ನು ತಿರಸ್ಕರಿಸಿದ್ದಾರೆ. ಸಿನಿಮಾದ ಹೀರೋ ಕುಡಿಯುವ , ಸಿಗರೇಟು ಸೇದುವ, ಪಾನ್‌ ಮಸಾಲ ಜಗಿಯುವ ಸಂದರ್ಭದಲ್ಲಿ ತಮ್ಮ ಬ್ರಾಂಡ್‌ ಹೆಸರು ಎಲ್ಲಾದರೂ ಕಾಣಿಸುವಂತೆ ಮಾಡುವ ಬೇಡಿಕೆಯನ್ನು ಇಟ್ಟಿದೆ. ಆದರೆ, ಈ ಆಫರ್‌ಗೆ ಅಲ್ಲು ಅರ್ಜುನ್‌ ನೋ ಎಂದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ವೀಕ್ಷಿಸಿ:  ಡಾಲಿ ಹೊಸ ಸಿನಿಮಾ 'ಅಣ್ಣ From Mexico': ಮತ್ತೆ ಒಂದಾದ ಬಡವ ರಾಸ್ಕಲ್ ಚಿತ್ರತಂಡ..!