ಅಲ್ಲು ಅರವಿಂದ್, ರವಿ ತೇಜಾಗೆ ತಿರುಗೇಟು ನೀಡಿದ ಯಶ್ ಫ್ಯಾನ್ಸ್..!

ಅಲ್ಲು ಅರವಿಂದ್, ರವಿ ತೇಜಾಗೆ ತಿರುಗೇಟು ನೀಡಿದ ಯಶ್ ಫ್ಯಾನ್ಸ್..!

Published : Nov 12, 2023, 09:29 AM IST

ಯಶ್ ಸ್ಯಾಂಡಲ್‌ವುಡ್‌ನ ಲಕ್ಕಿ ಸ್ಟಾರ್. ಅಭಿಮಾನಿಗಳ ರಾಕಿಂಗ್ ಸ್ಟಾರ್. ಈಗ ಭಾರತೀಯ ಚಿತ್ರರಂಗಕ್ಕೆ ನ್ಯಾಷನಲ್ ಸ್ಟಾರ್ ಆಗಿದ್ದಾರೆ.
 

ಯಶ್ ಹೀರೋ ಆಗಿ ಎಂಟ್ರಿ ಆಗುತ್ತಿದ್ದಂತೆ ಅವರ ಗುರಿ ಇದ್ದದ್ದು ತನ್ನ ಕಟೌಟ್ ಆಲ್ ಇಂಡಿಯಾದಲ್ಲಿ ನಿಲ್ಲಬೇಕು ಅನ್ನೋದು. ಕೆಜಿಎಫ್‌ನಿಂದ ಆ ಗುರಿಯನ್ನ ಸಾಧಿಸಿ ಆಗಿದೆ. ಇಷ್ಟೆಲ್ಲಾ ಆದ್ಮೇಲೆ ರಾಕಿ ಅಂದ್ರೆ ಉರ್ಕೋಳ್ಳೋರು ಇಲ್ದೆ ಇರ್ತಾರಾ. ಅವ್ರೆಲ್ಲಾ ಈಗ ಒಬ್ಬೊಬ್ರಾಗೆ ಹುತ್ತದಿಂದ ಎದ್ದು ಬರ್ತಿದ್ದಾರೆ ಅಂತ ಯಶ್ ಫ್ಯಾನ್ಸ್(Yash Fans) ಹೇಳ್ತಿದ್ದಾರೆ. ಯಶ್(Yash) ಬೆಳವಣಿಗೆಯನ್ನ ಕೆಲವ್ರಿಗೆ ಸಹಿಸಿಕೊಳ್ಳಾಗ್ತಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್‌ಗಳನ್ನ ಕೊಟ್ಟಿದ್ದಾರೆ ರಾಕಿ ಫ್ಯಾನ್ಸ್. ಇತ್ತೀಚೆಗೆ ತೆಲುಗು ನಟ ರವಿ ತೇಜಾ (Ravi Teja)ಯಶ್ ಬಗ್ಗೆ ಹಗೂರವಾಗಿ ಮಾತಾಡಿದ್ರು. ಇದನ್ನ ನೋಡಿದ್ದ ಯಶ್ ಫ್ಯಾನ್ಸ್ ರವಿ ತೇಜಾ ರಾಕಿಗೆ ಕ್ಷಮೆ ಕೇಳಬೇಕು ಅಂತ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಶ್ ಸಕ್ಸಸ್‌ಫುಲ್‌ ಸ್ಟಾರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅದನ್ನ ಒಪ್ಪೋಕೆ ಕೆಲವರಿಂದ ಆಗ್ತಿಲ್ಲ. ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್(Allu Aravind) ಕೂಡ ರಾಕಿ ಬಗ್ಗೆ ಉಡಾಫೆಯಾಗಿ ಮಾತಾಡಿದ್ರು. 'KGF' ಬರೋಕ್ಕೆ ಮುಂಚೆ ಯಶ್‌ ಯಾರು.? ಆತ ಎಷ್ಟು ದೊಡ್ಡ ಹೀರೋ ಹೇಳಿ ನೋಡೋಣಾ ಅಂತ ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಮಾತಾಡಿದ್ರು.. ಇದನ್ನ ಕೇಳಿಸಿಕೊಂಡ ಫ್ಯಾನ್ಸ್ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಶ್ ವಿರುದ್ಧ ಇವರೆಲ್ಲಾ ಮಾತಾಡ್ತಿರೋದನ್ನ ನೋಡಿದ್ರೆ ರಾಕಿ ಸಿನಿಮಾದ ಒಂದೊಂದು ಡೈಲಾಗ್ಗಳು ಈಗ ಮತ್ತೆ ರಿಪೀಟ್ ಆಗ್ತಿವೆ. ಮಾಸ್ಟರ್ ಪೀಸ್ ಸಿನಿಮಾದಲ್ಲಿ ಯಶ್ ನಮ್ಮನ್ ಕಂಡ್ರೆ ಉರ್ಕೋಳೋರು ಒಬ್ರಾ ಇಬ್ರಾ ಅಂತ ಡೈಲಾಗ್ ಹೊಡೆದಿದ್ರು. ಅಷ್ಟೆ ಅಲ್ಲ ದುಶ್ಮನ್ ಕಹಾ ಹೈ ಅಂದ್ರೆ ಊರ್ತುಂಬಾ ಹೈ ಅಂತ ಹೇಳಿದ್ರು.

ಇದನ್ನೂ ವೀಕ್ಷಿಸಿ:  ಬೆಳ್ಳಿತೆರೆ ಮೇಲೆ ಬೆಳಗುತ್ತಿದೆ ಮತ್ತೊಂದು ದೇಸಿ ಕಥೆ! ಯೋಗರಾಜ್ ಭಟ್-ಬಿ.ಸಿ. ಪಾಟೀಲ್ 'ಗರಡಿ' ಹೇಗಿದೆ?

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್