Feb 18, 2022, 5:42 PM IST
ಜ್ಯೂ.ಎನ್ಟಿಆರ್ (Jr NTR) ಈಗಾಗಲೇ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅವರು ನಟಿಸಿರುವ 'ಆರ್ಆರ್ಆರ್' (RRR) ಬಿಡುಗಡೆಗೆ ಸಿದ್ದವಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಅವರ ಅಭಿಮಾನಿಗಳ ಸಂಖ್ಯೆಯಲ್ಲೂ ದಿನೆ ದಿನೇ ಏರಿಕೆಯಾಗುತ್ತಿದೆ. ವಿಶೇಷವೆಂದರೆ ಈ ಅಭಿಮಾನಿಗಳ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್ (Bollywood) ಸೆಲೆಬ್ರಿಟಿಗಳೂ ಸೇರುತ್ತಿದ್ದಾರೆ. ಹೌದು! ಇತ್ತೀಚೆಗೆ ಹಿಂದಿ ಚಿತ್ರರಂಗದ ನಟಿ ಆಲಿಯಾ ಭಟ್ (Alia Bhatt) ಜ್ಯೂ.ಎನ್ಟಿಆರ್ ಬಗ್ಗೆ ಮಾತನಾಡಿರುವುದು ಈಗ ಸಖತ್ ಸುದ್ದಿಯಾಗಿದೆ.
Gangubai Kathiawadi: ಆಲಿಯಾ ಭಟ್ ವಿರುದ್ಧ ಅಸಮಾಧಾನ ಹೊರಹಾಕಿದ ಕಂಗನಾ
ರಾಜಮೌಳಿ (Rajamouli) ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ (RamCharan) ಜತೆಯಾಗಿ ಅಭಿನಯಿಸಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಜ್ಯೂ.ಎನ್ಟಿಆರ್ ಅವರನ್ನು ಗಮನಿಸಿರುವ ಆಲಿಯಾಗೆ ನಟನ ಕಾರ್ಯವೈಖರಿ ಹಿಡಿಸಿದೆ. ಮಾತ್ರವಲ್ಲದೇ ಅವರ ಅಭಿಮಾನಿಗಳನ್ನು ಕಂಡು ಅಚ್ಚರಿಯಾಗಿದೆ. ಜತೆಗೆ ಅಭಿಮಾನಿಗಳ ನಿಷ್ಠೆಯನ್ನು ಹೊಗಳಿರುವ ಆಲಿಯಾ, ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ ಎಂದು ವಿಶೇಷ ಬೇಡಿಕೆ ಇಟ್ಟಿದ್ದಾರೆ. ಆಲಿಯಾ ಅವರ ಈ ಮಾತುಗಳು ಸದ್ಯ ಜ್ಯೂ.ಎನ್ಟಿಆರ್ ಫ್ಯಾನ್ಸ್ ವಲಯದಲ್ಲಿ ಸಖತ್ ವೈರಲ್ (Viral) ಆಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment