ಸೋಲು ಮರೆತು ವಾಲಿಬಾಲ್ ಆಡಿದ ಅಕ್ಷಯ್ ಕುಮಾರ್: ಅಕ್ಕಿಯ ಆಟ ನೋಡಲು ಜನವೋ ಜನ!

May 29, 2023, 1:01 PM IST

ಬಾಲಿವುಡ್‌ನ ಅಕ್ಕಿ ಅಕ್ಷಯ್ ಕುಮಾರ್ ಬೆಳ್ಳಿತೆರೆ ಮೇಲೆ ಸಾಲು ಸಾಲು ಸಿನಿಮಾಗಳ ಸೋಲು ಅನುಭವಿಸಿದ್ದಾರೆ. ಆದ್ರೆ ಈ ಸೋಲಿನ ನೋವು ಮರೆತು ಅಕ್ಷಯ್ ಕುಮಾರ್ ವಾಲಿಬಾಲ್ ಆಟ ಆಡಿ ಎಲ್ಲರ ಹೃದಯ ಗೆದ್ದಿದ್ದಾರೆ.  ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೂಡ ಅಕ್ಷಯ್ ಕುಮಾರ್ (Akshay Kumar) ಅವರು ತುಂಬ ಆ್ಯಕ್ಟೀವ್. ಇದೀಗ ಪೊಲೀಸರ ಜೊತೆ ವಾಲಿಬಾಲ್ ಆಡಿದ್ದಾರೆ ಅಕ್ಷಯ್ ಕುಮಾರ್. ‘ಶಂಕರ’ ಸಿನಿಮಾದ ಶೂಟಿಂಗ್ ಸಲುವಾಗಿ ಡೆಹರಾಡೂನ್ಗೆ ತೆರಳಿದ್ದ ಅಕ್ಷಯ್ ಕುಮಾರ್ ಬಿಡುವಿನ ವೇಳೆ ವಾಲಿಬಾಲ್ ಆಡಿದ್ದಾರೆ. ಅಕ್ಕಿಯ ವಾಲಿಬಾಲ್ ಆಟದ ಮ್ಯಾಚ್ ನೋಡೋಕೆ  ಸ್ಟೇಡಿಯಂ ತುಂಬ ಜನ ಸೇರಿದ್ರು. ಅಕ್ಕಿ ವಾಲಿ ಬಾಲ್ ಆಟದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.