May 19, 2022, 7:40 PM IST
ಕೆಜಿಎಫ್ ಒಂದು ಸಿನಿಮಾದಿಂದ, ಇಡೀ ಭಾರತೀಯ ಚಿತ್ರರಂಗಕ್ಕೆ ಸೌತ್ ಸಿನಿಮಾ ತಾಕತ್ತು ಏನು ಅನ್ನೋದು ಗೊತ್ತಾಗಿದೆ. ಮೂಲಗಳ ಪ್ರಕಾರ ಕೆಜಿಎಫ್ 2 ಸಿನಿಮಾ 1200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಲಿವುಟ್‌ನಲ್ಲಿಯೇ ಕೆಜಿಎಫ್ 2, 420 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಕನ್ನಡ ಸಿನಿಮಾವೊಂದು ಈ ಮಟ್ಟಕ್ಕೆ ಕಲೆಕ್ಷನ್ ಮಾಡಿದ್ದು ಇದೇ ಮೊದಲು. ಹಾಗಾಗಿ ಈಗ ಸೌತ್ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಬ್ಯುಸಿನೆಸ್ ವಿಚಾರದಲ್ಲಿಯೂ ಕೂಡ ಸಖತ್ತಾಗಿ ವರ್ಕ್ ಔಟ್ ಆಗ್ತಿದೆ. ಇನ್ನು ವಿಶೇಷ ಅಂದ್ರೆ ಕೆಜಿಎಫ್ 2 ಚಿತ್ರದ ಈ ಸಕ್ಸಸ್ ಪುಷ್ಪ ಪಾರ್ಟ್ 2 ಸಿನಿಮಾ ಬಂಪರ್ ಆಫರ್ ತಂದು ಕೊಟ್ಟಿದೆ. ಕೆಜಿಎಫ್ 2 ಸಕ್ಸಸ್ ನಂತ್ರ ಪ್ಯಾನ್ ಇಂಡಿಯಾ ಚಿತ್ರಗಳಿಗೆ ಹೆಚ್ಚು ಡಿಮ್ಯಾಂಡ್ ಕ್ರಿಯೆಟ್ ಆಗಿದೆ.
ಸೌತ್ ಚಿತ್ರಗಳಿಗೆ ಬಂಡವಾಳ ಹಾಕಲು ನಾ ಮುಂದು, ತಾ ಮುಂದು ಅಂತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು. ಬಾಲಿವುಡ್‌ನಲ್ಲಿಯೂ 100 ಕೋಟಿಗೂ ಅಧಿಕ ಕಲೇಕ್ಷನ್ ಮಾಡಿತ್ತು ಪುಷ್ಪ ಚಿತ್ರ. ಪುಷ್ಟ ಚಿತ್ರಮೆಚ್ಚಿದ ಬಾಲಿವುಡ್ ಮಂದಿ ಈಗ ಪುಷ್ಪ 2ಗಾಗಿ ಕಾತುರರಾಗಿದ್ದಾರೆ. ಈಗಾಗಲೇ ಅದರ ಮೇಲೆ ಇನ್ವೆಸ್ಟ್ ಮಾಡಲು ಶುರು ಮಾಡಿದ್ದಾರೆ. ಪುಷ್ಪ ಪಾರ್ಟ್ 2 ಸಿನಿಮಾ ಚಿತ್ರೀಕರಣ ಇನ್ನು ಶುರುವಾಗಿಲ್ಲ. ಆದ್ರೆ ಸಿನಿಮಾದ ಓಟಿಟಿ ರೈಟ್ಸ್ ಈಗಾಗಲೇ ಸೇಲ್ ಆಗಿದೆ. ಹಾಗಂತ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗ್ತಿಲ್ಲ. ಥಿಯೇಟರ್‌ನಲ್ಲಿ ರಿಲೀಸ್ ಆದ ನಂತರವೇ ಚಿತ್ರ ಓಟಿಟಿಯಲ್ಲಿ ಬರೋದು. ಪುಷ್ಪ 2 ಚಿತ್ರದ ಓಟಿಟಿ ಹಕ್ಕು ಬರೋಬ್ಬರಿ 300 ಕೋಟಿಗೆ ಸೇಲ್ ಆಗಿದ್ಯಂತೆ.
ರಾಕಿ ಅಭಿಮಾನಿಗಳ ಮೇಲಿನ ಅಭಿಮಾನಕ್ಕೆ ಸಲಾಂ: ಯಶ್ ಲೈಫ್‌ನ ಅಪರೂಪದ ವಿಡಿಯೋಗಳು!
ಇನ್ನು ಪುಷ್ಪ 2 ಸಿನಿಮಾದ ದಕ್ಷಿಣ ಭಾರತ ಭಾಷೆಯ ಸಿನಿಮಾ ಹಕ್ಕು 200 ಕೋಟಿಗೆ ಸೇಲ್ ಆಗಿದ್ದು, ಹಿಂದಿ ಭಾಷೆಯ ವಿತರಣೆ ಹಕ್ಕು 200 ಕೋಟಿಗೆ ಸೇಲ್ ಆಗಿದ್ಯಂತೆ. ಎಲ್ಲವೂ ಸೇರಿದ್ರೆ 700 ಕೋಟಿ ಬ್ಯುಸಿನೆಸ್ ಆಗಿದೆ. ಚಿತ್ರ ಸೆಟ್ಟೇರುವ ಮುನ್ನವೇ 700 ಕೋಟಿ ಬ್ಯುಸಿನೆಸ್ ಮಾಡಿ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸುವಂತಾಗಿದೆ. ಒಟ್ಟಾರೆ ಸಿನಿಮಾ ಶುರು ಆಗುವ ಮೊದಲೇ ಈ ಮಟ್ಟಕ್ಕೆ ಬ್ಯುಸಿನೆಸ್ ಆದ್ರೆ ಸಿನಿಮಾ ರಿಲೀಸ್ ಆದ್ಮೆಲೆ ಎಷ್ಟರ ಮಟ್ಟಿಗೆ ಕಲೆಕ್ಷನ್ ಆಗಬಹುದು ಅನ್ನೋ ಲೆಕ್ಕಾಚಾದಲ್ಲಿದ್ದಾರೆ ಟಾಲಿವುಡ್ ಮಂದಿ. ಸದ್ಯ ನಿರ್ದೇಶಕ ಸುಕುಮಾರ್ ವಿದೇಶದಲ್ಲಿದ್ದುಕೊಂಡು ಪುಷ್ಪ 2 ಸಿನಿಮಾಕಥೆ ರೆಡಿ ಮಾಡ್ತಿದ್ದು ಅಲ್ಲು ಅರ್ಜುನ್ ತಮ್ಮ ಪಾತ್ರಕ್ಕೆ ತಯಾರಿ ಮಾಡಿಕೊಳ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಬೇಸಿಗೆಗೆ ಚಿತ್ರ ತೆರೆಗೆ ಬರಲಿದೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies