ಅರೆರೇ ಕಮಲ್-ಶಂಕರ್ ಸಿನಿಮಾಗೆ ಇದೆಂಥಾ ದುಸ್ಥಿತಿ?: ಇಂಡಿಯನ್-2 ಸೋಲಿನ ಬಳಿಕ ಕಠಿಣ ನಿರ್ಧಾರ

ಅರೆರೇ ಕಮಲ್-ಶಂಕರ್ ಸಿನಿಮಾಗೆ ಇದೆಂಥಾ ದುಸ್ಥಿತಿ?: ಇಂಡಿಯನ್-2 ಸೋಲಿನ ಬಳಿಕ ಕಠಿಣ ನಿರ್ಧಾರ

Published : Oct 07, 2024, 11:46 AM IST

ಉಳಗನಾಯಗನ್ ಕಮಲ್ ಹಾಸನ್ ಮತ್ತು ಸ್ಟಾರ್ ಡೈರೆಕ್ಟರ್ ಶಂಕರ್ ಕಾಂಬಿನೇಷನ್​ನ ಬಹುನಿರೀಕ್ಷೆಯ ಇಂಡಿಯನ್-2 ಸಿನಿಮಾ ಹೀನಾಯವಾಗಿ ಸೋಲುಕಂಡಿದ್ದು ಗೊತ್ತೇ ಇದೆ. ಇಂಡಿಯನ್ -2 ಬಾಕ್ಸ್ ಆಫೀಸ್ ರಿಸಲ್ಟ್ ನೋಡಿ  ಇಂಡಿಯನ್-3 ಬರುತ್ತಾ ಇಲ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು.

ಉಳಗನಾಯಗನ್ ಕಮಲ್ ಹಾಸನ್ ಮತ್ತು ಸ್ಟಾರ್ ಡೈರೆಕ್ಟರ್ ಶಂಕರ್ ಕಾಂಬಿನೇಷನ್​ನ ಬಹುನಿರೀಕ್ಷೆಯ ಇಂಡಿಯನ್-2 ಸಿನಿಮಾ ಹೀನಾಯವಾಗಿ ಸೋಲುಕಂಡಿದ್ದು ಗೊತ್ತೇ ಇದೆ. ಇಂಡಿಯನ್ -2 ಬಾಕ್ಸ್ ಆಫೀಸ್ ರಿಸಲ್ಟ್ ನೋಡಿ  ಇಂಡಿಯನ್-3 ಬರುತ್ತಾ ಇಲ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಅದ್ರೆ ಇಂಡಿಯನ್-3 ಬರೋದು ಖಚಿತ. ಆದ್ರೆ ಕಮಲ್-ಶಂಕರ್ ಸಿನಿಮಾ ಥಿಯೇಟರ್​ಗೆ ಎಂಟ್ರಿ ಕೊಡಲ್ಲ. ಈ ಸುದ್ದಿ ಕೇಳಿದ್ರೆ ನೀವು ಕಮಲ್-ಶಂಕರ್​ ಸಿನಿಮಾಗೆ ಇದೆಂಥಾ ಗತಿ ಬಂತಪ್ಪಾ ಅಂದುಕೊಳ್ಳೋದು ಫಿಕ್ಸ್. 1996ರಲ್ಲಿ ಇಂಡಿಯನ್ ಸಿನಿಮಾ ಮಾಡಿ ಇಡೀ ಇಂಡಿಯಾವನ್ನೇ ತಿರುಗಿ ನೋಡುವಂತೆ ಮಾಡಿದ್ದ ಈ ಜೋಡಿ , ಈಗ ಮಾತ್ರ ಫ್ಲಾಪ್ ಜೋಡಿ ಅನ್ನಿಸಿಕೊಂಡಿದೆ. 

ಕಳೆದ ಜುಲೈನಲ್ಲಿ ತೆರೆಗೆ ಬಂದ ಇಂಡಿಯನ್ ಸಿನಿಮಾದ ಸಿಕ್ವೆಲ್ ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸಿ ಡಿಸಾಸ್ಟರ್ ಅನ್ನಿಸಿಕೊಳ್ತು. ದೊಡ್ಡ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಇಂಡಿಯನ್-2 ಸಿನಿಮಾಗೆ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂಸ್ ಬಂದವು. ಶಂಕರ್ ಇನ್ನೂ 90ರ ದಶಕದಲ್ಲೇ ಇದ್ದಾರೆ ಅಂತ ಫ್ಯಾನ್ಸ್ ಉಗಿದು ಉಪ್ಪಿನಕಾಯಿ ಹಾಕಿದ್ರು. 300ಕೋಟಿ ವೆಚ್ಚದಲ್ಲಿ ಸಿದ್ದವಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು ಜಸ್ಟ್ 150 ಕೋಟಿ. ಸಾಲದ್ದಕ್ಕೆ ಇಂಡಿಯನ್-2 ಕೊನೆಯಲ್ಲಿ ಇಂಡಿಯನ್-3 ಬರುತ್ತೆ ಅನ್ನೋ ಹಿಂಟ್ ಕೂಡ ಕೊಡಲಾಗಿತ್ತು. ಇಂಡಿಯನ್-2ನೇ ಇಷ್ಟು ದೊಡ್ಡ ಡಿಸಾಸ್ಟರ್ ಆಗಿದೆ. ಅಂದಮೇಲೆ ಇಂಡಿಯನ್-3 ಬರುತ್ತಾ ಇಲ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಈಗಾಗ್ಲೇ ಇಂಡಿಯನ್-3 ಬಹುತೇಕ ಶೂಟಿಂಗ್ ಕೂಡ ಆಗಿದ್ದು, ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನ ರಿಲೀಸ್ ಮಾಡೋಕೆ ನಿರ್ಧರಿಸಿದೆ. 

ಆದ್ರೆ ಥಿಯೇಟರ್ ನಲ್ಲಲ್ಲ. ಇಂಡಿಯನ್-3 ಸಿನಿಮಾವನ್ನ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡೋದಾಗಿ ಲೈಕಾ ಪ್ರೊಡಕ್ಷನ್ಸ್ ಅನೌನ್ಸ್ ಮಾಡಿದೆ. ಇಂಡಿಯನ್-2ಗೆ ಬಂದಿರೋ ರೆಸ್ಪಾನ್ಸ್ ನೋಡಿ ಇಂಡಿಯನ್-3 ಥಿಯೇಟ್ರಿಕಲ್ ರಿಲೀಸ್ ಮಾಡಿದ್ರೂ ಜನ ಬರೋದಿಲ್ಲ ಅನ್ನೋದು ನಿರ್ಮಾಪಕರಿಗೆ ಖಾತ್ರಿಯಾದಂತಿದೆ. ನೇರ OTT ರಿಲೀಸ್ ಮಾಡುವ ಮೂಲಕ ಒಂದಿಷ್ಟು ಬ್ಯುಸಿನೆಸ್ ಮಾಡಿಕೊಳ್ಳೋ ಪ್ಲ್ಯಾನ್​ನಲ್ಲಿ ಚಿತ್ರತಂಡ ಇದೆ. ಉಳಗನಾಯಗನ್ ಕಮಲ್ ಹಾಸನ್ ರಂಥಾ ಬಿಗ್ ಸ್ಟಾರ್, ಶಂಕರ್ ರಂಥಾ ಸ್ಟಾರ್ ಡೈರೆಕ್ಟರ್ ಮಾಡಿದ ಸಿನಿಮಾಗೆ ಇದೆಂಥಾ ಗತಿ ಬಂತಪ್ಪಾ ಎಲ್ಲರೂ ಕಾಲೆಳೀತಾ ಇದ್ದಾರೆ. ವಿಕ್ರಮ್ ಮೂಲಕ ಸಕ್ಸಸ್ ಫಾರ್ಮ್​ಗೆ ಬಂದಿದ್ದ ಕಮಲ್ ಹಾಸನ್​ಗೆ ಶಂಕರ್​ರಿಂದಲೇ ಈ ಗತಿ ಬಂತು ಅಂತ ಕಮಲ್ ಫ್ಯಾನ್ಸ್ ಕೆಂಡ ಆಗಿದ್ದಾರೆ.

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more