Feb 4, 2023, 10:24 AM IST
ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಪತ್ನಿ ಆಲಿಯಾ ಮಧ್ಯೆ ಯಾವುದು ಸರಿಯಿಲ್ಲ ಎಂದು ಕಳೆದ ಎರಡು ವರ್ಷಗಳ ಹಿಂದೆ ಜಗಜ್ಜಾಹೀರಾಗಿತ್ತು. ಅಲ್ಲಿಂದ ಇಂದಿನವರೆಗೆ ಇಬ್ಬರ ಮಧ್ಯೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಈಗ ನವಾಜುದ್ದೀನ್ ಮನೆಯವರು ಊಟ, ತಿಂಡಿ ಕೊಟ್ಟಿಲ್ಲ, ಬಾತ್‌ರೂಮ್‌ಗೆ ಹೋಗಲು ಬಿಡುತ್ತಿರಲಿಲ್ಲ, ಹಾಸಿಗೆ ಕೊಡುತ್ತಿರಲಿಲ್ಲ ಎಂದು ಆಲಿಯಾ ವಕೀಲರು ಹೇಳಿದ್ದಾರೆ. ಇನ್ನು ಕಳೆದ ಏಳು ದಿನಗಳಿಂದ ಆಲಿಯಾಗೆ ಆಹಾರ ಕೊಡೋದಿಲ್ಲ, ಹಾಸಿಗೆ ಇಲ್ಲ, ಬಾತ್‌ರೂಮ್ ಇಲ್ಲ ಎಂದು ಹೇಳಿದ್ದಾರೆ. ಆಲಿಯಾ ಸುತ್ತ ಬಾಡಿಗಾರ್ಡ್ಸ್ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಆಲಿಯಾ ಪ್ರಸ್ತುತ ಅಪ್ರಾಪ್ತ ಮಕ್ಕಳ ಜೊತೆಗೆ ಹಾಲ್‌ನಲ್ಲಿ ಇದ್ದಾರೆ. ಅಲ್ಲಿಯೂ ಸಿಸಿಟಿವಿ ಹಾಕಿದ್ದಾರೆ ಎಂದು ಆಲಿಯಾ ಪರ ವಕೀಲರು ಹೇಳಿಕೆ ನೀಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!