Mar 23, 2023, 11:37 AM IST
‘ಪುಷ್ಪ’ ಸಿನಿಮಾ ರಿಲೀಸ್ ಆಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ಚಿತ್ರದ ಬಗೆಗಿನ ಟಾಕ್ ಮಾತ್ರ ಇನ್ನೂ ನಿಂತಿಲ್ಲ. ಈ ಚಿತ್ರದ ‘ಸಾಮಿ ಸಾಮಿ..’ ಹಾಡು ಸಖತ್ ಫೇಮಸ್ ಆಯಿತು. ಇದರಲ್ಲಿ ರಶ್ಮಿಕಾ ಮಂದಣ್ಣ ಅವರ ಸ್ಟೆಪ್ನ ಅನೇಕರು ಇಷ್ಟಪಟ್ಟಿದ್ದರು. ಈಗಲೂ ಹಲವು ವೇದಿಕೆ ಮೇಲೆ ರಶ್ಮಿಕಾ ಈ ಸ್ಟೆಪ್ ಹಾಕುತ್ತಾರೆ. ಆದರೆ, ಇನ್ಮುಂದೆ ಅವರು ಈ ಸ್ಟೆಪ್ನ ಹಾಕದಿರಲು ನಿರ್ಧರಿಸಿದ್ದಾರೆ. ಸ್ವತಃ ಈ ವಿಚಾರವನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಇದನ್ನು ಅವರು ಗಂಭೀರವಾಗಿ ಹೇಳಿದರೋ ಅಥವಾ ಹಾಸ್ಯದ ರೀತಿಯಲ್ಲಿ ಹೇಳಿದರೋ ಎಂಬುದು ತಿಳಿದಿಲ್ಲ. ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್, ಟ್ವಿಟರ್ಗಳಲ್ಲಿ ಅವರು ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ಟ್ವಿಟರ್ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಮಾಡಿದ್ದರು.
ಅವರಿಗೆ ಎದುರಾದ ಕೆಲ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದರು. ಇದರಲ್ಲಿ ‘ಸಾಮಿ ಸಾಮಿ..’ ಹಾಡಿನ ವಿಚಾರವೂ ಪ್ರಸ್ತಾಪ ಆಗಿತ್ತು. ಈ ಉತ್ತರ ನೋಡಿ ಹಲವರು ಹಲವು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ‘ರಶ್ಮಿಕಾಗೆ ‘ಸಾಮಿ ಸಾಮಿ’ ಸ್ಟೆಪ್ ಬೇಸರ ಬಂದಿದೆ, ಅದಕ್ಕೆ ಅವರು ಮುಂದಿನ ದಿನಗಳಲ್ಲಿ ಇದನ್ನು ಮಾಡದಿರಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಈ ರೀತಿ ಹೇಳಿರಬಹುದು’ ಎಂದು ಕೆಲವರು ಊಹಿಸಿದ್ದಾರೆ. ಕೆಲವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳ ಬಗ್ಗೆ ತೋರುವ ಪ್ರೀತಿ ಬಗ್ಗೆಯೂ ಅನೇಕರಿಗೆ ಖುಷಿ ಇದೆ. ರಶ್ಮಿಕಾ ಮಂದಣ್ಣ ಅವರು ಈ ವರ್ಷದ ಆರಂಭದಲ್ಲೇ ಎರಡು ಯಶಸ್ಸು ಕಂಡಿದ್ದಾರೆ. ‘ವಾರಿಸು’ ಸಿನಿಮಾ ಯಶಸ್ಸು ಕಂಡಿದೆ. ತಮಿಳಿನಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ದಳಪತಿ ವಿಜಯ್ಗೆ ಜೊತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಅನಿಮಲ್’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.