Oct 6, 2022, 2:11 PM IST
ತೆಲುಗು ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ರಾವಣ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ನಡುವೆ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಈವೆಂಟ್‌ನ ಕೆಲವು ಸುಂದರ ಕ್ಷಣಗಳ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಭಾಸ್ ಮತ್ತು ಕೃತಿ ಸನೊನ್ ಜೋಡಿ ಈಗಾಗಲೇ ಅಭಿಮಾನಿಗಳ ಹೃದಯ ಗೆದ್ದಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಪ್ರಭಾಸ್ ಜೊತೆ ಕೃತಿ ಹೆಸರು ವೈರಲ್ ಆಗಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ಹೀಗಿರುವಾಗ ಪ್ರಭಾಸ್‌ಗೆ ಬೆವರು ಒರೆಸಲು ತನ್ನದೇ ದುಪಟ್ಟಾ ನೀಡುವ ಮೂಲಕ ಮತ್ತೆ ಕೃತಿ-ಪ್ರಭಾಸ್ ಹೆಸರು ವೈರಲ್ ಆಗಿದೆ. ಆದಿಪುರುಷ್ ಟೀಸರ್ ರಿಲೀಸ್ ಈವೆಂಟ್‌ನಲ್ಲಿ ಪ್ರಭಾಸ್, ಓಂ ರಾವುತ್, ಕೃತಿ ಸನೊನ್ ನಿಂತಿದ್ದರು. ಸಿಕ್ಕಾಪಟ್ಟೆ ಸೆಕೆಯಿಂದ ಪ್ರಭಾಸ್ ಬೆವರುತ್ತಿದ್ದರು. ಮುಖದಲ್ಲಿ ಬೆವರು ಇಳಿದು ಹೋಗುತ್ತಿತ್ತು. ಪ್ರಭಾಸ್ ತನ್ನ ಕೈಯಲ್ಲೇ ಬೆವರು ಒರೆಸಿಕೊಳ್ಳುತ್ತಿದ್ದರು. ಕೃತಿ ಪ್ರಭಾಸ್ ಮುಖವನ್ನು ನೋಡುತ್ತಿದ್ದರು. ಪ್ರಭಾಸ್ ಪಕ್ಕನೆ ಇದ್ದ ಕೃತಿ ತನ್ನ ದುಪಟ್ಟಾವನ್ನು ಬೆವರು ಒರೆಸಿಕೊಳ್ಳಿ ಎಂದು ನೀಡಿದರು. ಈ ಕ್ಯೂಟ್ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದ್ದು ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment