
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಈ ಬಾರಿ ಪದ್ಮಭೂಷಣ ಪ್ರಶಸ್ತಿ ಪಡೆದಿರೋ ಅಜಿತ್ ಪ್ರೆಸಿಡೆಂಟ್ ಕೈಯಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಅತ್ತ ಪದ್ಮಪ್ರಶಸ್ತಿ ಪಡೆದು ಹೆಮ್ಮೆ ಪಡುವ ಹೊತ್ತಲ್ಲೇ ಇತ್ತ ಕಾಲಿವುಡ್ನಲ್ಲಿ ಅಜಿತ್ ಕುರಿತ ವಿವಾದವೊಂದು ಹುಟ್ಟಿಕೊಂಡಿದೆ.
ನಟಿ ಹೀರಾ, ಅಜಿತ್ ಬಗ್ಗೆ ಮಾಡಿರೋ ಹಳೆಯ ಆರೋಪಗಳು ಮತ್ತೆ ಸದ್ದು ಮಾಡ್ತಾ ಇದ್ದು ಪದ್ಮಪ್ರಶಸ್ತಿ ವಿಜೇತ ಅಜಿತ್ಗೆ ಮುಜುಗರ ಸೃಷ್ಟಿಸಿವೆ. ಕಾಲಿವುಡ್ ಸ್ಟಾರ್ ನಟ , ತಲಾ ಅಜಿತ್ ಕುಮಾರ್ ಪದ್ಮಭೂಷಣ ಪ್ರಶಸ್ತಿಯನ್ನ ಸ್ವೀಕಾರ ಮಾಡಿದ್ದಾರೆ. ಸೋಮವಾರ ರಾಷ್ಟ್ರಪ್ರಶಸ್ತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಉಳಿದೆಲ್ಲಾ ಸಾಧಕರ ಜೊತೆಗೆ ಅಜಿತ್ ಕೂಡ ರಾಷ್ಟ್ರಪತಿಗಳಿಂದ ಪ್ರಶಸ್ವಿಯನ್ನ ಸ್ವೀಕಾರ ಮಾಡಿದ್ದಾರೆ. ಹೌದು ಪ್ರಶಸ್ತಿ ಸಿಕ್ಕಿರೋ ಈ ಸಮಯವನ್ನ ಸಂಭ್ರಮಿಸುವ ಪರಿಸ್ಥಿತಿಯಲ್ಲಿ ಅಜಿತ್ ಇಲ್ಲ. ಸದ್ಯ ತಲಾ ವಿಚಿತ್ರ ತಳಮಳದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಗೌರವ ಮತ್ತೊಂದು ಕಡೆಗೆ ವಿವಾದ ಎರಡನ್ನೂ ಹೇಗೆ ಸ್ವೀಕರಿಸೋದು ಅಂತ ಗೊತ್ತಾಗದೇ ಅಜಿತ್ ಕಂಗಾಲಾಗಿದ್ದಾರೆ. ಅಷ್ಟಕ್ಕೂ ಅಜಿತ್ನ ಹೀಗೆ ಅಡಕತ್ತರಿಯಲ್ಲಿ ಸಿಲುಕಿಸಿರೋದು ಅವರದ್ದೇ ಹಳೆಯ ಪ್ರೇಮಪ್ರಕರಣ.
ಹೀರಾ ರಾಜಗೋಪಾಲ್ ಹೆಸರು ಕೇಳಿದ್ರೆ 1990ರ ದಶಕದ ಸಿನಿಪ್ರಿಯರ ಕಿವಿ ನೆಟ್ಟಗಾಗುತ್ವೆ. ಹೀರಾ ತಂದೆ ಮಿಲಿಟರಿಯಲ್ಲಿ ಇದ್ದವರು.ದೇಶದ ಬೇರೆ ಬೇರೆ ಕಡೆ ವಿಧ್ಯಾಭ್ಯಾಸ ಮಾಡಿದ್ದ ಹೀರಾ ಮಾಡೆಲಿಂಗ್ ಮಾಡ್ತಾ ಇದ್ರು. ಬಳಿಕ ಸಿನಿಇಂಡಸ್ಟ್ರಿಗೆ ಬಂದು ಕಿಚ್ಚು ಹಚ್ಚಿದ್ರು. ತಮಿಳು, ತೆಲುಗು, ಮಲಯಾಳಂ, ಹಿಂದಿಯ ಹಲವು ಹಿಟ್ ಚಿತ್ರಗಳಲ್ಲಿ ಮಿಂಚಿರೋ ಈ ಬ್ಯೂಟಿ ಕನ್ನಡದಲ್ಲೂ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆ ನಿರ್ದೇಶನದ ಕಲಾವಿದ ಚಿತ್ರದಲ್ಲಿ ನಟಿಸಿದ್ದು ಇದೇ ಹೀರಾ. ರವಿಮಾಮ ‘ಓ ತುಂಟಿಯೇ ಗೋರಂಟಯೇ ಅಂತ ವರ್ಣಿಸಿದ್ದು ಈಕೆಯನ್ನೇ.