May 26, 2023, 10:58 AM IST
ಹನ್ಸಿಕಾ ಮೋಟ್ವಾನಿ ಬಹುಭಾಷಾ ನಟಿ. ಕನ್ನಡವೂ ಸೇರಿದಂತೆ ತೆಲುಗು ತಮಿಳೂ ಹಿಂದಿ ಹಲವು ಭಾಷೆಗಳಲ್ಲಿ ನಟಿಸಿದ ಚೆಲುವೆ. ಇತ್ತೀಚೆಗಷ್ಟೆ ವಿವಾಹವಾಗಿರುವ ಹನ್ಸಿಕಾ ತನ್ನ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಶಾಕಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿದ್ದೇನೆ ಎಂದು ಹೇಳಿದ್ದರು. ಅಲ್ಲು ಅರ್ಜುನ್ ಅಭಿನಯದ ‘ದೇಶಮುದುರು’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಸೂಪರ್ ಸಕ್ಸಸ್ ಪಡೆದ ಹನ್ಸಿಕಾಗೆ ತೆಲುಗಿನಲ್ಲಿ ಹಲವು ಆಫರ್‌ಗಳು ಬಂದಿವೆ.
ಟಾಪ್ ಹೀರೋಗಳ ಜೊತೆಯೂ ನಟಿಸಿದ್ದಾರೆ. ಹನ್ಸಿಕಾ ತೆಲುಗಿಗಿಂತ ಹೆಚ್ಚು ತಮಿಳು ಸಿನಿಮಾ ಮಾಡಿದ್ದಾರೆ. ಆದರೆ ಇತೀಚೆಗಿನ ಇಂಟರ್ವ್ಯೂನಲ್ಲಿ ಹನ್ಸಿಕಾ ಹೇಳಿಕೆ ಅವರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ‘ತೆಲುಗಿನಲ್ಲಿ ಒಬ್ಬ ಹೀರೋ ತನಗೆ ತುಂಬಾ ಕಿರಿಕಿರಿ ಮಾಡುತ್ತಿದ್ದ. ಅವರಿಂದ ಕಾಸ್ಟಿಂಗ್ ಕೌಚ್ ಎದುರಿಸಿದ್ದೆ’ ಎಂದು ಅವರು ಹೇಳಿದ್ದರು. ಆದರೆ, ಆ ಹೀರೋ ಯಾರು ಎಂಬುದನ್ನು ಮಾತ್ರ ಹೇಳಿಲ್ಲ. ಇದೀಗ ಯಾರಿರಬಹುದು ಎಂದು ಅವರು ನಟಿಸಿದ ಎಲ್ಲ ತೆಲುಗು ಹೀರೋಗಳನ್ನು ಅನುಮಾನದಿಂದ ನೋಡುತ್ತಿದ್ಧಾರೆ.