'ಕಾಮಿಡಿ ವಿತ್ ಕಪಿಲ್ ಶರ್ಮಾ' ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗುತ್ತಿದ್ದಾರೆ. ವಿಡಿಯೋ ರಿಲೀಸ್ ಆಗಿದೆ.
ಬಾಲಿವುಡ್ ಕಿರುತೆರೆಯ ಅತ್ಯಂತ ಜನಪ್ರಿಯ ಕಪಿಲ್ ಶರ್ಮಾ ಕಾಮಿಡಿ ಕಾರ್ಯಕ್ರಮಕ್ಕೆ ಹೋಗೋದು ಹಲವು ಸೆಲೆಬ್ರೆಟಿಗಳು ಕನಸು. ಹಿಂದಿಯಲ್ಲಿ ಕ್ವಾಲಿಟಿ ಪ್ರೋಗ್ರಾಂ ಯಾವ್ದಾದ್ರು ಇದ್ರೆ ಅದು ಕಪಿಲ್ ಶರ್ಮಾ ಶೋ ಅನ್ನೋ ಹೆಗ್ಗಳಿಗೆ ಇದೆ. ಇದೀಗ ಈ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪಾರ್ಟಿಸಿಪೆಟ್ ಮಾಡುತ್ತಿದ್ದಾರೆ. ಬರೀ ಬಾಲಿವುಡ್ ಸೆಲೆಬ್ರೆಟಿಗಳೇ ಹೋಗೋ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಬಿಟ್ರೆ ಮತ್ತಿನ್ಯಾವ ಕನ್ನಡದ ಸ್ಟಾರ್ಸ್ ಹೋಗಿಲ್ಲ. ಈಗ ಆ ಗಣೇಶ್ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯಾದ ನಂಬರ್ ಒನ್ ಕಾರ್ಯಕ್ರಮ ಕಪಿಲ್ ಶರ್ಮಾ ಶೋಗೆ ಗೋಲ್ಡನ್ ಸ್ಟಾರ್ ಗಣೇಶ್ ಹೊರಡೋ ವಿಡಿಯೋ ಒಂದು ರಿವೀಲ್ ಆಗಿದೆ. ಸಿಸಿಎಲ್ ಆಡೋ ಸ್ಟಾರ್ ಆಟಗಾರರನ್ನು ಕಪಿಲ್ ಶರ್ಮಾ ಸಂದರ್ಶನ ಮಾಡುತ್ತಿದ್ದಾರೆ. ಆ ಸಂದರ್ಶನದಲ್ಲಿ ಸೋನು ಸೂದ್, ಸುಧೀರ್ ಬಾಬು ಹಾಗೂ ಕರ್ನಾಟಕದಿಂದ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಇರ್ತಾರೆ. ಮಂದಿನ ವಾರ ಈ ಕಾರ್ಯಕ್ರಮ ಪ್ರಸಾರ ಆಗ್ತಿದೆ.