ಧುಮ್ಮಿಕ್ಕುತ್ತಿದೆ ಹಿಮಾವತ್: ಚಿತ್ರದುರ್ಗಕ್ಕೆ ಹೋದ್ರೆ ಕೋಟೆ ಜತೆಗೆ ಫಾಲ್ಸ್ ನೋಡ್ರಿ..!

Oct 24, 2019, 4:27 PM IST

ಚಿತ್ರದುರ್ಗ, [ಅ.24]: ಪಶ್ಚಿಮ ಘಟ್ಟಗಳ ಜಲಪಾತಗಳನ್ನೇ ಮೀರಿಸೋ ಅಪರೂಪದ ಜಲಪಾತವೊಂದು ಸತತ ಬರಗಾಲಕ್ಕೆ ತುತ್ತಾದ ಜನರ ಮೊಗದಲ್ಲಿ ಎಲ್ಲಿಲ್ಲದ ಸಂತಸವನ್ನ ಉಂಟುಮಾಡಿದೆ.  ಈ ಅಪರೂಪದ ಜಲಪಾತಗಳ ಸೃಷ್ಟಿಯ ಸೊಬಗನ್ನ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡು ಇತ್ತ  ಹರಿದು ಬರ್ತಿದೆ. 

ಚಿತ್ರದುರ್ಗ : ಭಾರಿ ಮಳೆಗೆ ಬೆಟ್ಟ ಕುಸಿದರೂ ಅಚ್ಚರಿ ರೀತಿಯಲ್ಲಿ ಉಳಿದ ಗರ್ಭಗುಡಿ

ಹೌದು...ಕೋಟೆನಾಡು ಚಿತ್ರದುರ್ಗ ಕಳೆದ ಏಳೆಂಟು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿತ್ತು. ಆದ್ರೆ  ಕಳೆದ ಒಂದು ತಿಂಗಳಿಂದ ಎಡೆಬಿಡದೆ ಸುರಿದ ವರುಣನ ಕೃಪೆಯಿಂದಾಗಿ ಜಿಲ್ಲೆಯಲ್ಲಿ ಬತ್ತಿ ಬರಿದಾಗಿದ್ದ ಕೆರೆ ಕಟ್ಟೆಗಳು ಸಂಪೂರ್ಣ ಬರ್ತಿಯಾಗಿವೆ. 

ಅಲ್ಲದೆ ಜೋಗಿ ಮಟ್ಟಿ ಅರಣ್ಯ ಪ್ರದೇಶದ ಮಧ್ಯೆ ಇರುವ ಐತಿಹಾಸಿಕ ಖ್ಯಾತಿಯ ಹಿಮಾವತ್ ಕೇದಾರದಲ್ಲಿ ಅಪರೂಪದ ಜಲಪಾತಗಳು ಸೃಷ್ಟಿಯಾಗಿವೆ. ಹೀಗಾಗಿ ಎಲ್ಲೆಂದರಲ್ಲಿ ದುಮ್ಮಿಕ್ಕಿ ಹರಿಯುತ್ತಿದೆ ಕೇದಾರ ಫಾಲ್ಸ್. ಪಶ್ಚಿಮ ಘಟ್ಟಗಳ ಜಲಪಾತಗಳನ್ನೇ ಮೀರಿಸೋ ಅಪರೂಪದ ಜಲಪಾತವನ್ನು ವಿಡಿಯೋನಲ್ಲಿ ಕಣ್ತುಂಬಿಕೊಳ್ಳಿ.