Asianet Suvarna News Asianet Suvarna News

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎ4 ಆರೋಪಿ ರವಿ ಮಕ್ಕಳ ಶಿಕ್ಷಣಕ್ಕೆ ಭೋವಿ ಶ್ರೀ ನೆರವು


ಮೊದಲ ಮಗ ಚಿನ್ಮಯ್ ಮೂರನೇ ತರಗತಿಯಲ್ಲಿ ಶಿಕ್ಷಣ
UKG ಓದುತ್ತಿದ್ದ ಎರಡನೇ‌ ಮಗ ಕಿಶೋರ್ ಗೆ ಉಚಿತ ಶಿಕ್ಷಣ
ಚಿತ್ರದುರ್ಗದ  SJM ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದ ಮಕ್ಕಳು

ದರ್ಶನ್ (Darshan)  ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಎ4 ಆರೋಪಿ ರವಿ(accused A4 Ravi) ಮಕ್ಕಳ(Children) ಶಿಕ್ಷಣಕ್ಕೆ(Education) ಭೋವಿ ಶ್ರೀ(Bhovi Shri) ನೆರವಾಗಿದ್ದಾರೆ. ಭೋವಿ ಗುರುಪೀಠದ ಶ್ರೀಗಳಿಂದ ರವಿ ಕುಟುಂಬಕ್ಕೆ ಆಸರೆಯನ್ನು ಒದಗಿಸಲಾಗಿದೆ. ಈ ಶಿಕ್ಷಣ ಸಂಸ್ಥೆಯಿಂದ ಆರೋಪಿ ರವಿಯ ಇಬ್ಬರು ಗಂಡು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಮೊದಲ ಮಗ ಚಿನ್ಮಯ್ 3ನೇ ತರಗತಿ ಓದುತ್ತಿದ್ದು, ಎರಡನೇ ಮಗ ಕಿಶೋರ್‌ ಯುಕೆಜಿಯಲ್ಲಿ ಓದುತ್ತಿದ್ದಾನೆ. ರವಿ ಅರೆಸ್ಟ್ ಆಗಿದ್ದರಿಂದ ಶಾಲೆಗೆ ಕಳಿಸಲು ಪತ್ನಿ ಕವಿತಾ ಹಿಂದೇಟು ಹಾಕಿದ್ದರು. ಆರೋಪಿ ರವಿ ಅರೆಸ್ಟ್ ಆದಾಗನಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿತ್ತು. ಮಕ್ಕಳನ್ನು ಓದಿಸಲು ಹಣವಿಲ್ಲ ಎಂದು ಅಸಹಾಯಕರಾಗಿದ್ದ ಕವಿತಾ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉಚಿತ ಶಿಕ್ಷಣ ನೀಡಲು ಶ್ರೀಗಳು ನಿರ್ಧಾರ ಮಾಡಿದ್ದಾರೆ. SJS ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧಾರಿಸಲಾಗಿದ್ದು, ಭೋವಿ ಗುರುಪೀಠದ ಆಶ್ರಯದಲ್ಲಿರುವ ಶ್ರೀ ಜಗದ್ಗುರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆ.

ಇದನ್ನೂ ವೀಕ್ಷಿಸಿ:  ಕಾಮಾಕ್ಷಿಪಾಳ್ಯ ಪೊಲೀಸರು ಇನ್‌ಸ್ಟಾಗ್ರಾಂ ಕಂಪನಿಗೆ ಪತ್ರ ಬರೆದಿದ್ದೇಕೆ..? ಮೆಸೇಜ್ ರಿಟ್ರೀವ್‌ಗೆ ಪೊಲೀಸರ ಯತ್ನ

Video Top Stories