Asianet Suvarna News Asianet Suvarna News

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ನಿವಾಸದಲ್ಲಿ ಮಹಜರು ನಡೆಸಿದ ಖಾಕಿ!

ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು ಚಿತ್ರದುರ್ಗದಲ್ಲಿ ನಾಲ್ವರು ಆರೋಪಿಗಳ ನಿವಾಸಲ್ಲಿ ಮಹಜರು ನಡೆಸಿ, ಹಣ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗ: ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ(Chitradurga) ನಾಲ್ವರು ಆರೋಪಿಗಳ ನಿವಾಸಲ್ಲಿ ಮಹಜರ್ ಮಾಡಲಾಗಿದೆ. ರಾಘವೇಂದ್ರ, ಜಗದೀಶ್, ಅನು, ರವಿಶಂಕರ್ ಮಹಜರು ಅಂತ್ಯವಾಗಿದೆ. ಆರೋಪಿ ರಾಘವೇಂದ್ರ ಮನೆಯಲ್ಲಿ 4.5ಲಕ್ಷ ಹಣ ಸೀಜ್ ಮಾಡಲಾಗಿದೆ. ಬೆಂಗಳೂರಿನ(Bengaluru) ಗೋವಿಂದರಾಜನಗರ ಪೊಲೀಸರಿಂದ ಹಣ ಸೀಜ್ ಮಾಡಲಾಗಿದೆ. ಅಲ್ಲದೇ ಕಾರನ್ನು ಸಹ ಸೀಜ್‌ ಮಾಡಲಾಗಿದೆ. ರಾಘವೇಂದ್ರ ಮನೆಯಲ್ಲಿ ಸುಮಾರು 2 ಗಂಟೆಗಳ ಕಾಲ ಮಹಜರು ಮಾಡಲಾಗಿದೆ. ಬೆಂಗಳೂರಿನ CPI ಸುಬ್ರಹ್ಮಣ್ಯ ನೇತೃತ್ವದಲ್ಲಿ ಮಹಜರು ನಡೆಯಿತು.ಕಿಡ್ನ್ಯಾಪ್‌ ಬಳಿಕ ಕಾರನ್ನು ಬಾಡಿಗೆಗೆ ಎಂದು ಬೇರೆಯವರಿಗೆ ಕಳುಹಿಸಲಾಗಿದೆ. ಇನ್ನೂ 9ನೇ ಆರೋಪಿ ರಾಜು @ ಧನರಾಜ್​ ಬಂಧನ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ: ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Video Top Stories