ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲೆಕ್ಸಸ್ ಭಾರಿ ಗಮನಸೆಳೆಯುತ್ತಿದೆ. ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನ ಜೊತೆಗೆ ಇದೀಗ ಲೆಕ್ಸಸ್ RX SUV ಕಾರು ಅನಾವರಣ ಮಾಡಿದೆ. ಭಾರತದಲ್ಲಿ RX ಕಾರಿನ ಬುಕಿಂಗ್ ಕೂಡ ಆರಂಭಗೊಂಡಿದೆ.
ನವದೆಹಲಿ(ಜ.13): ಐಷಾರಾಮಿ ಕಾರು ತಯಾರಕ ಕಂಪನಿ ಲೆಕ್ಸಸ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ. ಲೆಕ್ಸಸ್ ಇದೀಗ ಭಾರತದ ಮಾರುಕಟ್ಟೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಇದಕ್ಕಾಗಿ ಲೆಕ್ಸಸ್ RX ಎಸ್‌ಯುವಿ ಕಾರನ್ನು ಭಾರತದಲ್ಲಿ ಅನಾವರಣ ಮಾಡಿದೆ. ದೆದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋದಲ್ಲಿ ಈ ಕಾರು ಅನಾವರಣಗೊಂಡಿದೆ. ಇದರ ಜೊತೆಗೆ ಬುಕಿಂಗ್ ಕೂಡ ಆರಂಭಿಸಲಾಗಿದೆ. ಆಡಿ Q7 ಹಾಗೂ ಮರ್ಸಡಿಸ್ ಬೆಂಜ್ GLS ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಲೆಕ್ಸಸ್ RX ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. RX350h ಲೆಕ್ಸಸ್ ಹೈಬ್ರಿಡ್ ಹಾಗೂ RX500h F ಸ್ಪೋರ್ಟ್ ಕಾರು ಲಭ್ಯವಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಈ ವಿಡಿಯೋದಲ್ಲಿದೆ.