Auto Expo 2023 ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಲೆಕ್ಸಸ್ ಇವಿ ಅನಾವರಣ!

Jan 13, 2023, 3:27 PM IST

ನವದೆಹಲಿ(ಜ.13): ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ ವಿಶ್ವದ ಗಮನಸೆಳೆಯುತ್ತಿದೆ. ಜಗತ್ತಿನ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಗಳು ತಮ್ಮ ಹೊಚ್ಚ ಹೊಸ ಕಾರುಗಳನ್ನು ಇಲ್ಲಿ ಪರಿಚಯಿಸಿದೆ. ಇದರಲ್ಲಿ ಐಷಾರಾಮಿ ಲೆಕ್ಸಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಕೂಡ ಒಂದಾಗಿದೆ. ಲೆಕ್ಸಸ್ LF30 ಹಾಗೂ LF-Z ಎಲೆಕ್ಟ್ರಿಕ್‌ಫೈಡ್ ಕಾನ್ಸೆಪ್ಟ್ ಕಾರು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದೆ. ಗ್ಲಾಸ್ ಕಾಕ್‌ಪಿಟ್, ಆಟೋಮೇಟೆಡ್ ಡ್ರೈವಿಂಗ್ ಟೆಕ್ನಾಲಜಿ ಸೇರಿ ಹಲವು ವಿಶೇಷತೆ ಈ ಕಾರಿನಲ್ಲಿದೆ. ಇನ್ನು ಈ ಕಾರು ಡ್ರೈವಿಂಗ್ ಹಾಗೂ ಪ್ರಯಾಣ ಅತ್ಯಂತ ಆರಾಮದಾಯಕವಾಗಿದ್ದು, ಎಲೆಕ್ಟ್ರಿಕ್ ಮೋಟಾರ್ 4 ವ್ಹೀಲ್ ಡ್ರೈವ್ ಸಾಮರ್ಥ್ಯ ಹೊಂದಿದೆ.  ಈ ಕಾರಿನ ವಿನ್ಯಾಸ ಹಾಗೂ ಇತರ ಮಾಹಿತಿಗಳನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.