ಪೆಟ್ರೋಲ್‌ ದರ ಇಳಿಕೆ, ಪಾಕ್‌ನಿಂದಲೂ ಶ್ಲಾಘನೆ, ಮೋದಿ ಸ್ಟ್ರಾಟಜಿ ಬೇರೆನೇ..!

May 23, 2022, 5:23 PM IST

ಹಣದುಬ್ಬರದಿಂದ (Inflation) ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.  ಪಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮಹತ್ವದ ಘೋಷಣೆ ಮಾಡಿದೆ. ಪೆಟ್ರೋಲ್‌ ಮೇಲೆ 8 ರು. ಮತ್ತು ಡೀಸೆಲ್‌ ಮೇಲೆ 6 ರು. ಅಬಕಾರಿ ಸುಂಕ ಕಡಿತ ಮಾಡಲಾಗಿದೆ.

ಎಲ್ಲಾ ಭಾಷೆಗಳೂ ಭಾರತೀಯತೆಯ ಆತ್ಮ, ಮೋದಿ ಹೇಳಿಕೆ ಸ್ವಾಗತಿಸಿದ ಕಿಚ್ಚ ಸುದೀಪ್!

ಇದರಿಂದಾಗಿ, ಇತರ ತೆರಿಗೆ ದರಗಳು ಸೇರಿದಂತೆ ಪೆಟ್ರೋಲ್‌ ದರವು ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲೀಟರ್‌ಗೆ 9.5 ರು. ಮತ್ತು ಡೀಸೆಲ್‌ ದರ 7 ರು.ಗಳಷ್ಟುಕಡಿಮೆಯಾಗಲಿದೆ. ಜೊತೆಗೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದಿರುವ ಬಡ ಕುಟುಂಬಗಳ ಪ್ರತಿ ಸಿಲಿಂಡರ್‌ಗೆ 200 ರು. ಸಹಾಯಧನ (Subsidy)ಪ್ರಕಟಿಸಲಾಗಿದೆ. ಇದರಿಂದ ಬಡವರಿಗೆ ಇನ್ನು 1003 ರು. ಬದಲು ಸುಮಾರು 803 ರು. ದರದಲ್ಲಿ ಎಲ್‌ಪಿಜಿ ಲಭಿಸಲಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ದರಗಳಲ್ಲಿ ಇಳಿಕೆ, ಜನಸಾಮಾನ್ಯರಿಗೆ ರಿಲೀಫ್ ಕೊಟ್ಟ ಕೇಂದ್ರ

ಪೆಟ್ರೋಲ್‌ ದರ ಇಳಿಸಿದ ಭಾರತದ ನಿರ್ಣಯವನ್ನು ಸ್ವಾಗತಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಭಾರತ ಅನುಸರಿಸುತ್ತಿರುವ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಪ್ರಶಂಸಿಸಿದ್ದಾರೆ. ಹಾಗಾದರೆ ತೈಲದರ ಇಳಿಕೆ ಹಿಂದಿನ ಲೆಕ್ಕಾಚಾರವೇನು..? ಇಲ್ಲಿದೆ ಇನ್‌ಸೈಡ್‌ ರಿಪೋರ್ಟ್