
ಒಂದು ಕಾಲದಲ್ಲಿ ಶ್ರೀಮಂತಿಕೆಯ ಉತ್ತುಂಗದಲ್ಲಿದ್ದ ಅನಿಲ್ ಅಂಬಾನಿ ಸಾಮ್ರಾಜ್ಯವು ಇಂದು ಪತನದ ಅಂಚಿನಲ್ಲಿದೆ. 20 ಸಾವಿರ ಕೋಟಿ ರೂಪಾಯಿಗಳ ಹಗರಣ, ಶೆಲ್ ಕಂಪನಿಗಳ ಆರೋಪಗಳ ನಡುವೆ, ಅಣ್ಣ ಮುಖೇಶ್ ಅಂಬಾನಿ ಯಶಸ್ಸಿನ ಶಿಖರವೇರುತ್ತಿದ್ದರೆ, ತಮ್ಮ ಪಾತಾಳಕ್ಕೆ ಕುಸಿದಿದ್ದಾರೆ.
ನಾನೂ ಅಂಬಾನಿ ಆಗ್ಬೇಕು.. ಇದು ಭಾರತದ ಅದೆಷ್ಟೋ ಯುವಕರ ಕನಸು.. ಅಂಬಾನಿ ಅನ್ನೋದು ಭಾರತದಲ್ಲಿ ಶ್ರೀಮಂತ ಅನ್ನೋದರ ಪರ್ಯಾಯ ಪದ.. ಅಂಬಾನಿ ಆಗೋ ಕನಸಿರೋರಿಗೆ ಇನ್ನೂ ಒಂದ್ ಪ್ರಶ್ನೆ ಕೇಳ್ಬೇಕಾಗುತ್ತೆ.. ಯಾವ್ ಅಂಬಾನಿ ಆಗೋಕ್ ಹೊರಟಿದೀರಿ ಅಂತ.. ಯಾಕಂದ್ರೆ, ಒಬ್ಬ ಅಂಬಾನಿ, ಕನಸಲ್ಲೂ ಎಣಿಸದ ಸಾಮ್ರಾಜ್ಯ ಕಟ್ಟಿದ್ರು.. ಇನ್ನೊಬ್ಬ ಅಂಬಾನಿ, ಆ ಸಾಮ್ರಾಜ್ಯವನ್ನ ಮತ್ತಷ್ಟು ವಿಸ್ತರಿಸಿದ್ರು.. ಆದ್ರೆ ಇನ್ನೊಬ್ಬ ಅಂಬಾನಿ, ಆ ಕೈಗೆ ಸಿಕ್ಕಿದ ಸಾಮ್ರಾಜ್ಯವನ್ನ ಕೈಯಾರೆ ಪತನಗೊಳಿಸ್ತಾ ಇದಾರೆ.. ಆ ಕತೆ ಇಲ್ಲಿದೆ ನೋಡಿ..
ಈಗ ಅನಿಲ್ ಅಂಬಾನಿ ಸಾಮ್ರಾಜ್ಯದ ವಿರುದ್ಧ ನಡೆದಿರೋ ಈ ರೇಡ್, ಅಂಬಾನಿ ಕುಟುಂಬದ ಕಹಾನಿಲಿ ಹೊಸ ಅಧ್ಯಾಯವನ್ನೇ ಶುರು ಮಾಡಿದೆ.. ಏಷ್ಯಾದ ಅತಿ ದೊಡ್ಡ ಶ್ರೀಮಂತ ಸಾಮ್ರಾಜ್ಯವನ್ನ ಆನುವಂಶಿಕವಾಗಿ ಪಡೆದ ಅಣ್ಣ-ತಮ್ಮಂದಿರು, ಬೇರೆ ಬೇರೆ ದಾರಿ ಹಿಡಿದು, ಮಾಡಿದ್ದೇನು ಅನ್ನೋ ಕತೆ ಹೇಳುತ್ತೆ.. ಇದು ಬರೀ ಒಂದು ಕಂಪನಿ ಕಥೆಯೋ, ಅಥವಾ ಕೋಟಿಕುಳಗಳು ಏನು ಮಾಡಿದ್ರು ಅನ್ನೋ ಕತೆಯೋ ಅಲ್ಲ.. ಮಹತ್ವಾಕಾಂಕ್ಷೆ ಮತ್ತು ದೂರದೃಷ್ಟಿ, ನಮ್ಮನ್ನ ಎಲ್ಲಿಂದ ಎಲ್ಲಿಗೆ ಕರ್ಕೊಂಡ್ ಹೋಗುತ್ತೆ ಅನ್ನೋ ಅಸಲಿ ಕತೆ.. ಅಪ್ಪ ಕಟ್ಟಿದ ಕೋಟೆನಾ ಒಬ್ರು ಹೇಗೆ ಟ್ವೆಂಟಿ ಪ್ಲಸ್ ಟ್ರಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಸಿದ್ರು.. ಇನ್ನೊಬ್ರು ಹೇಗೆ 42 ಬಿಲಿಯನ್ ಡಾಲರ್ ಸಂಪತ್ತಿನಿಂದ ಕೇವಲ ಹತ್ತು ವರ್ಷಗಳಲ್ಲಿ ಏನೂ ಇಲ್ಲದಂತಾದ್ರು? ಆ ಕತೆ ನಾವೀಗ ನೋಡೋಣ..
ಒಂದು ಕಡೆ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮಿನುಗ್ತಾ ಇದಾರೆ.. ಅನ್ನೊಂದ್ ಕಡೆ ಅನಿಲ್ ಅಂಬಾನಿ ಪತನದ ಕಡೆ ಹೆಜ್ಜೆ ಇಡ್ತಾ ಇದಾರೆ.. ಈಗ ಅವರ ಬ್ಯುಸಿನೆಸ್‌ನಲ್ಲಿ ಲಾಭಾನೂ ಇಲ್ಲ, ಶ್ರೀಮಂತರ ಯಾವ ಲಿಸ್ಟ್‌ನಲ್ಲೂ ಅವರ ಹೆಸರೂ ಇಲ್ಲ.. ಅಷ್ಟೇ ಅಲ್ಲ, ಅವರು ಈಗ ತನಿಖಾ ಏಜೆನ್ಸಿಗಳ ಟಾರ್ಗೆಟ್ ಆಗಿದ್ದಾರೆ.. ಧೀರೂಭಾಯಿ ಅಂಬಾನಿಯ ಇಬ್ಬರು ಮಕ್ಕಳು ಹೇಗೆ ಬೇರೆ ಬೇರೆ ದಿಕ್ಕಿಗೆ ಹೋದ್ರು? ಒಬ್ರು ಇಷ್ಟು ಸಕ್ಸಸ್‌ಫುಲ್ ಆದ್ರೆ, ಇನ್ನೊಬ್ಬರ ಆಸ್ತಿ ಜಪ್ತಿ ಆಗ್ತಿದೆ..
ಇಲ್ಲಿಂದ ಮುಂದೆ, ಮುಕೇಶ್ ಅಂಬಾನಿ, ತಮ್ಮ ಕೋಟೆನಾ ದಿನದಿನಕ್ಕೂ ಭದ್ರಪಡೆಸಿಕೊಳ್ತಾ ಇದ್ರೆ, ಅನಿಲ್ ಅಂಬಾನಿ ಮಾತ್ರ, ಪತನದ ಕಡೆ ನಾಗಾಲೋಟ ಶುರು ಮಾಡಿದ್ರು.. ಅಷ್ಟಕ್ಕೂ ಅನಿಲ್ ಅಂಬಾನಿ ಕನಸಿನ ಕೋಟೆಗೆ ಸಿಡಿಲು ಬಡಿದಿದ್ದು ಯಾವಾಗ? ಆ ಒಂದೇ ಏಟು, ಇವತ್ತು ಈ ಸ್ಥಿತಿಗೆ ಕಾರಣವಾಯ್ತಾ?
ಒಂದು ಕಾಲ ಇತ್ತು.. ಆಗ ಅನಿಲ್ ಅಂಬಾನಿ ಮುಟ್ಟಿದ್ದೆಲ್ಲಾ ಚಿನ್ನಾ.. ಎದುರಾಳಿಗಳನ್ನೆಲ್ಲಾ ಧೂಳಿಪಟ ಮಾಡೋ ಹಾಗೆ, ದೊಡ್ಡ ದೊಡ್ಡ ಹೆಜ್ಜೆಗಳನ್ನೇ ಇಡ್ತಾ ಬಂದ್ರು.. ಆದ್ರೆ ಅವರು ಎಡವಿದ್ದು ಯಾವಾಗ ಗೊತ್ತಾ? ಇದೆಲ್ಲಾ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ.